
ಬೆಳಗಾವಿ: 2019ರಲ್ಲಿ ನಡೆದ ಅತ್ಯಾಚಾರ ಮತ್ತು 8 ವರ್ಷದ ಬಾಲಕಿಯ ಬರ್ಬರ ಕೊಲೆ ಪ್ರಕರಣದಲ್ಲಿ, ಬೆಳಗಾವಿ ಜಿಲ್ಲಾ ಪಾಕ್ಸೊ ನ್ಯಾಯಾಲಯವು ರಾಯಬಾಗ ತಾಲೂಕಿನ ಪರಮಾನಂದವಾಡಿ ಮೂಲದ **ಭರತೇಶ್ ರಾವಸಾಬ ಮಿರ್ಜಿ (28)**ಗೆ ಮರಣದಂಡನೆ ವಿಧಿಸಿದೆ.
ಪ್ರಕರಣದ ಪ್ರಕಾರ, 2019ರ ಅಕ್ಟೋಬರ್ 15ರಂದು, ಬಾಲಕಿ ಮನೆ ಹತ್ತಿರದ ಅಂಗಡಿಗೆ ಹೋಗಿ ಮರಳುವಾಗ, ಆರೋಪಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಆಕೆಯ ದೇಹಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದು ಕೊಲೆ ಮಾಡಿದ್ದ. ನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ, ಶ್ವಾನದಳದ ಸಹಾಯದಿಂದ ಬಾವಿಯಲ್ಲಿ ಶವ ಪತ್ತೆಯಾಯಿತು.
ವಿಚಾರಣೆಯ ವೇಳೆ 20 ಸಾಕ್ಷಿಗಳು, 106 ದಾಖಲೆಗಳು ಮತ್ತು 22 ಮುದ್ದೆಮಾಲುಗಳು ಆಧಾರದ ಮೇಲೆ ಆರೋಪಿ ವಿರುದ್ಧದ ಆರೋಪಗಳು ಸಾಬೀತಾದವು.
Also Read: Belagavi POCSO Court Awards Death Penalty to Man for Rape and Murder of 8-Year-Old Girl
ತೀರ್ಪು ನೀಡಿದ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ, ಆರೋಪಿಗೆ ಮರಣದಂಡನೆ ಜೊತೆಗೆ ವಿವಿಧ ಶಿಕ್ಷೆಗಳು ಮತ್ತು ದಂಡ ವಿಧಿಸಿದ್ದು, ಜೊತೆಗೆ ಬಾಲಕಿಯ ತಂದೆ-ತಾಯಿಗೆ ₹10 ಲಕ್ಷ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಈ ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.