Home ಶಿಕ್ಷಣ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 51.12ರಷ್ಟು ಪದವಿ ವಿದ್ಯಾರ್ಥಿ, ಬೋಧಕರಿಗೆ ವ್ಯಾಕ್ಸಿನ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 51.12ರಷ್ಟು ಪದವಿ ವಿದ್ಯಾರ್ಥಿ, ಬೋಧಕರಿಗೆ ವ್ಯಾಕ್ಸಿನ್

100
0

ಬೆಂಗಳೂರು:

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ ಮತ್ತಿತರೆ ಸಿಬ್ಬಂದಿಗೆ ಕೋವಿಡ್‌ ಲಸಿಕೀಕರಣ ವೇಗವಾಗಿ ಸಾಗುತ್ತಿದ್ದು, ಗುರುವಾರದ (ಜೂನ್‌ 8) ಹೊತ್ತಿಗೆ 51.12% ಮಂದಿಗೆ ವ್ಯಾಕ್ಸಿನ್‌ ಕೊಡಲಾಗಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಹೇಳಿಕೆ ನೀಡಿರುವ ಅವರು, ಬಿಬಿಎಂಪಿಯ ಒಟ್ಟು 8 ವಲಯಗಳಲ್ಲಿನ ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ 59179 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 31147 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ 52.63% ಗುರಿ ತಲುಪಲಾಗಿದೆ. ಹಾಗೆಯೇ, 3076 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದು, ಈ ಪೈಕಿ 2518 ಸಿಬ್ಬಂದಿಗೆ ಲಸಿಕೆ ನೀಡಿ 81.86% ಗುರಿ ತಲುಪಲಾಗಿದೆ ಎಂದಿದ್ದಾರೆ.

ಎಂಟೂ ವಲಯಗಳಲ್ಲಿ ವಿದ್ಯಾರ್ಥಿಗಳ ಲಸಿಕೀಕರಣ ಅತ್ಯಂತ ವೇಗವಾಗಿ, ವ್ಯವಸ್ಥಿತವಾಗಿ ಸಾಗಿದ್ದು ಆದಷ್ಟು ಬೇಗ ಲಸಿಕೀಕರಣ ಮುಗಿಸಲಾಗುವುದು ಎಂದಿರುವ ಡಿಸಿಎಂ, ಈವರೆಗೂ ಲಸಿಕೆ ಪಡೆಯದ ವಿದ್ಯಾರ್ಥಿಗಳು ತಪ್ಪದೇ ತಮ್ಮ ಕಾಲೇಜುಗಳಲ್ಲಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here