Home Uncategorized ಯೋಜನಾ ವ್ಯಾಪ್ತಿಯಲ್ಲಿ ರೇರಾ ಅನುಮತಿ ಇಲ್ಲದೆ ನಿವೇಶನ ನೋಂದಣಿ ಮಾಡದಿರಲು ತಿದ್ದುಪಡಿ – ಜಮೀರ್ ಅಹಮದ್

ಯೋಜನಾ ವ್ಯಾಪ್ತಿಯಲ್ಲಿ ರೇರಾ ಅನುಮತಿ ಇಲ್ಲದೆ ನಿವೇಶನ ನೋಂದಣಿ ಮಾಡದಿರಲು ತಿದ್ದುಪಡಿ – ಜಮೀರ್ ಅಹಮದ್

22
0
Amendment not to register plot without RERA permission in planning area - Karnataka Minister Zameer Ahmed
Amendment not to register plot without RERA permission in planning area - Karnataka Minister Zameer Ahmed

ದಂಡ ಪಾವತಿಸದ ಪ್ರತಿಷ್ಟಿತ ಬಿಲ್ಡರ್ ಗಳ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು :

ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳ ಹಾವಳಿ ತಡೆಗಟ್ಟಲು ರೇರಾ (ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ )ದ ಅನುಮತಿ ಇಲ್ಲದೆ ನಿವೇಶನಗಳ ನೋಂದಣಿ ಮಾಡದಂತೆ ಕಾನೂನಿಗೆ ತಿದ್ದು ಪಡಿ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಮಂಗಳವಾರ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಯೋಜನಾ ವ್ಯಾಪ್ತಿಯಲ್ಲಿ ಹೊಸದಾಗಿ ಬಡಾವಣೆ ರಚನೆ ಮಾಡುವವರು ರೇರಾ ಅನುಮತಿ ಪಡೆಯದೆ ನಿವೇಶನ ಮಾರಾಟ ಮಾಡುತ್ತಿದ್ದು ಕೆಲವೆಡೆ ವಿವಾದ ಇರುವ ಜಮೀನುಗಳಲ್ಲಿ ಬಡಾವಣೆ ರಚನೆ ಮಾಡಿರುವುದರಿಂದ ನಿವೇಶನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಇದನ್ನು ತಪ್ಪಿಸಲು ರೇರಾ ಅನುಮತಿ ಇಲ್ಲದಿರುವ ಬಡಾವಣೆ ಗಳ ನಿವೇಶನ ನೋಂದಣಿ ಮಾಡುವಂತಿಲ್ಲ ಎಂಬ ಕಾನೂನು ತರಲಾಗುವುದು ಎಂದು ಹೇಳಿದರು.

ಯೋಜನಾ ವ್ಯಾಪ್ತಿಯಲ್ಲಿ ಬಡಾವಣೆ ರಚನೆ ಗೆ
ರೇರಾ ದಲ್ಲಿ ನೋಂದಣಿ ಕಡ್ಡಾಯ ಎಂದು ನಿಯಮ ಇದ್ದರೂ ಅನಧಿಕೃತ ವಾಗಿ ಕೆಲವರು ಬಡಾವಣೆ ರಚಿಸಿ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಸಮಸ್ಯೆ ಉಂಟಾದರೆ ನಿವೇಶನ ಖರೀದಿಸಿದವರು ರೇರಾ ಬಳಿ ಬರುತ್ತಿದ್ದಾರೆ. ಆದರೆ ಅ ಹಂತದಲ್ಲಿ ರೇರಾ ಏನೂ ಮಾಡಲು ಬರುವುದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಯಮಾವಳಿ ರೂಪಿಸಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಕಂದಾಯ ಇಲಾಖೆ ಜತೆ ಚರ್ಚಿಸಿ ಅಗತ್ಯ ಬಿದ್ದರೆ ಸಂಪುಟದಲ್ಲಿ ಚರ್ಚಿಸಿ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

