Home ತುಮಕೂರು MLC Rajendra | ನನ್ನ ಕೊಲೆಗೆ 70 ಲಕ್ಷ ಸುಪಾರಿ ನೀಡಲಾಗಿದೆ: ತುಮಕೂರು ಪೊಲೀಸರಿಗೆ ದೂರು...

MLC Rajendra | ನನ್ನ ಕೊಲೆಗೆ 70 ಲಕ್ಷ ಸುಪಾರಿ ನೀಡಲಾಗಿದೆ: ತುಮಕೂರು ಪೊಲೀಸರಿಗೆ ದೂರು ಸಲ್ಲಿಸಿದ MLC ರಾಜೇಂದ್ರ

10
0

ತುಮಕೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ ಅವರು ಶುಕ್ರವಾರ ಸಂಜೆ ನೀಡಿದ ದೂರಿನ ಮೇರೆಗೆ ಕ್ಯಾತಸಂದ್ರ ಪೊಲೀಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇತರ ಆರೋಪಿಗಳಾದ ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, ಅವರನ್ನು ಶೀಘ್ರದಲ್ಲೇ ತನಿಖೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 109, 329(4), 61(2), 190, 109 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಅಜ್ಞಾತ’ ವ್ಯಕ್ತಿಗಳು ತನ್ನನ್ನು ಕೊಲ್ಲಲು ‘ಸುಪಾರಿ’ ನೀಡಿದ್ದಾರೆ ಎಂದು ಆರೋಪಿಸಿರುವ ರಾಜೇಂದ್ರ, ಶುಕ್ರವಾರ ತುಮಕೂರು ಎಸ್‌ಪಿ ಅಶೋಕ್ ಕೆ.ವಿ ಅವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದರು. ಸಚಿವರ ನಿವಾಸವು ಅಲ್ಲಿರುವುದರಿಂದ ಎಫ್‌ಐಆರ್ ದಾಖಲಿಸಲು ಎಸ್‌ಪಿ ಪ್ರಕರಣವನ್ನು ಕ್ಯಾತಸಂದ್ರ ಪೊಲೀಸರಿಗೆ ವರ್ಗಾಯಿಸಿದರು.

ತುಮಕೂರಿನ ಜಯಪುರ ಪ್ರದೇಶದ ರೌಡಿ ಶೀಟರ್ ಸೋಮ ಮತ್ತು ಭರತ್ ಎಂಬ ವ್ಯಕ್ತಿಯ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ. ಎಫ್‌ಐಆರ್‌ನ ಗಂಭೀರತೆ ಮುಂದಿನ ಕ್ರಮವನ್ನ ನಿರ್ಧರಿಸುತ್ತದೆ. ಜನವರಿಯಲ್ಲಿಯೇ ರಾಜೇಂದ್ರ ಅವರನ್ನು ಕೊಲ್ಲಲು ಸುಪಾರಿ ನೀಡಲಾಗಿದೆ ಎಂದು ತಿಳಿದಿದ್ದರೂ ಪೊಲೀಸ್ ದೂರು ದಾಖಲಿಸಲು ಏಕೆ ವಿಳಂಬ ಮಾಡಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಸುಪಾರಿ ಡೀಲ್ ಬಗ್ಗೆ ಎಂಎಲ್‌ಸಿ ರಾಜೇಂದ್ರ ನಮಗೆ ತಿಳಿಸಿದ ನಂತರವೇ ನಮಗೆ ತಿಳಿದುಬಂದಿತು, ಏಕೆಂದರೆ ನಮಗೆ ಯಾವುದೇ ಪೂರ್ವ ಗುಪ್ತಚರ ವರದಿ ಇರಲಿಲ್ಲ. ಸಚಿವರು ಮತ್ತು ಎಂಎಲ್‌ಸಿಗೆ ಈಗಾಗಲೇ ಸಾಕಷ್ಟು ಭದ್ರತೆ ಜಾರಿಯಲ್ಲಿದೆ ಮತ್ತು ಅದನ್ನು ಬಿಗಿಗೊಳಿಸಲಾಗುವುದು ಎಂದು ತಿಳಿಸಿದರು.

