Home Uncategorized stray dog attack | 4 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ..! ಬಾಲಕಿ...

stray dog attack | 4 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ..! ಬಾಲಕಿ ನಾಯಿಯಿಂದ ಪಾರಾಗಿದ್ದೇ ಪವಾಡ

41
0
4-year-old child miraculously escaped in stray dog attack

ದೊಡ್ಡಬಳ್ಳಾಪುರ:

ಬಯಲಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಬೀದಿನಾಯಿ ದಾಳಿ ಮಾಡಿದ್ದು, ಬಾಲಕಿಯ ಕುತ್ತಿಗೆಗೆ ಬಾಯಾಕಿದೆ, ಬೆನ್ನಿನ ಮೇಲೆ ಎರಗಿ ಬಿದ್ದಿದೆ, ಅದೃಷ್ಟವಶಾತ್ ಸಂಬಂಧಿಕರು ಅದೇ ಸಮಯಕ್ಕೆ ಅಲ್ಲಿಗೆ  ಬಂದಿದ್ದು ಬಾಲಕಿ ಪ್ರಾಣಾಪಾಯದಿಂದ ಪಾರಾಗಾಗಲು ಸಾಧ್ಯವಾಗಿದೆ.

ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯ ವಾಸವಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದ್ದು, ರಾಜೀವ್ ರವರ ನಾಲ್ಕು ವರ್ಷದ ಮಗಳು ಸ್ವೀಕೃತಿ ಮೇಲೆ ಬೀದಿ ನಾಯಿ ದಾಳಿ ಮಾಡಿದೆ, ಬಯಲಲ್ಲಿ ಮಕ್ಕಳ ಜೊತೆ ಆಟವಾಡುತ್ತಿದ್ದ ಸ್ವೀಕೃತಿ ಮನೆಯತ್ತ ಬರುತ್ತಿದ್ದಳು, ಈ ವೇಳೆ ಬೀದಿನಾಯೊಂದು ಪುಟ್ಟ ಬಾಲಕಿಯ ಮೇಲೆ ಎರಗಿದೆ, ಆಕೆಯ ಕುತ್ತಿಗೆ ಭಾಗಕ್ಕೆ ಬಾಯಾಕಿದೆ,

ಬೆನ್ನಿನ ಮೇಲೆ ಬಲವಾಗಿ ಪರಚಿದೆ, ಬಾಲಕಿಯ ಅದೃಷ್ಟಕ್ಕೆ ಅದೇ ಸಮಯಕ್ಕೆ ಸಂಬಂಧಿಕರೊಬ್ಬರು ಅಲ್ಲಿಗೆ ಬಂದಿದ್ದಾರೆ, ನಾಯಿಯಿಂದ ಬಾಲಕಿಯ ರಕ್ಷಣೆ ಮಾಡಿದ್ದಾರೆ, ಮಗಳ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ಬಗ್ಗೆ ಮಾತನಾಡಿದ  ರಾಜೀವ್,  ಒಂದು ವೇಳೆ ನಾಯಿ ಕುತ್ತಿಗೆ ಭಾಗಕ್ಕೆ ಬಾಯಾಕಿದ್ರೆ ಮಗಳ ಸ್ಥಿತಿ ಉಹಿಸಲೇ ಅಸಾಧ್ಯವಾಗಿತ್ತು ಅನ್ನುತ್ತಾರೆ,

ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ, ನಿನ್ನೆ ಶಾಂತಿನಗರದಲ್ಲಿ 5 ಜನರಿಗೆ, ರೋಜಿಪುರದಲ್ಲಿ 10 ಜನರಿಗೆ ನಾಯಿ ಹಚ್ಚಿದ ಪ್ರಕರಣಗಳು ಪತ್ತೆಯಾಗಿದೆ, ಕಳೆದ ತಿಂಗಳು 800 ಜನರಿಗೆ ನಾಯಿ ಕಚ್ಟಿದ ಪ್ರಕರಣಗಳು ಪತ್ತೆಯಾಗಿದೆ, ಬೀದಿನಾಯಿಗಳ ಉಪಟಳದಿಂದ ಜನರು ಕಂಗಲಾಗಿದ್ದಾರೆ.

ನಾಯಿಗಳ ಕಡಿವಾಣ ಹಾಕಬೇಕಿದ್ದ ನಗರಸಭೆ ಅಧಿಕಾರಿಗಳು ಕೈಕಟ್ಟಿ ಕುಳುತ್ತಿದ್ದಾರೆ, ಬೀದಿ ನಾಯಿಗಳನ್ನ ಹಿಡಿಯಲು ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಕೊಡಲಾಗಿದೆ, ಆದರೆ ನಾಯಿ ಹಿಡಿಯುವ ಕೆಲಸ ಮಾತ್ರ ಪ್ರಾರಂಭವಾಗಿಲ್ಲ, ನಗರಸಭೆಯ ನಿರ್ಲಕ್ಷ್ಯತೆಗೆ ಅಕ್ರೋಶಗೊಂಡಿರುವ ಸ್ಥಳೀಯರು ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.

LEAVE A REPLY

Please enter your comment!
Please enter your name here