ಕೇಂದ್ರದ ನಿಯಮಾನುಸಾರ 62 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ. 113 ತಾಲ್ಲೂಕುಗಳ ಪೈಕಿ ಈ ವರ್ಷ ಕಡಿಮೆ ಮಳೆಯಾಗಿರುವ 62 ತಾಲ್ಲೂಕುಗಳನ್ನು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಗುರುತಿಸಲಾಗಿತ್ತು. ಬೆಂಗಳೂರು: ಕೇಂದ್ರದ ನಿಯಮಾನುಸಾರ 62 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ. 113 ತಾಲ್ಲೂಕುಗಳ ಪೈಕಿ ಈ ವರ್ಷ ಕಡಿಮೆ ಮಳೆಯಾಗಿರುವ 62 ತಾಲ್ಲೂಕುಗಳನ್ನು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಗುರುತಿಸಲಾಗಿತ್ತು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪಸಮಿತಿ, 113 ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಈ ಪೈಕಿ 62 ತಾಲ್ಲೂಕುಗಳು ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿದೆ ಎಂದು ಹೇಳಿಕೆ ನೀಡಿತ್ತು. ಆಗಸ್ಟ್‌ನಲ್ಲಿ ಸಮೀಕ್ಷೆ ನಡೆಸಿದ ನಂತರ ಇನ್ನೂ 51 ತಾಲ್ಲೂಕುಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ.
ಈ ತಾಲ್ಲೂಕುಗಳನ್ನು ಈಗ ಮರು ಸಮೀಕ್ಷೆಗೆ ಪರಿಗಣಿಸಲಾಗುವುದು. ಇವುಗಳಲ್ಲದೆ ಇನ್ನೂ 83 ತಾಲ್ಲೂಕುಗಳನ್ನು ಮಳೆ ಕೊರತೆ ಇರುವ ತಾಲ್ಲೂಕುಗಳೆಂದು ಗುರುತಿಸಲಾಗಿದ್ದು, ಅವುಗಳನ್ನೂ ಸಮೀಕ್ಷೆಗೆ ಪರಿಗಣಿಸಲಾಗುವುದು ಎನ್ನಲಾಗಿದೆ. ಈ ವಿಷಯವನ್ನು ಅವರು ಸಂಪುಟದ ಮುಂದೆ ಮಂಡಿಸುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮರು ಸಮೀಕ್ಷೆ ಮಾಡಬೇಕಾದ 51 ತಾಲ್ಲೂಕುಗಳು ಸೇರಿದಂತೆ ಎಲ್ಲಾ 134 ತಾಲ್ಲೂಕುಗಳಲ್ಲಿ ಸಮೀಕ್ಷೆಗೆ ಸಂಪುಟ ಒಪ್ಪಿಗೆ ನೀಡುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಖಾತರಿಗಳ ಪೈಕಿ ನಾಲ್ಕನ್ನು ಜಾರಿಗೊಳಿಸಿದ್ದು, ಇವುಗಳ ಹಣಕಾಸು ನಿರ್ವಹಣೆ ಹಾಗೂ ಅನುಷ್ಠಾನದ ಸ್ಥಿತಿಗತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡಲು ಸರ್ಕಾರ ಇನ್ನೂ ಹೆಣಗಾಡುತ್ತಿದ್ದು, ಬರಪೀಡಿತ ತಾಲ್ಲೂಕುಗಳ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ವಿತರಣೆಗೆ ಸಂಪುಟ ಅನುಮೋದನೆ ನೀಡುವ ನಿರೀಕ್ಷೆಯಿದೆ. ಸದ್ಯ ಹೆಚ್ಚುವರಿ 5 ಕೆಜಿ ಅಕ್ಕಿಗೆ ಸಾಕಷ್ಟು ಅಕ್ಕಿ ಸಿಗದ ಕಾರಣ ಸರ್ಕಾರ ಹಣ ನೀಡುತ್ತಿದೆ.