Home Uncategorized 7ನೇ ವೇತನ ಆಯೋಗದ ಅವಧಿ ವಿಸ್ತರಣೆ ಖಂಡಿಸಿ ಸರಕಾರಿ ನೌಕರರ ಪ್ರತಿಭಟನೆ

7ನೇ ವೇತನ ಆಯೋಗದ ಅವಧಿ ವಿಸ್ತರಣೆ ಖಂಡಿಸಿ ಸರಕಾರಿ ನೌಕರರ ಪ್ರತಿಭಟನೆ

23
0

ಬೆಂಗಳೂರು: ರಾಜ್ಯ ಸರಕಾರವು ಸರಕಾರಿ ನೌಕರರ ವೇತನ ಭತ್ತೆಗಳ ಪರಿಷ್ಕರಣೆಗಾಗಿ ರಚಿಸಿದ್ದ 7ನೇ ವೇತನ ಆಯೋಗದ ಅವಧಿ ವಿಸ್ತರಣೆ ಮಾಡಿರುವುದನ್ನು ಖಂಡಿಸಿ ಹಾಗೂ ಕೂಡಲೇ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ಸಚಿವಾಲಯ ನೌಕರರ ಸಂಘ, ಪರಿಷತ್ ಹಾಗೂ ವಿಧಾನಸಭೆ ನೌಕರರ ಸಂಘದ ನೇತೃತ್ವದಲ್ಲಿ ಗುರುವಾರ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಪ್ಪುಪಟ್ಟಿ ಧರಿಸಿ ನೌಕರರು ಮೌನ ಪ್ರತಿಭಟನೆ ನಡೆಸಿದರು.

ರಾಜ್ಯ ಸರಕಾರವು ಸಕಾರಣವಿಲ್ಲದೆ ಹಾಗೂ ವೇತನ ಆಯೋಗದ ಕೋರಿಕೆ ಇಲ್ಲದೆ ಎರಡನೆ ಬಾರಿಗೆ ಆರು ತಿಂಗಳ ಕಾಲ(2024ರ ಮಾ.15ರವರೆಗೆ) ಅವಧಿ ವಿಸ್ತರಣೆ ಮಾಡಿರುವುದು ನೌಕರರಲ್ಲಿ ತೀವ್ರ ನಿರಾಶೆ ಮತ್ತು ಆಕ್ರೋಶ ಮೂಡಿಸಿದೆ. ಈ ಹಿನ್ನೆಲೆಯಲ್ಲಿ 7ನೇ ವೇತನ ಆಯೋಗ ಸೇರಿದಂತೆ ಸಮಸ್ತ ರಾಜ್ಯ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಎನ್‍ಪಿಎಸ್ ರದ್ದು ಮತ್ತು ಆಡಳಿತ ಸುಧಾರಣಾ ಆಯೋಗ-2ರ ನೌಕರ ವಿರೋಧಿ ಶಿಫಾರಸ್ಸುಗಳನ್ನು ಕೈ ಬಿಡುವಂತೆ ಪ್ರತಿಭಟನಾನಿರತ ನೌಕರರು ಆಗ್ರಹಿಸಿದರು.

LEAVE A REPLY

Please enter your comment!
Please enter your name here