ಬೆಂಗಳೂರು: ವೀಸಾ ಮತ್ತು ಪಾಸ್‌ಪೋರ್ಟ್ ಅವಧಿ ಮುಗಿದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಒಟ್ಟು 9 ವಿದೇಶಿಗರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜುಲೈ 22ರಂದು ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ, ವಿವಿಧ ವೀಸಾ ಪ್ರಕಾರಗಳಡಿಯಲ್ಲಿ ಭಾರತ ಪ್ರವೇಶಿಸಿದರೂ ನಂತರವೂ ವೀಸಾ ಅವಧಿ ಮೀರಿಸಿ ನಗರದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ವಾಸವಿದ್ದ ವಿದೇಶಿಗರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ನಾಲ್ವರು ನೈಜೀರಿಯಾ, ಒಬ್ಬ ಸುಡಾನ್, ಮತ್ತೊಬ್ಬ ಕಾಂಗೋ ಹಾಗೂ ಇಬ್ಬರು ಘಾನಾ ದೇಶಗಳ ನಾಗರಿಕರಾಗಿದ್ದಾರೆ. ಸಿಸಿಬಿ ಮೂಲಗಳ ಪ್ರಕಾರ, ನೈಜೀರಿಯಾದ ಒಬ್ಬ ವ್ಯಕ್ತಿಯನ್ನು ಈಗಾಗಲೇ ತಮ್ಮ ದೇಶಕ್ಕೆ ಹಿಂತಿರುಗಿಸಲಾಗಿದ್ದು, ಉಳಿದವರನ್ನು ಕೂಡ ಅವರ ದೇಶಗಳಿಗೆ ಹಿಂತಿರುಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ಎಲ್ಲಾ ವಿದೇಶಿಗರನ್ನು ಡಿಟೆನ್ಷನ್ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ. ವೀಸಾ ನಿಯಮ ಉಲ್ಲಂಘನೆ ವಿರುದ್ಧ ಸಿಸಿಬಿ ಪೊಲೀಸರು ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.