ಬೆಂಗಳೂರು, ಫೆಬ್ರವರಿ 4: ಬೆಂಗಳೂರು ಕೇಂದ್ರ ನಗರ ಪಾಲಿಕೆ (Bengaluru Central City Corporation) ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಇರುವ ಒಣಗಿದ ಮತ್ತು ಅಪಾಯಕಾರಿ ಮರಗಳು ಹಾಗೂ ಕೊಂಬೆಗಳು ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ಮೂಲಕ ಅವುಗಳನ್ನು ತೆರವುಗೊಳಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ.
ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ತಮ್ಮ ಸುತ್ತಮುತ್ತ ಒಣ ಅಥವಾ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಅಥವಾ ಕೊಂಬೆಗಳು ಕಂಡುಬಂದಲ್ಲಿ, ತಕ್ಷಣವೇ 1533 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ನೀಡುವಂತೆ ಪಾಲಿಕೆ ಮನವಿ ಮಾಡಿದೆ.
ಇದಕ್ಕು ಜೊತೆಗೆ 7760933913 / 9164597895 ಸಂಖ್ಯೆಗಳಿಗೂ ಕರೆ ಅಥವಾ ವಾಟ್ಸಾಪ್ ಮೂಲಕ ಮಾಹಿತಿ ನೀಡಬಹುದು. ವರದಿ ಮಾಡುವಾಗ GPS ಇರುವ ಫೋಟೋಗಳು ಹಾಗೂ ಸ್ಥಳದ ವಿವರಗಳನ್ನು ಕಳುಹಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಕ್ಷೇತ್ರವಾರು ಅರಣ್ಯಾಧಿಕಾರಿಗಳ ಸಂಪರ್ಕ ವಿವರಗಳು:
ವಲಯ–1 (Zone–1):
ಶಾಂತಿನಗರ / ಸಿ.ವಿ.ರಾಮನ್ ನಗರ
ಶ್ರೀ ವಿನಯ
ಉಪ ಅರಣ್ಯಾಧಿಕಾರಿ (Deputy Range Forest Officer)
📞 7760933913
ವಲಯ–2 (Zone–2):
ಶಿವಾಜಿನಗರ / ಚಾಮರಾಜಪೇಟೆ / ಚಿಕ್ಪೇಟೆ
ಶ್ರೀ ಶಿವಣ್ಣ
ಉಪ ಅರಣ್ಯಾಧಿಕಾರಿ
📞 9164597895
ವಲಯ–2 (Zone–2):
ಗಾಂಧಿನಗರ
ನರೇಂದ್ರ ಬಾಬು
ಅರಣ್ಯಾಧಿಕಾರಿ (Range Forest Officer)
📞 9480685399
ಪಾಲಿಕೆ ಅಧಿಕಾರಿಗಳು, ಸಾರ್ವಜನಿಕರ ಸಹಕಾರದಿಂದಲೇ ನಗರದಲ್ಲಿ ಸಂಭವಿಸಬಹುದಾದ ಮರ ಬಿದ್ದು ಉಂಟಾಗುವ ಅಪಘಾತಗಳನ್ನು ತಡೆಯಲು ಸಾಧ್ಯ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸಿ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
