Home Uncategorized 8 ವರ್ಷಗಳ ಹಿಂದಿನ ತೆರವು ಕಾರ್ಯಾಚರಣೆ ಆದೇಶ ಹಿಂದಕ್ಕೆ; ಎಚ್ಆರ್‌ಬಿಆರ್ ಲೇಔಟ್ ನಿವಾಸಿಗಳು ನಿರಾಳ!

8 ವರ್ಷಗಳ ಹಿಂದಿನ ತೆರವು ಕಾರ್ಯಾಚರಣೆ ಆದೇಶ ಹಿಂದಕ್ಕೆ; ಎಚ್ಆರ್‌ಬಿಆರ್ ಲೇಔಟ್ ನಿವಾಸಿಗಳು ನಿರಾಳ!

10
0

ಕಳೆದ ಎಂಟು ವರ್ಷಗಳ ಹಿಂದೆ ಹೊರಡಿಸಿದ್ದ ನಿವೇಶನಗಳನ್ನು ನೆಲಸಮಗೊಳಿಸುವ ಆದೇಶವನ್ನು ಹಿಂಪಡೆಯಲಾಗಿದ್ದು, ಇದೀಗ ಎಚ್‌ಆರ್‌ಬಿಆರ್ ಲೇಔಟ್‌ನ 222 ಮಂಜೂರಾತಿದಾರರು ನಿಟ್ಟುಸಿರು ಬಿಟ್ಟಿದ್ದಾರೆ.  ಬೆಂಗಳೂರು: ಕಳೆದ ಎಂಟು ವರ್ಷಗಳ ಹಿಂದೆ ಹೊರಡಿಸಿದ್ದ ಮನೆಗಳನ್ನು ನೆಲಸಮಗೊಳಿಸುವ ಆದೇಶವನ್ನು ಹಿಂಪಡೆಯಲಾಗಿದ್ದು, ಇದೀಗ ಎಚ್‌ಆರ್‌ಬಿಆರ್ ಲೇಔಟ್‌ನ 222 ಮಂಜೂರಾತಿದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೂನ್ 3 ರಂದು ಇಲ್ಲಿನ ನಿವಾಸಿಗಳ ಪರವಾಗಿ ಆದೇಶ ಹೊರಡಿಸಿದ್ದಾರೆ.

ಅಲ್ಲದೆ ಹಕ್ಕುದಾರರಾದ ಕುಣಪ್ಪ ಮತ್ತು ಕುಟ್ಟಪ್ಪ ಅವರ ಹೆಸರನ್ನು ಕಂದಾಯ ದಾಖಲೆಗಳಿಂದ ಅಳಿಸಿ ಹಾಕುವಂತೆಯೂ ಅವರು ನಿರ್ದೇಶಿಸಿದ್ದಾರೆ.

ಬಡಾವಣೆಯನ್ನು ರೂಪಿಸಿ ಈ ನಿವೇಶನಗಳನ್ನು ನಿರ್ಮಿಸಿದ ಸಂದರ್ಭದಲ್ಲಿ ಒಟ್ಟಾರೆ ಆಸ್ತಿಯ ಮಾಲೀಕತ್ವ ತಮ್ಮದು ಎಂದಿದ್ದ ಇಬ್ಬರು ವ್ಯಕ್ತಿಗಳು, ನಕಲಿ ಸಹಿಗಳನ್ನು ಮಾಡಿ ಮತ್ತು ಸುಳ್ಳು ದಾಖಲೆಗಳನ್ನು ಬಳಸಿಕೊಂಡು ಒಪ್ಪಿಗೆ ಪಡೆದಿದ್ದರು. ಅದರಂತೆ ಕರ್ನಾಟಕ ಹೈಕೋರ್ಟ್ ಕೂಡ ಡಿಸೆಂಬರ್ 1, 2022 ರಂದು ಆಸ್ತಿ ಹಕ್ಕು ಚಲಾಯಿಸಿದ ವ್ಯಕ್ತಿಗಳ ಪರವಾಗಿಯೇ ತೀರ್ಪು ನೀಡಿತ್ತು. 

ಬಡಾವಣೆಯಲ್ಲಿರುವ 222 ವಸತಿ ಹಾಗೂ ನಾಲ್ಕು ಸಿಎ ನಿವೇಶನಗಳನ್ನು 1984-85ರಲ್ಲಿ ಬಾಣಸವಾಡಿ ಗ್ರಾಮದ ಬತ್ತಿದ ಚನ್ನಸಂದ್ರ ಕೆರೆಯ ಮೇಲೆ ಬಿಡಿಎ ರೂಪಿಸಿತ್ತು. ನಗರದ ಎಲ್ಲಾ ಕೆರೆಗಳ ಒಡೆತನವನ್ನು ಹೊಂದಿದ್ದ ಕಂದಾಯ ಇಲಾಖೆಯು ಈ ಭೂಮಿಯನ್ನು ಬಿಡಿಎಗೆ ವರ್ಗಾಯಿಸಿರಲಿಲ್ಲ ಮತ್ತು ಇದುವೇ ಅತಿಕ್ರಮಣದಾರರಿಗೆ ಇಲ್ಲಿಗೆ ಪ್ರವೇಶ ಪಡೆಯಲು ಅವಕಾಶ ನೀಡಿತು. 

