ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕಂದಾಯ ಇಲಾಖೆಯು ಆದಾಯವು 2022-2023ರ ಹಣಕಾಸು ವರ್ಷದಲ್ಲಿ 3,332 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ 3,088 ಕೋಟಿ ರೂ. ಆದಾಯ… ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕಂದಾಯ ಇಲಾಖೆಯು ಆದಾಯವು 2022-2023ರ ಹಣಕಾಸು ವರ್ಷದಲ್ಲಿ 3,332 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ 3,088 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.
ಬಿಬಿಎಂಪಿ ಕಂದಾಯ ಆಯುಕ್ತ ಆರ್.ಎಲ್.ದೀಪಕ್ ಮಾತನಾಡಿ, ಪಾಲಿಕೆಯು ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹದ ಮೂಲಕ 4,000 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹಿಸುವ ಗುರಿ ಹೊಂದಿರುವುದರಿಂದ ಬಿಬಿಎಂಪಿ ಆಸ್ತಿ ಸಂಗ್ರಹಣೆಯಲ್ಲಿ ಪ್ರಗತಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಆದಾಯ ಸಂಗ್ರಹ ಮೇಲೆ ಚುನಾವಣೆ ಪರಿಣಾಮ?
ಬೆಸ್ಕಾಂ ಮೀಟರ್ ರೀಡಿಂಗ್‌ಗಳನ್ನು ಪರಿಶೀಲಿಸುವುದು ಮತ್ತು ಆಸ್ತಿ ಮಾಲೀಕರಿಂದ ಸ್ವಯಂ-ಮೌಲ್ಯಮಾಪನ ತೆರಿಗೆ ವರದಿಗಳನ್ನು ಪರಿಶೀಲಿಸುವುದು ಸೇರಿದಂತೆ ಇತರೆ ಉಪಕ್ರಮಗಳ ಮೂಲಕ ಹೆಚ್ಚಿನ ಆದಾಯ ಸಂಗ್ರಹಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಪಾಲಿಕೆಯ ತೆರಿಗೆ ಸಂಗ್ರಹವು 2022-2023ರಲ್ಲಿ ಶೇಕಡ 75.13 ರಷ್ಟು ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 250 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಪಾಲಿಕೆಯು 2023-2024ರಲ್ಲಿ ಆಸ್ತಿ ತೆರಿಗೆಯನ್ನು ಮತ್ತಷ್ಟು ಹೆಚ್ಚು ಸಂಗ್ರಹಿಸಲು ಪ್ರಯತ್ನಿಸಲಿದೆ ಎಂದು ದೀಪಕ್ ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಒಂದೇ ಕಂತಿನಲ್ಲಿ ಬಾಕಿ ಪಾವತಿಸಲು ಪಾಲಿಕೆಯು ಮಾರ್ಚ್ 27 ರಿಂದ ಆರು ತಿಂಗಳವರೆಗೆ ಅವಕಾಶ ನೀಡಿದೆ. ಈ ಉಪಕ್ರಮ ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಪಾಲಿಕೆಯು 2023-2024ರಲ್ಲಿ ಹೆಚ್ಚುವರಿಯಾಗಿ 300 ಕೋಟಿಯಿಂದ 700 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.