ಬೆಂಗಳೂರು: ಕೇವಲ 3೦ ಸೆಕೆಂಡ್ 6೦ ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ಹೌದು ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟ ಗ್ಯಾಂಗ್ ಗನ್ ತೋರಿಸಿ ಕಳ್ಳರು ಜ್ಯೂವೆಲ್ಲರಿ ಶಾಪ್ ದೋಚಿದ ಘಟನೆ ಮಾದನಾಯಕನಹಳ್ಳಿ ರಸ್ತೆಯ ದೊಮ್ಮರಹಳ್ಳಿಯಲ್ಲಿ ಜರುಗಿದೆ.
ಇಲ್ಲಿನ ಪದಮ್ ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನ ನಡೆದಿದೆ. ಹೆಲ್ಮೆಟ್ ಧರಿಸಿ ದುಷ್ಕರ್ಮಿಗಳು ಒಳಗೆ ಬಂದಿದ್ದಾರೆ. ರಾತ್ರಿ 9:15ರ ಸುಮಾರಿಗೆ ನಡೆದಿರುವ ಕೃತ್ಯವಾಗಿದ್ದು, ಓರ್ವ ಬೈಕ್ ಬಳಿ ಇದ್ರೆ, ಶಾಪ್ ನಲ್ಲಿದ್ದ ಇಬ್ಬರಿಗೆ ಗನ್ ತೋರಿಸಿ ಬೆದರಿಸಿದ್ದಾರೆ.
ನಂತರ ಚಿನ್ನಾಭರಣವನ್ನು ಚೀಲದಲ್ಲಿ ತುಂಬಿಕೊಂಡು ಜಸ್ಟ್ 30 ಸೆಕೆಂಡ್ ನಲ್ಲಿ 750ಗ್ರಾಂಗೂ ಅಧಿಕ ಚಿನ್ನ ಕದ್ದು ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ. ದರೋಡೆಯಾದ ಚಿನ್ನದ ಅಂದಾಜು ಮೌಲ್ಯ 55 ರಿಂದ 60 ಲಕ್ಷವಾಗಿದ್ದು, ಮೂರು ಜನ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಆಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.