ಇದನ್ನೂ ಓದಿ: 20 ವರ್ಷ ಕಳೆದರೂ ನಿವೇಶನ ಪಡೆಯಲು ಬಿಡಿಎ ಕಚೇರಿಗೆ ಅಲೆಯುತ್ತಿರುವ ಕುಟುಂಬ

ಮನೆ ಮಾಲೀಕ ಶ್ಯಾಮ್ ಸುಂದರ್ ಟಿಎನ್ಐಇ ಜೊತೆಗೆ ಮಾತನಾಡಿ, ‘ನಾವೆಲ್ಲರೂ ಈಗ ತುಂಬಾ ನಿರಾಳರಾಗಿದ್ದೇವೆ. ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರ್ ನೀಡಿದ ಆದೇಶದ ಮೇರೆಗೆ 2015ರ ಜನವರಿಯಲ್ಲಿ ತಮ್ಮ ಮನೆಗಳ ಹೊರಗೆ ನೆಲಸಮಗೊಳಿಸುವ ಆದೇಶವನ್ನು ಅಂಟಿಸಿದಾಗ ಇಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದ ಸುಮಾರು 150 ಕುಟುಂಬಗಳು ಆಘಾತಕ್ಕೊಳಗಾಗಿದ್ದವು. ಅಂದಿನಿಂದ ಇಲ್ಲಿನ ನಿವಾಸಿಗಳು ತಮ್ಮ ಕಾನೂನುಬದ್ಧ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ತೀವ್ರ ಹೋರಾಟವನ್ನು ನಡೆಸಿದ್ದಾರೆ’ ಎಂದರು.

ಮತ್ತೊಬ್ಬ ನಿವಾಸಿ ವಿಂಗ್ ಕಮಾಂಡರ್ (ನಿವೃತ್ತ) ಥಾಮಸ್ ಬಾಬು ಮಾತನಾಡಿ, ‘ನಮಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ನಕಲಿ ಸಹಿ ಎಂದು ತೋರಿಸಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಡಿಸಿ ಪರಿಗಣನೆಗೆ ತೆಗೆದುಕೊಂಡಿದ್ದಾರೆ.

2000ನೇ ಇಸವಿಯಿಂದ ನಾನು ವೈಯಕ್ತಿಕವಾಗಿ ಹೋರಾಟ ನಡೆಸುತ್ತಿದ್ದೆ, ಆಗ ಇಬ್ಬರೂ ನನ್ನನ್ನು ಖಾಲಿ ಮಾಡುವಂತೆ ಸೂಚನೆ ನೀಡಿದ್ದರು. ನಾನು ವಕೀಲರ ಮೇಲೆ ಹೆಚ್ಚು ಹಣವನ್ನು ಮತ್ತು ಹೆಚ್ಚಿನ ಸಮಯವನ್ನು ವ್ಯಯಿಸಿ ಪ್ರಕರಣಗಳನ್ನು ದಾಖಲಿಸುತ್ತಿದ್ದೆ’ ಎಂದು ತಿಳಿಸಿದರು.

ಇದನ್ನೂ ಓದಿ: ‘ಭ್ರಷ್ಟ’ ಬಿಡಿಎಯನ್ನು ಸ್ವಚ್ಛಗೊಳಿಸುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

ನಿವಾಸಿ ದ್ವಾರಕಾನಾಥ್ ಮಾತನಾಡಿ, ಖಾಲಿ ನಿವೇಶನಗಳಲ್ಲಿ ಈಗ ಹಾವುಗಳು ತುಂಬಿಕೊಂಡಿವೆ. ಬಿಡಿಎ ಇಲ್ಲಿ ಟ್ರೀ ಪಾರ್ಕ್‌ಗಳನ್ನು ಸ್ಥಾಪಿಸಬೇಕು. ಇದರಿಂದ ಅದು ಸಾರ್ವಜನಿಕ ಆಸ್ತಿಯಾಗುತ್ತದೆ ಮತ್ತು ಬೇರೆ ಯಾರೂ ಅವುಗಳನ್ನು ಅತಿಕ್ರಮಿಸಬಾರದು ಎಂದು ಅಭಿಪ್ರಾಯ ಪಡುತ್ತಾರೆ.

ಟಿಎನ್ಐಇ ಡಿಸೆಂಬರ್ 22, 2022 ರಂದು ತನ್ನ ವರದಿಯಲ್ಲಿ ಮೂರು ದಶಕಗಳ ಹಿಂದೆ ಸೈಟ್‌ಗಳನ್ನು ಮಂಜೂರು ಮಾಡಲದ 150 ಕುಟುಂಬಗಳು ಎದುರಿಸಿದ ಆತಂಕವನ್ನು ಎತ್ತಿ ತೋರಿಸಿದೆ. TNIE ವರದಿಯ ನಂತರ, ಬೆಂಗಳೂರು ಮಾಜಿ ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರು ಡಿಸೆಂಬರ್ 28 ರಂದು ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

LEAVE A REPLY

Please enter your comment!
Please enter your name here