ಬೆಂಗಳೂರು: ರಾಜಧಾನಿ ಬೆಂಗಳೂರಿನ ಸೇವಾನಗರದಲ್ಲಿ ಬೃಹತ್ ಮರದ ಕೊಂಬೆ ಪಾದಚಾರಿಗಳ ಮೇಲೆ ಬಿದ್ದು ಶಾಲೆಗೆ ತೆರಳುತ್ತಿದ್ದ ಬಾಲಕಿ ಸೇರಿ 6 ಮಂದಿ ಗಾಯಗೊಂಡ ಘಟನೆ ಜರುಗಿದೆ.
ಘಟನೆ ಪರಿಣಾಮ ಮಹಿಳೆಯೊಬ್ಬರ ಕಾಲು ಮುರಿದಿದ್ದು, ಓರ್ವ ವ್ಯಕ್ತಿಯ ಎದೆಗೆ ಪೆಟ್ಟಾಗಿದ್ದು ಬೆನ್ನುಮೂಳೆ ಮುರಿದಿದೆ. ಡಿಸಿಎಂ ಡಿಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ್ದಾರೆ.
ಕುಂದಲಹಳ್ಳಿಯಿಂದ ವರ್ತೂರು ಸಂಪರ್ಕಿಸುವ ರಸ್ತೆ ಕೆಸರು ಗದ್ದೆಯಂತೆ ಆಗಿತ್ತು. ರಸ್ತೆಯಲ್ಲಿ 2 ಅಡಿ ನೀರು ನಿಂತು 2 ಕಿಲೋ ಮೀಟರ್ವರೆಗೆ ವಾಹನ ಸವಾರರು ಸರ್ಕಸ್ ಮಾಡಿದರು. ಇತ್ತ ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲಿ ರಾಜಕಾಲುವೆ ತುಂಬಿ ನೀರು ರಸ್ತೆಗೆ ನುಗ್ಗಿತ್ತು. ಟ್ರಾಫಿಕ್ ಜಾಮ್ನಲ್ಲಿ ಸವಾರರು ಹೈರಾಣಾದರು.
ಇನ್ನೂ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ರಾಮನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಆಗೋ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.