Namma Metro Yellow Line | Chinese contract firm agrees to expedite supply of 2 metro rail coaches
ಬೆಂಗಳೂರು: ಇಲ್ಲಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಹಳಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.
ಸೋಮವಾರ ರಾತ್ರಿ 8.56ಕ್ಕೆ ರೈಲು ಬರುವುದನ್ನು ಕಂಡು ಯುವಕ ಹಳಿ ಮೇಲೆ ಹಾರಲು ಯತ್ನಿಸಿ ರೈಲಿನ ಕೋಚ್‌ಗೆ ತಾಗಿ ಪಕ್ಕಕ್ಕೆ ಬಿದ್ದಿದ್ದು, ಬಿಎಂಆರ್‌ಸಿಎಲ್ ಸಿಬ್ಬಂದಿ ಕೂಡಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ಕೆಲಕಾಲ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ವಿದ್ಯುತ್ ಸರಬರಾಜು ಕಡಿತಗೊಳಿಸಲಾಯಿತು.
