Home Uncategorized 3ನೇ ಹಂತದ ಕೆಸಿ ವ್ಯಾಲಿ ನೀರಿನ ಶುದ್ಧೀಕರಣಕ್ಕೆ ಕ್ರಮ: ಸಚಿವ ಬೋಸರಾಜು ಭರವಸೆ

3ನೇ ಹಂತದ ಕೆಸಿ ವ್ಯಾಲಿ ನೀರಿನ ಶುದ್ಧೀಕರಣಕ್ಕೆ ಕ್ರಮ: ಸಚಿವ ಬೋಸರಾಜು ಭರವಸೆ

29
0

3ನೇ ಹಂತದ ಕೆಸಿ ವ್ಯಾಲಿ ನೀರಿನ ಶುದ್ಧೀಕರಣ ಕುರಿತು ಚರ್ಚಿಸಲು ಸಭೆ ನಡೆಸುವುದಾಗಿ ಸಚಿವ ಎನ್.ಎಸ್.ಬೋಸರಾಜು ಅವರು ಶನಿವಾರ ಭರವಸೆ ನೀಡಿದರು. ಬೆಂಗಳೂರು: 3ನೇ ಹಂತದ ಕೆಸಿ ವ್ಯಾಲಿ ನೀರಿನ ಶುದ್ಧೀಕರಣ ಕುರಿತು ಚರ್ಚಿಸಲು ಸಭೆ ನಡೆಸುವುದಾಗಿ ಸಚಿವ ಎನ್.ಎಸ್.ಬೋಸರಾಜು ಅವರು ಶನಿವಾರ ಭರವಸೆ ನೀಡಿದರು.

ನಿನ್ನೆಯಷ್ಟೇ ಸಚಿವರು ಇಲಾಖೆ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಕೆಸಿ ವ್ಯಾಲಿ ಮತ್ತು ಎಚ್‌ಎನ್ ವ್ಯಾಲಿ ನೀರಾವರಿ ಯೋಜನೆಗಳ ಅಡಿಯಲ್ಲಿ ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡನೇ ಹಂತದಲ್ಲಿ ಸಂಸ್ಕರಿಸಿ ಕೆರೆಗಳಿಗೆ ಬಿಡಲಾಗುತ್ತದೆ. ಬಿಡಬ್ಲ್ಯೂಎಸ್‌ಎಸ್‌ಬಿ ನೀರನ್ನು ಸಂಸ್ಕರಿಸುತ್ತಿದ್ದು, ಸಣ್ಣ ನೀರಾವರಿ ಇಲಾಖೆಯು ಕೆರೆಗಳಿಗೆ ನೀರು ಹರಿಸುವುದನ್ನು ನೋಡಿಕೊಳ್ಳುತ್ತಿದೆ. ಆದರೆ ಈ ನೀರನ್ನು ಇನ್ನೂ ಒಂದು ಹಂತದವರೆಗೆ ಸಂಸ್ಕರಿಸಬೇಕು ಎಂದು ಹಲವು ಆಗ್ರಹಿಸುತ್ತಿದ್ದಾರೆ.

ಬೇಡಿಕೆ ಬೆನ್ನಲ್ಲೇ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು, ಸಂಬಂಧಪಟ್ಟ ಜಿಲ್ಲೆಗಳ ಪ್ರತಿನಿಧಿಗಳು ಮತ್ತು ಬಿಡಬ್ಲ್ಯೂಎಸ್ಎಸ್ಬಿ ಉಸ್ತುವಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಸಭೆ ಆಯೋಜಿಸುವುದಾಗಿ ಹೇಳಿದ್ದಾರೆ. ಎಚ್‌ಎನ್ ವ್ಯಾಲಿ ಏತ ನೀರಾವರಿ ಯೋಜನೆಯಡಿ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ 65 ಕೆರೆಗಳನ್ನು ಮೊದಲ ಹಂತದಲ್ಲಿ ತುಂಬಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಬಾಗೇಪಲ್ಲಿ ತಾಲೂಕಿನ 24 ಕೆರೆಗಳನ್ನು ತುಂಬಿಸಲಾಗುವುದು.

ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಮೊದಲ ಹಂತದಲ್ಲಿ 38 ಕೆರೆಗಳನ್ನು ತುಂಬಿಸುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕಿದೆ ಎಂದು ಸಚಿವರು ಹೇಳಿದರು.

LEAVE A REPLY

Please enter your comment!
Please enter your name here