ಬೆಂಗಳೂರು:
ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿದ ಶಿಫಾರಸ್ಸಿನ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು ಅದರಂತೆ ಪ್ರತಿ ಜಿಲ್ಲೆಗೆ ಕನಿಷ್ಠ ಒಬ್ಬರನ್ನು ಪರಿಗಣಿ ಸಲಾಗಿದೆ.ಕ್ರೀಡಾ ಕ್ಷೇತ್ರ ಹೊರತುಪಡಿಸಿ ಉಳಿದವರನ್ನು 60ವಯೋಮಾನ ಮೀರಿದವರನ್ನು ಆಯ್ಕೆ ಮಾಡಿ ದ್ದೇವೆ.ಸಾಮಾಜಿಕ ನ್ಯಾಯ,ವೈವಿದ್ಯತೆಗೆ ಆದ್ಯತೆ ನೀಡಲಾಗಿದೆ. ಕೃಷಿ,ಶಿಕ್ಷಣ, ಸಮಾಜ ಸೇವೆ ಸೇರಿದಂತೆ ವೈವಿಧ್ಯ ತೆಯ,ಪ್ರಾದೇಶಿಕ ನ್ಯಾಯವನ್ನು ಪ್ರಶಸ್ತಿ ನೀಡುವಾಗ ಪರಿಗಣಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
ವಿಧಾನ ಸೌಧದಲ್ಲಿಂದು 2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿ ದ ಅವರು,ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸಿದ್ಧಪಡಿಸಿರುವ ಪಟ್ಟಿ ಪ್ರಕಟಿಸಿದರು.ಕೋವಿಡ್ ಹಿನ್ನೆಲೆಯಲ್ಲಿ ಈ ಭಾರಿ ಸರಳ ರಾಜ್ಯೋತ್ಸವ ಆಚರಣೆ ಮಾಡಲು ತೀರ್ಮಾನಿಸಲಾಗಿದೆ.ಈ ವರ್ಷ 65 ನೇ ರಾಜ್ಯೋತ್ಸವ ಹಿನ್ನಲೆಯಲ್ಲಿ 65 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸಮಿತಿ ರಚನೆಯಾದಾಗ 1788 ಅರ್ಜಿಗಳ ಪರಿಶೀಲನೆ ನಡೆಸಲಾಗಿತ್ತು.ಅವುಗಳಲ್ಲಿ ಪರಿಶೀಲನೆ ನಡೆಸಿ 130 ಕ್ಕೆ ಇಳಿಸಿ ಮುಖ್ಯಮಂತ್ರಿ ಅವರಿಗೆ ಸಮಿತಿ ಸಲ್ಲಿಸಿತ್ತು.ಬೆಂಗಳೂರು ನಗರದ ಜನಸಂಖ್ಯೆ ಹಾಗೂ ಜನ ಸಾಂಧ್ರತೆಯ ಆಧಾರದ ಮೇಲೆ ಪ್ರಶಸ್ತಿ ಪಡೆದಿರುವವರ ಸಂಖ್ಯೆಯೂ ಹೆಚ್ಚಿರುವುದರಿಂದ ಸಿಂಹ ಪಾಲು ನಗರದಲ್ಲಿರುವವರಿಗೆ ದಕ್ಕಿದೆ ಎಂದರು.ಯಾವುದೇ ಅರ್ಜಿ ಹಾಕದವರನ್ನೂ ಹುಡುಕಿ ಪ್ರಶಸ್ತಿ ನೀಡುವ ಕೆಲಸ ಮಾಡಲಾಗಿದೆ.ಅರ್ಹತೆ ಯನ್ನು ಕಡಿಗಣಿಸಿಲ್ಲ.ಶಿಫಾರಸ್ಸಿಗಿಂತ ಅರ್ಹತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ.ಹೀಗಾಗಿ ಬಹಳ ಜನರಿಗೆ ಅರ್ಹತೆ ಇದ್ದರೂ ಆಯ್ಕೆಯಾಗಲು ಸಾಧ್ಯವಾಗಿಲ್ಲ ಎಂದುಅವರು ವಿವರಿಸಿದರು.
