Home ಕರ್ನಾಟಕ ಸಿಇಟಿ ವಿದ್ಯಾರ್ಥಿಗಳಿಗೆ 2 ಲಕ್ಷ ಸರ್ಜಿಕಲ್‌ ಮಾಸ್ಕ್‌ ಹಸ್ತಾಂತರ

ಸಿಇಟಿ ವಿದ್ಯಾರ್ಥಿಗಳಿಗೆ 2 ಲಕ್ಷ ಸರ್ಜಿಕಲ್‌ ಮಾಸ್ಕ್‌ ಹಸ್ತಾಂತರ

34
0

ಬೆಂಗಳೂರು:

ನಗರದ ಬನ್ನೇರುಘಟ್ಟ ರಸ್ತೆಯ ರೈನ್‌ ಬೋ ಆಸ್ಪತ್ರೆ ಹಾಗೂ ಎಇಎಸ್‌ (ಅಡ್ವಾನ್ಸ್ಡ್‌ ಎಜ್ಯುಕೇಷನಲ್‌ ಸರ್ವೀಸ್) ಸಂಸ್ಥೆ ಸೇರಿ ಈ ವರ್ಷ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯುವ ವಿದ್ಯಾರ್ಥಿಗಳಿಗೆ ಕೋವಿಡ್‌ ರಕ್ಷಣೆಗಾಗಿ 2 ಲಕ್ಷ ಸರ್ಜಿಕಲ್‌ ಮಾಸ್ಕ್‌ಗಳನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ಕೊಡುಗೆಯಾಗಿ ನೀಡಿವೆ.

ಬೆಂಗಳೂರಿನಲ್ಲಿಂದು ಈ ಸಂಸ್ಥೆಗಳ ಉನ್ನತ ಪ್ರತಿನಿಧಿಗಳು ಸಾಂಕೇತಿಕವಾಗಿ ಸರ್ಜಿಕಲ್‌ ಮಾಸ್ಕ್‌ಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, “ಖಾಸಗಿ ಆಸ್ಪತ್ರೆಗಳು ಹಾಗೂ ಸಂಘ ಸಂಸ್ಥೆಗಳು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿವೆ. ಇದು ಅತ್ಯಂತ ಸಂತಸದ ಸಂಗತಿ. ಅದರಲ್ಲೂ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರೈನ್‌ ಬೋ ಆಸ್ಪತ್ರೆ, ಬ್ರೈಟ್‌ ರೈಟ್‌ ಹಾಗೂ ಎಇಎಸ್‌ (ಅಡ್ವಾನ್ಸ್ಡ್‌ ಎಜ್ಯುಕೇಷನಲ್‌ ಸರ್ವೀಸ್) ಸಂಸ್ಥೆಗಳು ಸರ್ಜಿಕಲ್‌ ಮಾಸ್ಕ್‌ಗಳನ್ನು ದಾನ ಮಾಡಿರುವುದು ಸಾರ್ಥಕ ಕಾರ್ಯ” ಎಂದರು.

ಪರೀಕ್ಷೆ ಕಾಲದಲ್ಲಿ ವಿದ್ಯಾರ್ಥಿಗಳು ಸೋಂಕಿನಿಂದ ಪಾರಾಗಲು ಈ ಮಾಸ್ಕ್‌ಗಳು ಪರಿಣಾಮಕಾರಿಯಾಗಿ ನೆರವಾಗುತ್ತವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಎಇಎಸ್‌ ಸಂಸ್ಥಾಪಕ ನಿರ್ದೇಶಕಿ ದೀಪ್ತಿ ಅಶೋಕ್‌, ರೈನ್‌ ಬೋ ಮಕ್ಕಳ ಆಸ್ಪತ್ರೆ ಹಾಗೂ ಬ್ರೈಟ್‌ ರೈಟ್‌ನ ಉಪಾಧ್ಯಕ್ಷ ಅಕ್ಷಯ್‌ ಓಲೇಟಿ ಮುಂತಾದವರು ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here