ಟೆಲ್ ಅವೀವ್: ಬರೊಬ್ಬರಿ 9 ವರ್ಷಗಳ ಬಳಿಕ ಇಸ್ರೇಲ್ ಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.
ಹೌದು.. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಸ್ರೇಲ್ಗೆ ಎರಡು ದಿನಗಳ ರಾಜ್ಯ ಭೇಟಿಗಾಗಿ ಟೆಲ್ ಅವಿವ್ಗೆ ಆಗಮಿಸಿದರು. ತಮ್ಮ ವಿಶೇಷ ವಿಮಾನದಿಂದ ಪ್ರಧಾನಿ ಮೋದಿ ಕೆಳಗಿಳಿಯುತ್ತಲೇ ರೆಡ್ ಕಾರ್ಪೆಟ್ ಮೂಲಕ ಅವರಿಗೆ ಸ್ವಾಗತ ಕೋರಲಾಯಿತು.
ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 4.15ರ ಸುಮಾರಿಗೆ ಇಸ್ರೇಲ್ನ ಟೆಲ್ ಅವಿವ್ಗೆ ತಲುಪಿದ್ದಾರೆ. 6 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೇಲ್ಗೆ ತೆರಳಿದ ಮೋದಿಯನ್ನು ವಿಮಾನ ನಿಲ್ದಾಣದಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿದರು. ವಿಮಾನದಿಂದ ಇಳಿಯುತ್ತಿದ್ದಂತೆ ನೆತನ್ಯಾಹು ಪ್ರಧಾನಿ ಮೋದಿಯನ್ನು ಅಪ್ಪುಗೆ ಮೂಲಕ ಸ್ವಾಗತಿಸಿದರು. ಈ ವೇಳೆ ನೆತನ್ಯಾಹು ಅವರ ಪತ್ನಿ ಬೆನ್ ಗುರಿಯನ್ ಕೂಡ ಹಾಜರಿದ್ದರು.
ಇಸ್ರೇಲ್ಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರ 2ನೇ ಭೇಟಿ ಇದಾಗಿದೆ. ಈ ಹಿಂದೆ 2017ರಲ್ಲಿ ಮೋದಿ ಇಸ್ರೇಲ್ಗೆ ಭೇಟಿ ನೀಡಿದ್ದರು. ಬಳಿಕ ಬರೊಬ್ಬರಿ 9 ವರ್ಷಗಳ ಬಳಿಕ ಪ್ರಧಾನಿ ಮೋದಿ ಇಸ್ರೇಲ್ ಗೆ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಅವರ ಈ ಭೇಟಿಯು ಕೇವಲ ಒಂದು ರಾಜತಾಂತ್ರಿಕ ಪ್ರವಾಸವಲ್ಲ, ಬದಲಿಗೆ ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ಏರಿಸುವ ಮಹತ್ವದ ಹೆಜ್ಜೆ ಎಂದು ಹೇಳಲಾಗುತ್ತಿದೆ.
ಈ ಪ್ರವಾಸದಲ್ಲಿ ನವದೆಹಲಿ ಮತ್ತು ಟೆಲ್ ಅವಿವ್ ನಡುವಿನ ಸಂಬಂಧಗಳು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯಾಗಿ ಮೇಲ್ದರ್ಜೆಗೇರಲಿದ್ದು, ರಕ್ಷಣೆ, ವ್ಯಾಪಾರ ಮತ್ತು ಇತರ ವಿಷಯಗಳ ಕುರಿತು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಿವೆ ಎನ್ನಲಾಗಿದೆ.
