ಬೆಂಗಳೂರು ದಕ್ಷಿಣ ಜಿಲ್ಲೆ (ಮನಗರ): ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಖಾಸಗಿ ಸಂಸ್ಥೆಗಳ ಜಾಹಿರಾತು ಅಂಟಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ವಿಚಾರದಲ್ಲಿ ತಮ್ಮ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಎಂಟಿಸಿ ಬಸ್ಗಳ ಜಾಹಿರಾತುಗಳಿಂದ ವರ್ಷಕ್ಕೆ ಸುಮಾರು ₹60 ಕೋಟಿ ಆದಾಯ ಬರುತ್ತಿದೆ ಎಂದು ಹೇಳಿದ್ದಾರೆ. ಈ ಆದಾಯದಿಂದಲೇ ಸಾರಿಗೆ ಸಂಸ್ಥೆಗಳ ಕಾರ್ಯಾಚರಣೆ ಸುಗಮವಾಗಿ ನಡೆಯುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
“ಯಾವುದೇ ಉತ್ಪನ್ನದ ಬಗ್ಗೆ ಜನರಿಗೆ ಅಸಮಾಧಾನ ಇದ್ದರೆ, ಅದನ್ನು ದೇಶವ್ಯಾಪಿಯಾಗಿ ನಿಷೇಧ ಮಾಡಬೇಕು. ಉದಾಹರಣೆಗೆ ಗುತ್ತ್ಕಾ. ಗುತ್ತ್ಕಾವನ್ನು ದೇಶದ ಮಟ್ಟದಲ್ಲಿ ಬ್ಯಾನ್ ಮಾಡಲಿ. ಬಸ್ ಮೇಲೆ ಸ್ಟಿಕ್ಕರ್ ಹಾಕುವುದನ್ನು ವಿರೋಧಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ,” ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಬಸ್ಗಳ ಮೇಲೆ ಅತಿಯಾದ ಜಾಹಿರಾತು ಅಂಟಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಮಾತನಾಡಿದ ಸಚಿವರು, ಬಿಎಂಟಿಸಿ ಬಸ್ಗಳಲ್ಲಿ ಮಾತ್ರ ಜಾಹಿರಾತಿಗೆ ಅವಕಾಶವಿದ್ದು, ಅದಕ್ಕೂ ಗರಿಷ್ಠ 40% ಮಿತಿ ವಿಧಿಸಲಾಗಿದೆ ಎಂದು ತಿಳಿಸಿದರು.
“ಪೂರ್ಣ ಬಸ್ಗೆ ಜಾಹಿರಾತು ಅಂಟಿಸುವುದಕ್ಕೆ ಅವಕಾಶ ಇಲ್ಲ. ಈ ಬಗ್ಗೆ ನಾನು ಈಗಾಗಲೇ ಆದೇಶ ನೀಡಿದ್ದೇನೆ. ಮುಂದಿನ ದಿನಗಳಲ್ಲಿ 40%ಕ್ಕಿಂತ ಹೆಚ್ಚು ಜಾಹಿರಾತು ಮಾಡಲು ಅವಕಾಶ ಇರುವುದಿಲ್ಲ,” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತೀಚೆಗೆ ಮತ್ತೆ ಬಿಎಂಟಿಸಿ ಬಸ್ಗಳಲ್ಲಿ ಜಾಹಿರಾತು ಹೆಚ್ಚಾಗಿದೆ ಎಂಬ ಆರೋಪಗಳ ನಡುವೆಯೇ ಸಚಿವರ ಈ ಹೇಳಿಕೆ ಬಂದಿದೆ. ಸರ್ಕಾರದ ನೀತಿ ಆದಾಯಾಧಾರಿತವಾದರೂ, ನಿಯಂತ್ರಣ ಮತ್ತು ಮಿತಿಗಳೊಂದಿಗೆ ಜಾಹಿರಾತು ಅನುಮತಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಈ ವಿಚಾರವು ಸಾರ್ವಜನಿಕ ಸಾರಿಗೆಯ ಸೌಂದರ್ಯ, ಸಾರ್ವಜನಿಕ ಆರೋಗ್ಯ ಮತ್ತು ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ ನಡುವಿನ ಸಮತೋಲನದ ಬಗ್ಗೆ ಚರ್ಚೆಗೆ ಕಾರಣವಾಗುತ್ತಿದೆ.