ಕೆಲವು ತಮಗೆ ಪ್ರಶಸ್ತಿ ನೀಡಿಲ್ಲವೆಂದು ನ್ಯಾಯಾಲಯಕ್ಕೆ ಹೋಗಿ ಅರ್ಹತೆಯನ್ನು ಒರೆಗೆ ಹಚ್ಚಿದವರಗೂ ಪ್ರಶಸ್ತಿ ನೀಡಲು ಆಗಿಲ್ಲ.ನವೆಂಬರ್ 7 ರಂದು ಬೆಳಿಗ್ಗೆ 11ಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಸರಳ ಕಾರ್ಯಕ್ರಮ ನಡೆಸಿ ಅಂದು ಪ್ರಶಸ್ತಿ ಪ್ರಧಾನ ಮಾಡಲು ತೀರ್ಮಾನಿಸಲಾಗಿದೆ.ಚುನಾವಾಣಾ ಆಯೋಗ ಪ್ರಶಸ್ತಿ ನೀಡಿದೆ ಆದರೂ ನವೆಂಬರ್ 7 ರಂದು ನೀಡಲಾಗುವುದು ಎಂದರು.
ಯುವ ಬ್ರಿಗೇಡ್ ಸಮಾಜ ಸೇವೆಯಲ್ಲಿ ತೊಡಗಿದೆ.ಕಲ್ಯಾಣಿಗಳನ್ನು ಪುನರುಜ್ಜೀವನ ಮಾಡುವುದರಿಂದ ಹಿಡಿದು ಸಾಮಾಜಿಕ.ಕೆಲಸ.ಮಾಡಿದೆ.ಆರ್ ಎಸ್ಎಸ್ ನವರಿಗೆ ಪ್ರಶಸ್ತಿ ಕೊಡಬಾರದು ಎಂದು ಯಾವುದೇ ನಿಯಮ ಇಲ್ಲ .ನಿಯಮ ಮೀರಿ ಕೊಡುವಂತೆ ಯಾರೂ ಒತ್ತಡ ಹೇರಿಲ್ಲ ಎಂದು ಇದೇ ವೇಳೆ ಯುವ ಬ್ರಿಗೇಡ್ ಗೆ ಪ್ರಶಸ್ತಿ ನೀಡಿ ರುವುದನ್ನು ಸಮರ್ಥಿಸಿಕೊಂಡರು.
ಪ್ರಶಸ್ತಿ1 ಲಕ್ಷ ರೂ 25 ಗ್ರಾಂ ಚಿನ್ನ ಇದೆ.ರಾಜ್ಯೋತ್ಸವ ನಿಲ್ಲಿಸುವುದಿಲ್ಲ ಎಂದ ಮೇಲೆ.ಪ್ರಶಸ್ತಿ ಏಕೆ ನಿಲ್ಲಿಸಬೇಕು ಎಂಬ ಅಭಿಪ್ರಾಯ ಬಂತು ಅದಕ್ಕೆ ನೀಡಲಾಗಿದೆ.ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಕಲಾಗ್ರಾಮದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿಲ್ಲ.ಶಾರ್ಟ್ ಸರ್ಟಿಕ್ ಬೆಂಕಿ ಹೊತ್ತಿಕೊಂಡಿದೆ ಎಂಬ ರಿಪೋರ್ಟ್ ಬಂದಿದೆ. ಯಾವುದೇ ಅಕ್ರಮ ನೆಡೆದಿರುವ ಬಗ್ಗೆ ಮಾಹಿತಿ ಬಂದಿಲ್ಲವೆಂದರು.ಈ ಬಾರಿ ಕೊರೋನಾ ಸೇನಾನಿಗಳಾಗಿರುವ ನಾಲ್ಕು ಜನ ವೈದ್ಯರಿಗೆ ಪ್ರಶಸ್ತಿ ನೀಡಲಾಗಿದೆ.ಈಗ ಸೇವೆ ಸಲ್ಲಿಸುತ್ತಿರುವವರಿಗೆ ವಯೋಮಿತಿ ಸಮಸ್ಯೆಯಾಗುತ್ತದೆ ಎಂದು ಅವರು ತಿಳಿಸಿದರು.