Home Uncategorized Amanatullah Khan: ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಪ್ ಶಾಸಕನ ಮನೆ ED ಮೇಲೆ ದಾಳಿ

Amanatullah Khan: ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಪ್ ಶಾಸಕನ ಮನೆ ED ಮೇಲೆ ದಾಳಿ

20
0

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೆಳ್ಳಂ ಬೆಳಗ್ಗೆ ಆಪ್‌ ಶಾಸಕ ಅಮಾನತುಲ್ಲಾ ಖಾನ್‌ (Amanatullah Khan) ಮನೆ ಮೇಲೆ ದಾಳಿ ನಡೆಸಿದೆ. ದೆಹಲಿಯ ಭ್ರಷ್ಟಾಚಾರ ವಿರೋಧಿ ಸಂಸ್ಥೆ (ದೆಹಲಿ ಆ್ಯಂಟಿ ಕರಪ್ಷನ್‌ ಬ್ಯೂರೋ) ಸಲ್ಲಿಸಿದ ಎಫ್‌ಐಆರ್ ಮತ್ತು ಸಿಬಿಐ ದಾಖಲಿಸಿದ್ದ ಮತ್ತೊಂದು ಎಫ್‌ಐಆರ್‌ ಆಧರಿಸಿ ಇಡಿ ಕ್ರಮ ಕೈಗೊಂಡಿದೆ.

Home remedies: ಚಳಿಗಾಲದಲ್ಲಿ ಕಿವಿ ನೋವು ನಿವಾರಿಸಲು ಇಲ್ಲಿದೆ ಮನೆಮದ್ದು!

ಅಮಾನತುಲ್ಲಾ ಖಾನ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ವಕ್ಫ್‌ ಮಂಡಳಿಯಲ್ಲಿ (Delhi Waqf Board) ಅಕ್ರಮ ನೇಮಕಾತಿ ನಡೆದಿದ್ದು, ಭ್ರಷ್ಟಾಚಾರದಲ್ಲೂ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶೋಧ ನಡೆಸಲಾಗುತ್ತಿದೆ. ದೆಹಲಿಯ ವಕ್ಫ್‌ ಮಂಡಳಿಗೆ ಸಂಬಂಧಿಸಿದ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿಂತೆ ವರ್ಷ ಎಸಿಬಿ ಅಮನತುಲ್ಲಾರನ್ನ ಬಂಧಿಸಿತ್ತು. ನಂತರ ಸೆಪ್ಟೆಂಬರ್ 2022ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು

The post Amanatullah Khan: ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಪ್ ಶಾಸಕನ ಮನೆ ED ಮೇಲೆ ದಾಳಿ appeared first on Ain Live News.

LEAVE A REPLY

Please enter your comment!
Please enter your name here