Home Uncategorized AFG Vs NZ: ಅಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ 149 ರನ್‌ಗಳ ಜಯ : ನಂಬರ್ 1...

AFG Vs NZ: ಅಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ 149 ರನ್‌ಗಳ ಜಯ : ನಂಬರ್ 1 ಸ್ಥಾನಕ್ಕೆ ಜಿಗಿತ

29
0

ಚೆನ್ನೈ: ಬುಧವಾರ ಚೆನ್ನೈನಲ್ಲಿ‌ (Chennai) ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ (One-Sided World Cup Match) ಅಫ್ಘಾನಿಸ್ತಾನದ (Afghanistan) ವಿರುದ್ಧ ನ್ಯೂಜಿಲೆಂಡ್ (New Zealand) 149 ರನ್‌ಗಳ ಜಯಗಳಿಸಿದೆ. ಈ ಮೂಲಕ 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ನ್ಯೂಜಿಲೆಂಡ್ ನೀಡಿದ್ದ 289 ರನ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ 34.4 ಓವರ್‌ಗಳಿಗೆ 139 ರನ್ ಗಳಿಸಿ ಆಲ್‌ಔಟ್ ಆಯಿತು. ನ್ಯೂಜಿಲೆಂಡ್‌ನ ಮಾರಕ ಬೌಲಿಂಗ್‌ಗೆ ಅಫ್ಘಾನ್ ಬ್ಯಾಟರ್ಸ್ ಪ್ರತ್ಯುತ್ತರ ನೀಡಲಾಗದೇ ಸುಸ್ತಾಗಿ ಸೋಲೊಪ್ಪಿಕೊಂಡರು. ರೆಹಮತ್ ಶಾ 36 ರನ್, ಅಜ್ಮತುಲ್ಲಾ 27 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಟಾಸ್ ಗೆದ್ದು ಅಫ್ಘಾನಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು. 289 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ನ್ಯೂಜಿಲೆಂಡ್ ಬೌಲರ್‌ಗಳ ಮಾರಕ ಬೌಲಿಂಗ್‌ಗೆ ಶರಣಾಗಿ ಸೋಲನುಭವಿಸಿತು.

ವಿಲ್‌ಯಂಗ್ (54), ಟಾಮ್ ಲಥಾಮ್ (68) ಹಾಗೂ ಗ್ಲೆನ್ ಫಿಲಿಪ್ಸ್ (71) ಅರ್ಧಶತಕ ಬಾರಿಸುವ ಮೂಲಕ ನ್ಯೂಜಿಲೆಂಡ್ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದರು

The post AFG Vs NZ: ಅಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ 149 ರನ್‌ಗಳ ಜಯ : ನಂಬರ್ 1 ಸ್ಥಾನಕ್ಕೆ ಜಿಗಿತ appeared first on Ain Live News.

LEAVE A REPLY

Please enter your comment!
Please enter your name here