ನವ ದೆಹಲಿ: ನವದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 18 ಮಂದಿ ಮೃತರಾಗಿದ್ದಾರೆ. ದೆಹಲಿಯಿಂದ ಪ್ರಯಾಜ್ ರಾಜ್‌ಗೆ ಹೊರಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದ ಹಿನ್ನೆಲೆ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಸಂಭವಿಸಿದೆ. ಮಹಾಕುಂಭಮೇಳಕ್ಕೆ ಹೊರಟ್ಟಿದ್ದ ನಾಲ್ವರು ಮಕ್ಕಳು, 11 ಮಹಿಳೆಯರು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ.
ಪ್ರಯಾಗ್ ರಾಜ್‌ಗೆ ಹೊರಟಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಕಾರಣ ಇಡೀ ರೈಲು ನಿಲ್ದಾಣ ತುಂಬಿ ಹೋಗಿತ್ತು. ನವದೆಹಲಿಯಿಂದ ಪ್ರಯಾಗ್ ರಾಜ್‌ಗೆ ಎರಡು ವಿಶೇಷ ರೈಲುಗಳ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದಕ್ಕೂ ಮುನ್ನ ಹೊರಡಬೇಕಿದ್ದ ಭುವನೇಶ್ವರಕ್ಕೆ ತೆರಳಬೇಕಿದ್ದ ರಾಜಧಾನಿ ಮತ್ತು ಸ್ವತಂತ್ರ್ಯ ಸೇನಾನಿ ಎಕ್ಸಪ್ರೆಸ್ ರೈಲುಗಳು ತಡವಾದ ಕಾರಣ, ಎಲ್ಲಾ ಪ್ರಯಾಣಿಕರು ಸೇರಿ ಜನಸಂದಣಿಯಾಗಿದ್ದು, ನೂಕು ನುಗ್ಗಲು ಏರ್ಪಟ್ಟಿದೆ. ಕಾಲ್ತುಳಿದಲ್ಲಿ ಈವರೆಗೂ 18 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.