Home Uncategorized 74ನೇ ಗಣರಾಜ್ಯೋತ್ಸವ: ಪರೇಡ್'ನಲ್ಲಿ ದೇಶದ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ

74ನೇ ಗಣರಾಜ್ಯೋತ್ಸವ: ಪರೇಡ್'ನಲ್ಲಿ ದೇಶದ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ

35
0

74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎಲ್ಲರ ಗಮನಸೆಳೆಯಿತು. ನವದೆಹಲಿ: 74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎಲ್ಲರ ಗಮನಸೆಳೆಯಿತು.
    
ಪರೇಡ್ ನಲ್ಲಿ ಕರ್ನಾಟಕದಿಂದ ನಾರಿ ಶಕ್ತಿ ಸಾರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಯಿತು. ಸ್ತಬ್ಧ ಚಿತ್ರದ ಮೂಲಕ ಪದ್ಮಶ್ರೀ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಮತ್ತು ಸಾಲು ಮರದ ತಿಮ್ಮಕ್ಕ ಅವರ ಸಾಧನೆಗಳ ಅನಾವರಣಗೊಳಿಸಲಾಯಿತು. ಗಿಡ-ಮರ ,ಬೆಟ್ಟ-ಗುಡ್ಡಗಳಿಂದ ಸ್ತಬ್ಧಚಿತ್ರ ಶೃಂಗಾರಗೊಂಡಿದೆ.

#RepublicDay | Karnataka’s tableau symbolically unveils exceptional achievements of state’s 3 women achievers.

Sulagitti Narasamma – a midwife, Tulsi Gowda Halakki – known as ‘Vruksha Maate’ & Saalumarada Thimmakka are noted names due to their selfless contribution to society. pic.twitter.com/AYHBdwj48k
— ANI (@ANI) January 26, 2023

ಮುಂಭಾಗದಲ್ಲಿ ಹೆರಿಗೆ ತಜ್ಞೆ ಸೂಲಗಿತ್ತಿ ನರಸಮ್ಮ ಚಿತ್ರ, ಚನ್ನಪಟ್ಟಣದ ಗೊಂಬೆ ಮಾದರಿಯ ತೊಟ್ಟಿಲು ಚಿತ್ರ ಮತ್ತು ನರಸಮ್ಮನವರು ಮಗುವನ್ನು ಎತ್ತಿಕೊಂಡಿರುವಂತಹ ಚಿತ್ರ ಪ್ರದರ್ಶನಗೊಂಡಿದೆ.

ಈ ಮೂಲಕ ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ  ಕರ್ನಾಟಕ ಪಾತ್ರವಾಗಿದೆ.

ಹೆರಿಗೆ ತಜ್ಞೆ- ಸೂಲಗಿತ್ತಿ ನರಸಮ್ಮ, ಹಾಲಕ್ಕಿ ಸಮುದಾಯದ ವೃಕ್ಷ ಮಾತೆ- ತುಳಸಿ ಗೌಡ, ಪರಿಸರ ಪ್ರೇಮಿ- ಸಾಲುಮರದ ತಿಮ್ಮಕ್ಕ ಮೂವರು ಸಮಾಜಕ್ಕೆ ನಿಸ್ವಾರ್ಥ ಕೊಡುಗೆ ನೀಡಿ ಹೆಸರುವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here