ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜ.02 ರಂದು ಸಂಜೆ ಲಿಂಗೈಕ್ಯರಾಗಿದ್ದು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಲಿದೆ. ವಿಜಯಪುರ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜ.02 ರಂದು ಸಂಜೆ ಲಿಂಗೈಕ್ಯರಾಗಿದ್ದು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಲಿದೆ.
ಅಪಾರ ಸಂಖ್ಯೆಯ ಭಕ್ತಾದಿಗಳು, ಅನುಯಾಯಿಗಳನ್ನು ಹೊಂದಿದ್ದ ಶ್ರೀಗಳ ಅಂತಿಮ ದರ್ಶನಕ್ಕೆ ಜನಸಾಗರ ಹರಿದುಬರುತ್ತಿದೆ. ಶ್ರೀಗಳ ದೇಹಾಂತ್ಯವಾದೊಡನೆ ಯೋಗಾಶ್ರಮದ ಅಧಿಕಾರಿಗಳು/ಸಿಬ್ಬಂದಿಗಳು ಶ್ರೀಗಳು 8 ವರ್ಷಗಳ ಹಿಂದೆ ಗುರುಪೂರ್ಣಿಮೆಯಂದು ಬರೆಸಿದ್ದ ಅಂತಿಮ ಅಭಿವಾದನಾ ಪತ್ರವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಅಸ್ತಂಗತ; “ಜಂಗಮರಿಗೆ ಅಳಿವಿಲ್ಲ”- ಸ್ಮಾರಕ ನಿರ್ಮಿಸದಂತೆ ಶ್ರೀಗಳ ಸೂಚನೆ
ಇದರಲ್ಲಿ ಶ್ರೀಗಳು ತಮ್ಮ ಅಂತ್ಯಕ್ರಿಯೆ ಹೇಗಿರಬೇಕೆಂಬ ಸೂಚನೆಯನ್ನು ನೀಡಿದ್ದಾರೆ. ಶ್ರೀಗಳ ಅಂತಿಮ ಅಭಿವಾದನ ಪತ್ರದ ಸಾರಾಂಶ ಹೀಗಿದೆ..
8 ವರ್ಷಗಳ ಹಿಂದೆ ಗುರುಪೂರ್ಣಿಮೆಯ ದಿನ ಸಿದ್ದೇಶ್ವರ ಶ್ರೀಗಳು ಬರೆದಿದ್ದ ಅಂತಿಮ ಅಭಿವಂದನ ಪತ್ರದ ಪ್ರತಿ#ಸಿದ್ದೇಶ್ವರಸ್ವಾಮೀಜಿ #siddeshwaraswamiji pic.twitter.com/8a9NcPZnZG
— kannadaprabha (@KannadaPrabha) January 2, 2023
“ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ. ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು, ಅದಕ್ಕಾಗಿ ಈ ಅಂತಿಮ ಅಭಿವಾದನ ಪತ್ರ” ಎಂದು ಶ್ರೀಗಳು ಹೇಳಿದ್ದಾರೆ.
ತಮ್ಮ ದೇಹಾಂತ್ಯವಾದ ಬಳಿಕ ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡಬೇಕು, ಶ್ರಾದ್ಧಿಕ ವಿಧಿ-ವಿಧಾನ ಕರ್ಮಗಳು ಅಗತ್ಯವಿಲ್ಲ, ತಮ್ಮ ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜನೆ ಮಾಡಬೇಕು ತಮಗಾಗಿ ಯಾವುದೇ ಸ್ಮಾರಕ ನಿರ್ಮಿಸಬಾರದು ಎಂದು ಶ್ರೀಗಳು ಸೂಚನೆ ನೀಡಿದ್ದಾರೆ. ಅದರಂತೆಯೇ ಅಂತ್ಯಕ್ರಿಯೆ ನಡೆಯಲಿದೆ.