ಇತಿಹಾಸದಲ್ಲೇ ಮೊದಲು, ಸಂಸತ್ ಮೇಲೆ ಮೂಡಿತು ಕೇಸರಿ-ಬಿಳಿ-ಹಸಿರು
ಪ್ರಧಾನಿ ಭೇಟಿಯ ಈ ಐತಿಹಾಸಿಕ ಕ್ಷಣವನ್ನು ವಿಶೇಷವಾಗಿಸಲು ಇಸ್ರೇಲ್ ಸರ್ಕಾರವು ಅತ್ಯಂತ ಅಪರೂಪದ ಮತ್ತು ಗೌರವಯುತ ಕ್ರಮವನ್ನು ಕೈಗೊಂಡಿದ್ದು, ಇಸ್ರೇಲ್ನ ಸಂಸತ್ ಭವನವಾದ ನೆಸ್ಸೆಟ್ ಅನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ ಈ ಚಿತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂದು ಪರಸ್ಪರ ಪಾಲುದಾರಿಕೆಗೆ ಸಲ್ಲುತ್ತಿರುವ ಸಾಂಕೇತಿಕ ಗೌರವ ಎಂದು ಬಣ್ಣಿಸಿದ್ದಾರೆ.
ಹಲವಾರು ಒಪ್ಪಂದಗಳಿಗೆ ಸಹಿ
ಈ ಭೇಟಿ ವೇಳೆ ಪ್ರಧಾನಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. ಪ್ರಮುಖವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಕೃಷಿ, ಜಲ ನಿರ್ವಹಣೆ, ತಂತ್ರಜ್ಞಾನ, ರಕ್ಷಣೆ ಮತ್ತು ಭದ್ರತೆ, ಜನರಿಂದ ಜನರ ಸಂಬಂಧಗಳು, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ನೆತನ್ಯಾಹು ಅವರೊಂದಿಗಿನ ನನ್ನ ಸಂವಾದವನ್ನು ನಾನು ಎದುರು ನೋಡುತ್ತಿದ್ದೇನೆ. ನಾವು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
In tribute to Prime Minister @narendramodi, the Knesset is illuminated tonight in the colors of the Indian flag pic.twitter.com/YxWswwOX69
— Amir Ohana – אמיר אוחנה (@AmirOhana) February 24, 2026
ಅಂತೆಯೇ ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಇಸ್ರೇಲ್ ಸಂಸತ್ತು, ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಮೂಲಕ ಇಸ್ರೇಲ್ ಸಂಸತ್ ನಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಪ್ರಧಾನಿಯಾಗಲಿದ್ದಾರೆ. ಭಾಷಣಕ್ಕೂ ಮೊದಲು ಅವರು ನೆತನ್ಯಾಹು ಅವರೊಂದಿಗೆ ಸಂಕ್ಷಿಪ್ತ ಸಭೆಯನ್ನು ನಡೆಸಲಿದ್ದಾರೆ, ನಂತರ ಗುರುವಾರ ವ್ಯಾಪಕ ಮಾತುಕತೆಗಳು ನಡೆಯಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ ಅಮೆರಿಕ ಮತ್ತು ಇರಾನ್ ನಡುವಿನ ಹದಗೆಟ್ಟ ಸಂಬಂಧಗಳು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಈ ಭೇಟಿ ಹೆಚ್ಚುವರಿ ಮಹತ್ವವನ್ನು ಪಡೆದುಕೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ, ಭಾರತ-ಇಸ್ರೇಲ್ ಸಹಕಾರವು ರಕ್ಷಣೆ, ಸೈಬರ್ ಭದ್ರತೆ, ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ವಿಸ್ತರಿಸಿದೆ. ಇಸ್ರೇಲ್ ಭಾರತಕ್ಕೆ ವಿವಿಧ ಮಿಲಿಟರಿ ವೇದಿಕೆಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪೂರೈಸುವ ಮೂಲಕ ರಕ್ಷಣೆ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದೆ.
Landed in Israel.
I am extremely honoured to be received by Prime Minister Netanyahu and Mrs. Netanyahu at the airport. I look forward to engaging in bilateral discussions and fruitful outcomes that strengthen the India-Israel friendship.@netanyahu pic.twitter.com/FYGDv0M3Xy
— Narendra Modi (@narendramodi) February 25, 2026