ಕಠಿಣ ಕ್ರಮ:  ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವ ಬಿಲ್ಡರ್, ಡೆವಲಪರ್, ಪ್ರಮೋಟರ್ ಗಳು ಒಪ್ಪಂದದಂತೆ ನಿಗದಿತ ವೇಳೆಯಲ್ಲಿ  ಪ್ಲಾಟ್ ಕೊಡದೆ ಅನಗತ್ಯ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವೆಡೆ ಒಪ್ಪಂದ ದ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತಕ್ಕೆ ಒತ್ತಾಯ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದು ಆ ಬಗ್ಗೆ ಗಂಭೀರ ವಾಗಿ ಪರಿಗಣಿಸಲಾಗುವುದು. ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣ ಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರೇರಾ ವ್ಯಾಪ್ತಿಯಲ್ಲಿ ದೂರು ಪ್ರಕರಣಗಳು ಹೆಚ್ಚಾಗುತ್ತಿದ್ದು ನಿರ್ವಹಣೆ ಕಷ್ಟ ವಾಗುತ್ತಿದೆ. ಜತೆಗೆ ಅನಧಿಕೃತ ಬಡಾವಣೆಗಳ ಹಾವಳಿ ನಿಯಂತ್ರಣವೂ ಸವಾಲಾಗಿದೆ. ಹೀಗಾಗಿ ವಿಭಾಗೀಯ ಮಟ್ಟದಲ್ಲಿ ರೇರಾ ಕಚೇರಿ ಸ್ಥಾಪಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಸಂಸ್ಥೆ ಗಳ ವ್ಯಾಪ್ತಿಯಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೆ ನಿರ್ಮಾಣ ಮಾಡುವ ಅನಧಿಕೃತ ಬಡಾವಣೆ, ಅಪಾರ್ಟ್ ಮೆಂಟ್ ಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ರೇರಾ ಅನುಮತಿ ಇಲ್ಲದೆ ಒಸಿ ನೀಡುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗುವುದು ಈ ಕುರಿತು ಸಂಬಂಧಪಟ್ಟ ಇಲಾಖೆ ಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.
ರೇರಾ ಕಾರ್ಯದರ್ಶಿ ಇಬ್ರಾಹಿಂ ಮೈಗೂರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಷ್ಠಿತ ಕಂಪನಿಗಳ ವಿರುದ್ಧ ಕ್ರಮ

ಪ್ರಾಜೆಕ್ಟ್ ಗಳನ್ನು ನಿಗದಿಯಂತೆ ಪೂರ್ಣ ಗೊಳಿಸದೆ ಗ್ರಾಹಕರಿಗೆ ವಂಚಿಸಿದ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ
ನಿತೇಶ್, ಮಂತ್ರಿ ಡೆವಲಪರ್ಸ್ ಸೇರಿದಂತೆ ಪ್ರತಿಷ್ಠಿತ ಹತ್ತು ಕಂಪನಿಗಳು ರೇರಾ ಗೆ 340 ಕೋಟಿ ರೂ. ದಂಡ ದ ಮೊತ್ತ ಬಾಕಿ ಉಳಿಸಿಕೊಂಡಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದಾಗ, ಸಿಡಿಮಿಡಿಗೊಂಡ ಸಚಿವ ಜಮೀರ್ ಅಹಮದ್ ಅವರು, ವರ್ಷಗಟ್ಟಲೆ ಇವರನ್ನು ಹೇಗೆ ಬಿಟ್ಟು ಕೊಂಡಿದ್ದೀರಿ ಎಂದು ಪ್ರೆಶ್ನೆ ಮಾಡಿದರು. ತಕ್ಷಣ ಜಿಲ್ಲಾಧಿಕಾರಿ ಹಾಗೂ ಬಿಬಿಎಎಂಪಿ ಆಯುಕ್ತರ ಸಭೆ ಕರೆದು ಆ ಕಂಪನಿಗಳ ಯಾವುದೇ ಪ್ರಾಜೆಕ್ಟ್ ಗೆ ಅನುಮತಿ ನೀಡದಂತೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಅದೇ ಸಂಸ್ಥೆ ಗಳು ಬೇರೆ ಹೆಸರಿನಲ್ಲಿ ಕಂಪನಿ ತೆರೆದಿದ್ದರೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

LEAVE A REPLY

Please enter your comment!
Please enter your name here