Home ಅಪರಾಧ 27 ಬಾರಿ ಸಂಚಾರಿ ನಿಯಮ ಉಲ್ಲಂಘನೆ: 23,000 ರೂ. ದಂಡ ವಸೂಲಿ

27 ಬಾರಿ ಸಂಚಾರಿ ನಿಯಮ ಉಲ್ಲಂಘನೆ: 23,000 ರೂ. ದಂಡ ವಸೂಲಿ

33
0
Halasuru traffic Rs 23000 penalty collected

ಬೆಂಗಳೂರು:

ನಗರದಲ್ಲಿ ಸುಮಾರು 27 ಬಾರಿ ಸಂಚಾರ ಉಲ್ಲಂಘಿಸಿದ ದ್ವಿ-ಚಕ್ರ ವಾಹನ ಮಾಲೀಕನೋರ್ವನಿಂದ ಸಂಚಾರಿ ಪೂರ್ವ ವಿಭಾಗದ ಪೊಲೀಸರು ಬರೋಬ್ಬರಿ 23,000 ರೂ. ದಂಡ ವಸೂಲಿ ಮಾಡಿದ್ದಾರೆ.

ಇಂದು ಸಂಚಾರ ಪೂರ್ವ ವಿಭಾಗದ ಹಲಸೂರು ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಿಜಿ ಮ್ಯಾಥ್ಯೂ ಅವರು ಸುಮಾರು 27 ಬಾರಿ ಸಂಚಾರ ಉಲ್ಲಂಘಿಸಿದ ಸಿ.ಕೆ.ಡಿ -8524 ದ್ವಿ-ಚಕ್ರ ವಾಹನದ ಮಾಲೀಕನಿಂದ 23,000 ರೂ. ದಂಡವನ್ನು ವಸೂಲಿ ಮಾಡಿದ್ದಾರೆ.

ದಂಡ ಕಟ್ಟಿಸಿಕೊಂಡ ಬಳಿಕ ವಾಹನ ಮಾಲೀಕನಿಗೆ ಸಂಚಾರ ಅರಿವು ತರಬೇತಿ ಪಡೆಯಲು ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here