Home Uncategorized Ajay Devgn: 175 ಕೋಟಿ ರೂ. ಗಡಿಯತ್ತ ‘ದೃಶ್ಯಂ 2’ ಸಿನಿಮಾ; ವರ್ಷಾಂತ್ಯಕ್ಕೆ ಅಜಯ್​ ದೇವಗನ್​...

Ajay Devgn: 175 ಕೋಟಿ ರೂ. ಗಡಿಯತ್ತ ‘ದೃಶ್ಯಂ 2’ ಸಿನಿಮಾ; ವರ್ಷಾಂತ್ಯಕ್ಕೆ ಅಜಯ್​ ದೇವಗನ್​ ಹ್ಯಾಪಿ

34
0

ಒಟಿಟಿ ಪ್ರಭಾವ ಜಾಸ್ತಿ ಇವರು ಈ ಕಾಲದಲ್ಲಿ ರಿಮೇಕ್​ ಸಿನಿಮಾಗಳು ಸೂಪರ್​ ಹಿಟ್​ ಆಗುವುದು ಅಚ್ಚರಿಯೇ ಸರಿ. ಬಾಲಿವುಡ್​ನಲ್ಲಿ ಅಜಯ್​ ದೇವಗನ್ (Ajay Devgn)​ ನಟನೆಯ ‘ದೃಶ್ಯಂ 2’ ಸಿನಿಮಾ ಈ ವರ್ಷ ಜಯಭೇರಿ ಬಾರಿಸಿದೆ. ಮೋಹನ್​ಲಾಲ್​ ನಟನೆಯ ಮಲಯಾಳಂನ ‘ದೃಶ್ಯಂ 2’ ಸಿನಿಮಾದ ಹಿಂದಿ ರಿಮೇಕ್​ ಆಗಿರುವ ಈ ಚಿತ್ರಕ್ಕೆ ಉತ್ತರ ಭಾರತದ ಮಂದಿ ಫಿದಾ ಆಗಿದ್ದಾರೆ. ಮೊದಲ ದಿನದಿಂದಲೂ ಈ ಚಿತ್ರ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ಬಿಡುಗಡೆಯಾಗಿ 12 ದಿನ ಕಳೆದಿದ್ದರೂ ಕೂಡ ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್​ (Box Office Collection) ಮಾಡುವ ಮೂಲಕ ‘ದೃಶ್ಯಂ 2’ (Drishyam 2) ಸಿನಿಮಾ ಯಶಸ್ಸು ಗಳಿಸಿದೆ. ಆ ಮೂಲಕ ಬಾಲಿವುಡ್​ ಬಾಕ್ಸ್​ ಆಫೀಸ್​ಗೆ ಹೊಸ ಚೈತನ್ಯ ನೀಡಿದೆ.

ನವೆಂಬರ್​ 18ರಂದು ‘ದೃಶ್ಯಂ 2’ ಚಿತ್ರ ರಿಲೀಸ್​ ಆಯ್ತು. ಮೊದಲ ದಿನ ಈ ಸಿನಿಮಾ ಗಳಿಸಿದ್ದು 15.38 ಕೋಟಿ ರೂಪಾಯಿ. ಮರುದಿನ ಕಲೆಕ್ಷನ್​ (21.59 ಕೋಟಿ ರೂ.) ಹೆಚ್ಚಿತು. ಭಾನುವಾರ ಬರೋಬ್ಬರಿ 27.17 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಅರ್ಧಶತಕ ಬಾರಿಸಿ ಮುನ್ನುಗಿತು. ನಂತರದ ಕೆಲವೇ ದಿನಗಳಲ್ಲಿ 100 ಕೋಟಿ ರೂಪಾಯಿ ಕ್ಲಬ್​ ಕೂಡ ಸೇರಿತು. ಈಗ 155 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ.

12ನೇ ದಿನವಾದ ನವೆಂಬರ್​ 29ರಂದು ‘ದೃಶ್ಯಂ 2’ ಚಿತ್ರ 5.15 ಕೋಟಿ ರೂಪಾಯಿ ಗಳಿಸಿದೆ. ಇದೇ ರೀತಿ ಇನ್ನೂ ಒಂದಷ್ಟು ದಿನ ಕಮಾಯಿ ಮುಂದುವರಿದರೆ ಅನಾಯಾಸವಾಗಿ 175 ಕೋಟಿ ರೂಪಾಯಿ ಕಲೆಕ್ಷನ್​ ಆಗಲಿದೆ. ಅಂತಿಮವಾಗಿ ಈ ಚಿತ್ರದ ಗಳಿಕೆ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಈ ವರ್ಷ ಅಜಯ್​ ದೇವಗನ್​ ನಟನೆಯ ‘ರನ್​ವೇ 34’ ಹಾಗೂ ‘ಥ್ಯಾಂಕ್​ ಗಾಡ್​’ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಕೊನೆಗೂ ಅವರ ಕೈ ಹಿಡಿದಿರುವುದು ‘ದೃಶ್ಯಂ 2’ ಚಿತ್ರ. ಈ ಸಿನಿಮಾದ ಗೆಲುವಿನಿಂದಾಗಿ ವರ್ಷಾಂತ್ಯದಲ್ಲಿ ಅವರ ಮುಖದಲ್ಲಿ ನಗು ಅರಳುವಂತಾಗಿದೆ. ಅವರ ವೃತ್ತಿಜೀವನದ ಮೈಲೇಜ್​ ಹೆಚ್ಚಲು ಈ ಚಿತ್ರ ಸಹಕಾರಿ ಆಗಿದೆ.

‘ದೃಶ್ಯಂ 2’ ಸಿನಿಮಾದಲ್ಲಿ ಅಜಯ್​ ದೇವಗನ್​ ಜೊತೆ ಟಬು, ಇಶಿತಾ ದತ್ತ, ಶ್ರಿಯಾ ಶರಣ್​, ಅಕ್ಷಯ್​ ಖನ್ನಾ ಮುಂತಾದವರು ನಟಿಸಿದ್ದಾರೆ. ಅಭಿಷೇಕ್​ ಪಾಠಕ್​ ನಿರ್ದೇಶನ ಮಾಡಿದ್ದು, ದೇವಿಶ್ರೀ ಪ್ರಸಾದ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here