Home Uncategorized 200 ಯುನಿಟ್ ಉಚಿತ ಘೋಷಣೆ ಬೆನ್ನಲ್ಲೆ ಜನತೆಗೆ ರಾಜ್ಯ ಸರ್ಕಾರ ಶಾಕ್: ಜುಲೈ 1ರಿಂದ ವಿದ್ಯುತ್...

200 ಯುನಿಟ್ ಉಚಿತ ಘೋಷಣೆ ಬೆನ್ನಲ್ಲೆ ಜನತೆಗೆ ರಾಜ್ಯ ಸರ್ಕಾರ ಶಾಕ್: ಜುಲೈ 1ರಿಂದ ವಿದ್ಯುತ್ ದರ ಏರಿಕೆ

67
0

ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಜೊತೆಗೆ  ರಾಜ್ಯ ಸರ್ಕಾರ ಜನತೆಗೆ ಶಾಕ್ ನೀಡಿದೆ. ಮತ್ತೆ ವಿದ್ಯುತ್‌ ದರ ಏರಿಸುವ ಮೂಲಕ ಸರಕಾರ ಮತ್ತೆ ಹೊರೆ ಏರಿದೆ. ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಜೊತೆಗೆ  ರಾಜ್ಯ ಸರ್ಕಾರ ಜನತೆಗೆ ಶಾಕ್ ನೀಡಿದೆ. ಮತ್ತೆ ವಿದ್ಯುತ್‌ ದರ ಏರಿಸುವ ಮೂಲಕ ಸರಕಾರ ಮತ್ತೆ ಹೊರೆ ಏರಿದೆ.

ಆದಾಯದ ಕೊರತೆ ಮತ್ತು ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್‌ ದರವನ್ನು ಏರಿಸಿ ಇಂಧನ ಇಲಾಖೆ  ಆದೇಶ ಹೊರಡಿಸಿದೆ. ಅದರಂತೆ, ಬೆಸ್ಕಾಂ ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್‌ಗೆ 51 ಪೈಸೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ 50 ಪೈಸೆ ಏರಿಕೆ ಮಾಡಲಾಗಿದೆ.

ಇಂಧನ ಹೊಂದಾಣಿಕೆ ವೆಚ್ಚವನ್ನು ಮರುಪಡೆಯಲು ಮಾಡಿದ ವಾರ್ಷಿಕ ಪರಿಷ್ಕರಣೆಯ ಭಾಗವಾಗಿದೆ ಎಂದು ಇಲಾಖೆ ಹೇಳಿದೆ. ಆದೇಶವು ಎಲ್ಲಾ ಎಸ್ಕಾಮ್‌ಗಳಿಗೆ ಅನ್ವಯಿಸುತ್ತದೆ.  ಇಂಧನ ಹೊಂದಾಣಿಕೆ ವೆಚ್ಚದಲ್ಲಿ ಜುಲೈ 1 ರಿಂದ ಡಿಸೆಂಬರ್ 31, 2023 ರವರೆಗೆ ಬದಲಾವಣೆ ಇರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ, ಜುಲೈ 1 ರಿಂದ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಮೆಸ್ಕಾಂ (ಮಂಗಳೂರು) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್‌ಗೆ 47 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್‌ಗೆ 46 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.

ಸೆಸ್ಕಾಂ (ಮೈಸೂರು) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್‌ಗೆ 41 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಹೆಸ್ಕಾಂ (ಹುಬ್ಬಳ್ಳಿ-ಧಾರವಾಡ) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್‌ಗೆ 50 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ.

ಗೆಸ್ಕಾಂ (ಕಲಬುರಗಿ) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್‌ಗೆ 34 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್‌ಗೆ 33 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಈ ನಡುವೆ ಬೆಸ್ಕಾಂ ಕೂಡ ವಿದ್ಯುತ್ ದರ ಪರಿಷ್ಕರಿಸಲು ಕೆಇಆರ್‌ಸಿ ಮುಂದೆ ಪರಿಶೀಲನಾ ಅರ್ಜಿ ಸಲ್ಲಿಸಿದೆ.

LEAVE A REPLY

Please enter your comment!
Please enter your name here