Home ಬೆಂಗಳೂರು ನಗರ Anekal Tashildar Shivappa Lamani | ತಹಶೀಲ್ದಾರ್ ಶಿವಪ್ಪ ಲಮಾಣಿ ಸಸ್ಪೆಂಡ್

Anekal Tashildar Shivappa Lamani | ತಹಶೀಲ್ದಾರ್ ಶಿವಪ್ಪ ಲಮಾಣಿ ಸಸ್ಪೆಂಡ್

221
0
Anekal Tashildar Shivappa Lamani
Anekal Tashildar Shivappa Lamani suspended

ಬೆಂಗಳೂರು:

ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ಅವರನ್ನು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ.

ಕರ್ತವ್ಯ ಲೋಪ ಮತ್ತು ಉಚ್ಚ ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಅಮಾನತು ಮಾಡಲಾಗಿದೆ.

2021ರಲ್ಲಿ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಆಗಿದ್ದ ವೇಳೆ ದೇವಾಲಯದ ಮಳಿಗೆಗಳ ವಿಚಾರವಾಗಿ ಕಂದಾಯ ಇಲಾಖೆ ಹಾಗೂ ದೇವಾಲಯದ ಕಮಿಟಿ ನಡುವೆ ವಾದ ವಿವಾದಗಳು ನಡೆಯುತ್ತಿತ್ತು. ಬೇಗೂರು ಗ್ರಾಮದ ಶ್ರೀ ಸ್ಪೂರ್ತಿ ವಿನಾಯಕ ಹಾಗೂ ಶ್ರೀ ಸತ್ಯನಾರಾಯಣಸ್ವಾಮಿ ದೇವಾಲಯದ ಸಮಿತಿ ಪರವಾಗಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು.

ತಹಶೀಲ್ದಾರ್ ಶಿವಪ್ಪ ಲಮಾಣಿ ವಿರುದ್ಧ ಒಂದು ಲಕ್ಷ ದಂಡ ವಿಧಿಸಿ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು. ಜಿಲ್ಲಾಧಿಕಾರಿಗಳ ಮುಖೇನ ದೋಷಾರೋಪಣ ಪಟ್ಟಿಯನ್ನು ತಹಶೀಲ್ದಾರ್ ಶಿವಪ್ಪ ಲಮಾಣಿ ಸ್ವೀಕರಿಸಿದ ಹಿನ್ನಲೆ ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here