ಬೆಂಗಳೂರು:
ಮನೆಯಲ್ಲಿ ಏಕಾಂಗಿಯಾಗಿದ್ದ 71 ವರ್ಷದ ವೃದ್ಧೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ನಗರದಲ್ಲಿ ನಡೆದಿದೆ.
ಆರೋಪಿಯನ್ನು ತೃತೀಯ ಲಿಂಗಿ ಎನ್ನಲಾದ ಜೂಲಿಯಾ ರೋಸಾ (31) ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಮನೆಯ ಸಮೀಪವೇ ತನ್ನ ಇಬ್ಬರು ಗೆಳೆಯರೊಂದಿಗೆ ವಾಸಿಸುತ್ತಿದ್ದ ಆರೋಪಿ ಶನಿವಾರ ಈ ಕೃತ್ಯವೆಸಗಿದ್ದಾನೆ.
ಸಂತ್ರಸ್ತೆ ಶನಿವಾರ ಸಂಜೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಕೋರಮಂಗಲ ಪೊಲೀಸ್ ಠಾಣೆಗೆ ಆಗಮಿಸಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ವೃದ್ಧೆ ಮಧ್ಯಾಹ್ನ 2.30ರ ಸುಮಾರಿಗೆ ಮನೆಗೆಲಸ ಮುಗಿಸಿ ಮನೆಯ ಮೊದಲ ಮಹಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ದುಷ್ಕರ್ಮಿ ಮನೆಗೆ ಪ್ರವೇಶಿಸಿದ್ದಾನೆ. UNI