ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಇಂದು ಎರಡು ಹೊಸ ಅಮೃತ್ ಭಾರತ್ ರೈಲುಗಳು ಮತ್ತು ಆರು ವಂದೇ ಭಾರತ್ ರೈಲುಗಳಿಗೆ ನವೀಕೃತ ಅಯೋಧ್ಯಾ ಧಾಮ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು.
ಹೊಸ ಅಮೃತ್ ಭಾರತ್ ರೈಲುಗಳು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್‌ಪ್ರೆಸ್ ಆಗಿ ಕಾರ್ಯಾಚರಿಸಲಿವೆ.
ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲುಗಳ ಹೊಸ ಶ್ರೇಣಿಯಾದ ಅಮೃತ್ ಭಾರತ್ ರೈಲುಗಳು “ಪುಶ್-ಪುಲ್ ತಂತ್ರಜ್ಞಾನವನ್ನು ಹೊಂದಿದ್ದು ಇದು ವೇಗವನ್ನು ಹೆಚ್ಚಿಸುವುದರ ಜೊತೆಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಒದಗಿಸಲಿದೆ. ಈ ರೈಲುಗಳಲ್ಲಿ ಉತ್ತಮ ದರ್ಜೆಯ ಆಸನಗಳು, ವಿಶಾಲ ಲಗೇಜ್ ರ್ಯಾಕ್‌ಗಳು, ಎಲ್‌ಇಡಿ ಲೈಟ್‌ಗಳು, ಸಿಸಿಟಿವಿ ಕ್ಯಾಮರಾಗಳು ಮತ್ತು ಸಾರ್ವಜನಿಕ ಮಾಹಿತಿ ವ್ಯವಸ್ಥೆ ಇರುತ್ತವೆ.
ನವೀಕರಣಗೊಂಡ ಅಯೋಧ್ಯೆ ರೈಲು ನಿಲ್ದಾಣ ಇನ್ನು ಅಯೋಧ್ಯಾ ಧಾಮ್ ರೈಲು ನಿಲ್ದಾಣ ಎಂದು ಕರೆಯಲ್ಪಡಲಿದೆ. ಈ ಮೂರು ಅಂತಸ್ತಿನ ಕಟ್ಟವನ್ನು ರೂ 240 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಇದು ಪ್ರಮಾಣೀಕೃತ ಹಸಿರು ಕಟ್ಟಡವಾಗಿದೆ ಹಾಗೂ ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ವೈಟಿಂಗ್ ಹಾಲ್‌ಗಳು, ಕ್ಲೋಕ್ ರೂಮ್‌ಗಳು ಮತ್ತು ಫುಡ್ ಪ್ಲಾಝಾಗಳನ್ನು ಹೊಂದಿದೆ.