Home ಬೆಂಗಳೂರು ನಗರ ಒಂದೇ ತಿಂಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ 9 ಕೋಟಿ ದಂಡ ವಸೂಲಿ

ಒಂದೇ ತಿಂಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ 9 ಕೋಟಿ ದಂಡ ವಸೂಲಿ

8
0
Bangalore-Mysore Express Highway ready for travel: inaugurated by PM in March

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 9 ಕೋಟಿ ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ. ಈ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದ್ದು, ದಂಡ ಸಂಗ್ರಹವೂ ಜಾಸ್ತಿಯಾಗುತ್ತಿದೆ.

ಅನೇಕ ವಾಹನ ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದರಿಂದಾಗಿ ಕಳೆದ ಒಂದು ತಿಂಗಳಲ್ಲಿ 8.99 ಕೋಟಿ ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ.  ಜೂನ್ 1 ರಿಂದ ಜೂ.30ರವರೆಗಿನ ದಂಡ ವಸೂಲಾತಿ ಇದಾಗಿದೆ. ಈ ವೇಳೆಯಲ್ಲಿ 1,61,491 ಪ್ರಕರಣಗಳನ್ನು ದಾಖಲಿಸಲಾಗಿದೆ.

ಯಾವ್ಯಾವ ಕಾರಣಕ್ಕೆ ಎಷ್ಟು ಕೇಸ್‌..?

ಪಥ ಶಿಸ್ತು ಉಲ್ಲಂಘನೆ – 12,609
ಬೈಕ್‌ನಲ್ಲಿ ತ್ರಿಪಲ್‌ ರೈಡಿಂಗ್ – 1,087
ಹೆಲ್ಮೆಟ್ ಧರಿಸದೆ ಸವಾರಿ – 9, 079
ಅತೀ ವೇಗದ ಚಾಲನೆ – 7,671
ವಿರುದ್ಧ ದಿಕ್ಕಿನಲ್ಲಿ ಸಂಚಾರ – 07
ನೋ ಎಂಟ್ರಿ ಪ್ರಕರಣ – 577

LEAVE A REPLY

Please enter your comment!
Please enter your name here