ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್,ಸಿ ಮಹಾದೇವಪ್ಪ ಅವರ ಬೀದಿ ನಾಯಿಗಳು ಹೇಳಿಕೆಗೆ ಎಂಎಲ್ ಸಿ ಹಾಗೂ ಡಿಕೆ ಶಿವಕುಮಾರ್ ಸಂಬಂಧಿ ರವಿ ತಿರುಗೇಟು ನೀಡಿದ್ದಾರೆ.
ಮಹಾದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ನಾನು ದೊಡ್ಡವನಲ್ಲ,ಆದರೆ 2018 ರಲ್ಲಿ ಕಾಂಗ್ರೆಸ್ ಪಕ್ಷ 90 ಸೀಟುಗಳನ್ನು ಗೆಲ್ಲಲು ಮಹಾದೇವಪ್ಪ ಅವರು ತನು, ಮನ ಧನ ಸೇರಿ ಎಲ್ಲವನ್ನೂ ಧಾರೆ ಎರೆದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮಹದೇವಪ್ಪಾ ಅವರದ್ದು ಬಹು ದೊಡ್ಡ ವ್ಯಕ್ತಿತ್ವ, ಬಹಳ ದೊಡ್ಡ ಲೀಡರ್, ನಾವು ಕಾಂಗ್ರೆಸ್ಸಿರು ಅವರನ್ನು ನೆನಪಿಸಿಕೊಳ್ಳಬೇಕು. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಮಹಾದೇವಪ್ಪ ಅವರು ತ್ಯಾಗದಿಂದ ಅಷ್ಟು ಸೀಟು ಬಂತು, ಇಲ್ಲದಿದ್ದರೇ ನಮಗೆ ಅಷ್ಟು ಸೀಟು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
