Home ಬೆಂಗಳೂರು ನಗರ 60 ಕೋಟಿ ಮೌಲ್ಯದ 27 ಎಕರೆ ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್

60 ಕೋಟಿ ಮೌಲ್ಯದ 27 ಎಕರೆ ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್

68
0
60 crores worth 27 acres land encroachment removed in Bengaluru

ಬೆಂಗಳೂರು:

ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಇಂದು ಮಾನ್ಯ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಒಟ್ಟು ರೂ 60,71,20,000 ಮೌಲ್ಯದ ಒಟ್ಟು 27-25.08 ಎ/ಗು ವಿಸ್ತೀರ್ಣದ ಜಮೀನುಗಳನ್ನು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

60 crores worth 27 acres land encroachment removed in Bengaluru

ಯಲಹಂಕ ತಾಲೂಕಿನ ಜಾಲ ಹೋಬಳಿಯ ಬಾಗಲೂರು ಗ್ರಾಮದ ಸರ್ವೇ ನಂ.175 ರಲ್ಲಿ 1-20 ಎ/ಗು ವಿಸ್ತೀರ್ಣದ ಸರ್ಕಾರಿ ಖರಾಬು, ಯಲಹಂಕ-03 ಹೋಬಳಿಯ ಅಮೃತಹಳ್ಳಿ ಗ್ರಾಮದ ಸರ್ವೇ ನಂ.115 ರಲ್ಲಿ 0-20 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಹಾಗೂ ಜಾಲ ಹೋಬಳಿಯ ಬಿ.ಕೆ.ಪಾಳ್ಯ ಗ್ರಾಮದ ಸರ್ವೇ ನಂ.7 ರಲ್ಲಿ 4-00 ಎ/ಗು ವಿಸ್ತೀರ್ಣದ ಸರ್ಕಾರಿ ಗೋಮಾಳದ ಜಮೀನು ಸೇರಿದಂತೆ ರೂ. 35,28,20,000 ಮೌಲ್ಯದ ಒಟ್ಟು 6-00 ಎ/ಗು ವಿಸ್ತೀರ್ಣದ ಜಮೀನುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದ ಅವರು, ಆನೇಕಲ್ ತಾಲೂಕಿನ ಕಸಬಾ ಹೋಬಳಿಯ ಹೊನ್ನಕಳಸಾಪುರ ಗ್ರಾಮದ ಸರ್ವೇ ನಂ. 33 ರಲ್ಲಿ 3-25 ಎ/ಗು ವಿಸ್ತೀರ್ಣದ, ರಾಚಮಾನಹಳ್ಳಿ ಗ್ರಾಮದ ಸರ್ವೇ ನಂ.12 ರಲ್ಲಿ 0-27 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆಗಳು, ಅತ್ತಿಬೆಲೆ ಹೋಬಳಿಯ ಗಿಡ್ಡೇನಹಳ್ಳೀ ಗ್ರಾಮದ ಸರ್ವೇ ನಂ.21 ರಲ್ಲಿ 0-12.08 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ, ಜಿಗಣಿ ಹೋಬಳಿಯ ಹುಲ್ಲಹಳ್ಳಿ ಗ್ರಾಮದ ಸರ್ವೇ ನಂ.54ರಲ್ಲಿ 6-20 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಮತ್ತು ಹುಲಿಮಂಗಲ ಗ್ರಾಮದ ಸರ್ವೇ ನಂ. 15,51,56,343 ರಲ್ಲಿ 2-17 ಎ/ಗು ವಿಸ್ತೀರ್ಣದ ಗೋಮಾಳ ಜಮೀನು, ಸರ್ಜಾಪುರ ಹೋಬಳಿಯ ದೊಡ್ಡ ತಿಮ್ಮಸಂದ್ರ ಗ್ರಾಮದ ಸರ್ವೇ ನಂ.202 ರಲ್ಲಿ 1-18 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಮತ್ತು ಕೊಮ್ಮಸಂದ್ರ ಗ್ರಾಮದ ಸರ್ವೇ ನಂ.94 ರಲ್ಲಿ 0-28 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಮತ್ತು ಚೊಕ್ಕಸಂದ್ರ ಗ್ರಾಮದ ಸರ್ವೇ ನಂ. 20 ರಲ್ಲಿ 1-00 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಹಾಗೂ ಅತ್ತಿಬೆಲೆ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ 0-25 ಎ/ಗು ವಿಸ್ತೀರ್ಣದ ರಾಜಕಾಲುವೆ ಸೇರಿದಂತೆ ರೂ.19,61,00,000 ಮೌಲ್ಯದ ಒಟ್ಟು 17-12.08 ಎ/ಗು ವಿಸ್ತೀರ್ಣದ ಜಮೀನುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದರು.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದ ಸರ್ವೇ ನಂ. 20 ರಲ್ಲಿ 0-02 ಎ/ಗು ವಿಸ್ತೀರ್ಣದ ಒಟ್ಟು ರೂ. 5,00,000 ಮೌಲ್ಯದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ತಟ್ಟಗುಪ್ಪೆ ಗ್ರಾಮದ ಸರ್ವೇ ನಂ. 26 ರಲ್ಲಿ 2-02 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ, ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೇ ನಂ. 36 ರಲ್ಲಿ 1-17.08 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ, ತಾವರೆಕೆರೆ ಹೋಬಳಿಯ ಹೊನ್ನಿಗನಹಟ್ಟಿ ಗ್ರಾಮದ ಸರ್ವೇ ನಂ. 11 ರಲ್ಲಿ 0-01 ಎ/ಗು ವಿಸ್ತೀರ್ಣದ ಸರ್ಕಾರಿ ಕೆರೆ ಮತ್ತು ಚನ್ನೇನಹಳ್ಳಿ ಗ್ರಾಮದ ಸರ್ವೇ ನಂ. 20 ರಲ್ಲಿ 0-30 ಎ/ಗು ವಿಸ್ತೀರ್ಣದ ಗೋಮಾಳ ಜಮೀನು ಸೇರಿದಂತೆ ರೂ. 5,77,00,000 ಮೌಲ್ಯದ ಒಟ್ಟು 4-10.08 ಎ/ಗು ವಿಸ್ತೀರ್ಣದ ಸರ್ಕಾರಿ ಪ್ರದೇಶದ ಒತ್ತುವರಿ ತೆರವುಗೊಳಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ತಾಲ್ಲೂಕಿನ ತಹಶೀಲ್ದಾರಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here