ಬೆಂಗಳೂರು:
75ನೇ ಗಣರಾಜ್ಯೋತ್ಸವ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ನೆರೆವೆರೆಸಿದರು.
ಅವರು ಮಾತನಾಡಿ, ಜನವರಿ 26 ನಮ್ಮ ಜೀವನದಲ್ಲಿ ಹಾಗೂ ಭಾರತದ ಇತಿಹಾಸದಲ್ಲಿ ವಿಶೇಷ ದಿನ ಈ ದೇಶದ ಸಂವಿಧಾನ ಅಸ್ತಿತ್ವದಲ್ಲಿ ಇಲ್ಲದೇ ಹೋಗಿದ್ದರೆ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ ಇಷ್ಟೊಂದು ಪ್ರಯತ್ನ ಮಾಡಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿ ಸಂವಿಧಾನ ರಚಿಸಿದರು.
ಪ್ರಮುಖವಾಗಿ ದೇಶದ ಸಂವಿಧಾನದಲ್ಲಿ ಇರುವ ಪ್ರಮುಖ ಅಂಶಗಳು ಸಮಾನತೆ, ಭ್ರಾತೃತ್ವತೆ, ಜಾತ್ಯಾತೀತ ತತ್ವ ಇದೆಲ್ಲ ಕೂಡಿ ನಮ್ಮ ಸಂವಿಧಾನ ಆಗಿದೆ ಇವತ್ತು ಸಂವಿಧಾನ ತಿರುಚುದು ಬದಲಾವಣೆ ಮಾಡಬೇಕು ಎಂಬ ಬಹಳ ದೊಡ್ಡ ಕುತಂತ್ರ ಆರ್ ಎಸ್ ಎಸ್ ಹಾಗೂ ಬಿಜೆಪಿ ಮಾಡ್ತಿದೆ
ಸ್ವಾಯತ್ತ ಸಂಸ್ಥೆಗಳನ್ನೆಲ್ಲ ನಾಶ ಮಾಡಬೇಕು ಅಂತ ಬಿಜೆಪಿ ಸರ್ವ ಪ್ರಯತ್ನ ಮಾಡ್ತಿದೆ ಮೋದಿಯವರು ಆರ್ ಎಸ್ ಎಸ್ ಕೈಗೊಂಬೆಯಾಗಿ ನಡೆದುಕೊಂಡಿದ್ದಾರೆ ಇದರಿಂದ ನ್ಯಾಯಾಂಗ ಹಾಗೂ ಜಾತ್ಯಾತೀತ ತತ್ವಕ್ಕೆ ದೊಡ್ಡ ಪೆಟ್ಟು ಬೀಳ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕರು ಉಪಸ್ಥಿತ ಇದ್ದರು.