ಸುಪಾರಿ ಡೀಲ್ ಕುರಿತು ನಡೆದ ಸಂಭಾಷಣೆಯ ಆಡಿಯೋ ಟೇಪ್ ಅನ್ನು ರಾಜೇಂದ್ರ ನೀಡಿಲ್ಲ ಎಂದು ಅವರು ಹೇಳಿದರು, ತನಿಖೆಯ ಸಮಯದಲ್ಲಿ ಹಿನ್ನಲೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಜನವರಿ 2025 ರಲ್ಲಿ ತನ್ನ ಗಮನಕ್ಕೆ ಬಂದ ಆಡಿಯೋ ಟೇಪ್ ಮೂಲಕ ತನ್ನ ಕೊಲೆ ಯತ್ನದ ಬಗ್ಗೆ ತಿಳಿದುಕೊಂಡಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದ ಕಾರಣ ಪೊಲೀಸರಿಗೆ ದೂರು ನೀಡಲು ವಿಳಂಬ ಮಾಡಿದ್ದೇನೆ ಎಂದು ರಾಜೇಂದ್ರ ಸುದ್ದಿಗಾರರಿಗೆ ತಿಳಿಸಿದರು.

“ನಾನು ಎಸ್‌ಪಿಗೆ ದೂರು ನೀಡಿದ್ದೇನೆ ಮತ್ತು ಅವರೊಂದಿಗೆ ವಿವರವಾಗಿ ಮಾತನಾಡಿದ್ದೇನೆ. ಅವರು (ಆರೋಪಿಗಳು) ನನ್ನ ಕಾರಿನಲ್ಲಿ ಜಿಪಿಎಸ್ ಅಳವಡಿಸಲು ಪ್ರಯತ್ನಿಸಿದ್ದಾರೆ. ಒಟ್ಟು 70 ಲಕ್ಷ ರೂ. ಸುಪಾರಿ ಮೊತ್ತದಲ್ಲಿ 5 ಲಕ್ಷ ರೂ. ಪಾವತಿಸಲಾಗಿದೆ. ಅವರು ಅದನ್ನು ಏಕೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ. ಸೋಮ ಮತ್ತು ಭರತ್ ಹೆಸರುಗಳು ಆಡಿಯೋದಲ್ಲಿವೆ. ಅವರು ಯಾರೆಂದು ನನಗೆ ತಿಳಿದಿಲ್ಲ ಆದರೆ ಒಬ್ಬ ಮಹಿಳೆ ಮತ್ತು ಹುಡುಗ ಅದರ ಬಗ್ಗೆ ಮಾತನಾಡುತ್ತಿರುವ 18 ನಿಮಿಷಗಳ ಆಡಿಯೋ ಇದೆ” ಎಂದು ರಾಜೇಂದ್ರ ಎಸ್‌ಪಿಯನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು.

ನನ್ನ ವಿರುದ್ಧ ಯಾರಿಗೆ ದ್ವೇಷ ವೈರತ್ವ ಏಕೆ ಎಂದು ನನಗೆ ತಿಳಿದಿಲ್ಲ. ಜನವರಿಯಲ್ಲಿ ನನಗೆ ಆಡಿಯೋ ಸಿಕ್ಕಿತು. ನಾನು ಅದನ್ನು ತಮಾಷೆ ಎಂದು ಭಾವಿಸಿ ಸುಮ್ಮನಾಗಿದ್ದೆ, ಆದರೆ ಅದು ಗಂಭೀರವಾಗಿದೆ ಎಂದು ನನಗೆ ತಿಳಿದ ನಂತರ ದೂರು ದಾಖಲಿಸಿದೆ” ಎಂದು ಅವರು ಹೇಳಿದರು.

ತಮ್ಮ ತಂದೆ ರಾಜಣ್ಣ ಅವರ ಮೇಲಿನ ಹನಿ-ಟ್ರ್ಯಾಪ್ ಪ್ರಯತ್ನದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ ಮತ್ತು ಇದಕ್ಕೆ ‘ಸುಪಾರಿ’ ಡೀಲ್‌ಗೆ ಯಾವುದೇ ಸಂಬಂಧವಿಲ್ಲ ಎಂದು ರಾಜೇಂದ್ರ ಸ್ಪಷ್ಟ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here