ದೊಡ್ಡಬಳ್ಳಾಪುರ: ಬಿಬಿಎಂಪಿ (BBMP) ಕಸದ ಲಾರಿ ಹರಿದು ಬೈಕ್ ಸವಾರರಿಬ್ಬರ ದುರ್ಮರಣ (Accident) ಹೊಂದಿರುವಂತಹ ದುರಂತ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ನಡೆದಿದೆ. ಮೃತ ಬೈಕ್ ಸವಾರರಿಬ್ಬರ ಗುರು ಪತ್ತೆಯಾಗಿಲ್ಲ. ತ್ಯಾಜ್ಯ ಸುರಿಯಲು ಹೋಗುತ್ತಿದ್ದ ವೇಳೆ ಬೈಕ್ಗೆ ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಲಾರಿ ಸಮೇತ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಿಬಿಎಂಪಿ ಕಸದ ಲಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2 ತಿಂಗಳ ಹಿಂದೆಯೂ ಕಸದ ಲಾರಿಗೆ ಓರ್ವ ಯುವಕ ಬಲಿಯಾಗಿದ್ದ. ಇದೀಗ ಮತ್ತಿಬ್ಬರು ಬೈಕ್ ಸವಾರರು ಬಿಬಿಎಂಪಿ ಕಸದ ಲಾರಿಗೆ ಬಲಿಯಾಗಿದ್ದಾರೆ.