ನವದೆಹಲಿ: ಎಡಪಂಥೀಯರ ಉಗ್ರವಾದ ತನ್ನ ಕೊನೆಯ ಹಂತದಲ್ಲಿದೆ. ಮುಂದಿನ ಎರಡು ವರ್ಷಗಳಲ್ಲಿ ಅದನ್ನು ಸಂಪೂರ್ಣವಾಗಿ ಬುಡ ಸಮೇತ ಕಿತ್ತು ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾವೋವಾದಿಗಳನ್ನು ಹತ್ತಿಕ್ಕಲು ಕೇಂದ್ರ ಪಡೆಗಳ ನಿಯೋಜನೆ, ಅಭಿವೃದ್ಧಿ ಕಾರ್ಯಗಳ ಚುರುಕು ಮತ್ತು ‘ನಿರ್ವಾತ’ ಸ್ಥಳಗಳಲ್ಲಿ ಭದ್ರತಾ ಶಿಬಿರಗಳನ್ನು ಸ್ಥಾಪಿಸುವುದು ನರೇಂದ್ರ ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
CM ಸಿದ್ದುವಿನ ಎರಡನೇ ಮುಖ ದಲಿತರನ್ನು ಅವನತಿಗೆ ದೂಡುವುದು – ಬಿ ಶ್ರೀರಾಮುಲು
‘ನಿರ್ವಾತ’ ಪ್ರದೇಶಗಳು’ ಎಂದರೆ ಮಾವೋವಾದಿಗಳ ಪ್ರಬಲ ನೆಲೆಯಾಗಿವೆ. ಇವು ಹೆಚ್ಚಾಗಿ ದಟ್ಟ ಅರಣ್ಯ ಪ್ರದೇಶಗಳಾಗಿದ್ದು, ಭದ್ರತಾ ಪಡೆಗಳು ಅಥವಾ ಆಡಳಿತ ಯಂತ್ರಗಳು ಯಾವುದೇ ದಾಳಿ ನಡೆಸಲು ಸಾಧ್ಯವಾಗುವುದಿಲ್ಲ. ನಕ್ಸಲ್ ನಿಗ್ರಹ ಪಡೆಗಳು ಕಾರ್ಯತಂತ್ರದ ಭಾಗವಾಗಿ ಅಂತಹ ಸ್ಥಳಗಳಲ್ಲಿ ಮತ್ತಷ್ಟು ಆಳವಾಗಿ ಪ್ರವೇಶಿಸುತ್ತಿವೆ. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಅವರ ಚಟುವಟಿಕೆಗಳನ್ನು ಹಿಮ್ಮೆಟ್ಟಿಸುತ್ತಿವೆ ಮತ್ತು ಆಡಳಿತಾತ್ಮಕ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಒದಗಿಸಲು ಅಲ್ಲಿ ಭದ್ರತಾ ಶಿಬಿರಗಳನ್ನು ಸ್ಥಾಪಿಸುತ್ತಿವೆ.
The post Amit Shah: ಇನ್ನೇರಡು ವರ್ಷಗಳಲ್ಲಿ ಎಡಪಂಥೀಯರ ಉಗ್ರವಾದ ಸಂಪೂರ್ಣ ನಿರ್ಮೂಲನೆ: ಅಮಿತ್ ಶಾ appeared first on Ain Live News.