ಬೆಂಗಳೂರು:
ಬೀದಿ ನಾಯಿ ಮೇಲೆ ಆಸಿಡ್ ದಾಳಿ ಮಾಡಿ ಶ್ವಾನ ರಕ್ಷಣಗೆ ಹೋದ ವೃದ್ಧೆಗೆ ಬೆದರಿಕೆ ಹಾಕಿದ್ದಾರೆ.
ಮಾರ್ಚ್ 4 ರಂದು ನಾಲ್ಕರಿಂದ ಐದು ಜನ ಸೇರಿ ಬೀದಿ ನಾಯಿಯನ್ನು ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ನಾಯಿ ಮೇಲೆ ಪೆಟ್ರೋಲ್ ಮತ್ತು ಆಸಿಡ್ ಸುರಿದಿದ್ದಾರೆ. ಶ್ವಾನವನ್ನು ಆರೈಕೆ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೆಲ್ಲವನ್ನು ಗಮನಿಸಿದ ಐವತ್ತು ವರ್ಷದ ಮಹಿಳೆ ಮರುದಿನ ಹೋಗಿ ಯುವಕರನ್ನು ಪ್ರಶ್ನೆ ಮಾಡಿದ್ದಾರೆ.
ಬನಶಂಕರಿ ಪೊಲೀಸರು ಐಪಿಸಿ ಸೆಕ್ಷನ್ 34 (ಹಲವು ವ್ಯಕ್ತಿಗಳಿಂದ ಮಾಡಿದ ಕ್ರಿಮಿನಲ್ ಆಕ್ಟ್), 428 (ಯಾವುದೇ ಪ್ರಾಣಿಗಳನ್ನು ಕೊಲ್ಲುವುದು, ವಿಷಪೂರಿತಗೊಳಿಸುವುದು, ಅಂಗವಿಕಲಗೊಳಿಸುವುದು ಅಥವಾ ನಿಷ್ಪ್ರಯೋಜಕವಾಗಿಸುವ ಮೂಲಕ ದುಷ್ಕೃತ್ಯ ಎಸಗುವವರು), 429 (ಜಾನುವಾರುಗಳನ್ನು ಕೊಂದು ಅಥವಾ ಊನಗೊಳಿಸುವುದು ಇತ್ಯಾದಿ) ಮತ್ತು 354 (ಯಾವುದಾದರೂ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.