Home Uncategorized Arun Sagar: ಮಗಳ ಗಲ್ಲಕ್ಕೆ ಗಾಯ; ಬಿಗ್ ಬಾಸ್ ಮನೆಯಿಂದ ಹೊರ ನಡೆದ ಅರುಣ್ ಸಾಗರ್

Arun Sagar: ಮಗಳ ಗಲ್ಲಕ್ಕೆ ಗಾಯ; ಬಿಗ್ ಬಾಸ್ ಮನೆಯಿಂದ ಹೊರ ನಡೆದ ಅರುಣ್ ಸಾಗರ್

37
0

‘ಕನ್ನಡ ಬಿಗ್ ಬಾಸ್ ಸೀಸನ್ 9’ (BBK 9) ಅಂತ್ಯವಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಪೂರ್ಣಗೊಳ್ಳಲಿದೆ. ಮನೆಯಲ್ಲಿ ಈ ವಾರ 8 ಸ್ಪರ್ಧಿಗಳು ಇದ್ದಾರೆ. ಈ ಪೈಕಿ ಇಬ್ಬರು ಈ ವಾರ ಮನೆಯಿಂದ ಔಟ್ ಆಗಬಹುದು. ಈ ಮಧ್ಯೆ ಮಗಳು ಅದಿತಿ ಸಾಗರ್​ಗೆ ಗಾಯ ಆದ ಕಾರಣ ಅರುಣ್ ಸಾಗರ್ ಅವರು ನವೆಂಬರ್ 19ರ ಎಪಿಸೋಡ್​ನಲ್ಲಿ ಬಿಗ್ ಬಾಸ್ (Bigg Boss) ಮನೆಯಿಂದ ಹೊರ ನಡೆದಿದ್ದಾರೆ. ಅವರು ಮರಳಿ ಬಿಗ್ ಬಾಸ್ ಮನೆಗೆ ಬರುತ್ತಾರೋ ಅಥವಾ ಇಲ್ಲವೋ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿತ್ತು. ಅದಕ್ಕೆ ಅದೇ ಎಪಿಸೋಡ್​ನಲ್ಲಿ ಉತ್ತರ ಸಿಕ್ಕಿದೆ.

ಅರುಣ್ ಸಾಗರ್ ಅವರು ಬಿಗ್ ಬಾಸ್ ಮೊದಲ ಸೀಸನ್​ನಲ್ಲಿ ಸ್ಪರ್ಧಿ ಆಗಿ ಬಂದಿದ್ದರು. ಕೊನೆಯ ಹಂತದವರೆಗೂ ಅವರು ಸ್ಪರ್ಧೆ ನೀಡಿದ್ದರು. ಹಲವು ವರ್ಷಗಳ ಬಳಿಕ ಅವರು ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ಬಾರಿಯೂ ಅವರು ತಮ್ಮ ಮನರಂಜನೆ ಮುಂದುವರಿಸಿದ್ದಾರೆ. ಫಿನಾಲೆ ತಲುಪಲು ಕೆಲವೇ ದಿನಗಳು ಬಾಕಿ ಇರುವಾಗ ಅವರು ಮನೆಯಿಂದ ಹೊರ ನಡೆದಿದ್ದರು. ರಾತ್ರಿ ವೇಳೆಗೆ ಮರಳಿದ್ದಾರೆ.

ಕನ್ಫೆಷನ್ ರೂಂಗೆ ಬರುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಕನ್ಫೆಷನ್ ರೂಂಗೆ ಬರುತ್ತಿದ್ದಂತೆ ಅರುಣ್ ಸಾಗರ್​ಗೆ ಶಾಕಿಂಗ್ ಸುದ್ದಿ ಸಿಕ್ಕಿತು. ‘ನಿಮ್ಮ ಮಗಳು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆದರುವ ಅವಶ್ಯಕತೆ ಇಲ್ಲ. ನೀವು ಮಗಳನ್ನು ನೋಡಲು ಹೋಗುತ್ತೀರಿ ಎಂದರೆ ಬಿಗ್ ಬಾಸ್ ವ್ಯವಸ್ಥೆ ಮಾಡುತ್ತಾರೆ’ ಎಂದು ಬಿಗ್ ಬಾಸ್ ತಿಳಿಸಿದರು. ಇದನ್ನು ಕೇಳಿ ಅರುಣ್ ಸಾಗರ್ ಭಾವುಕರಾದರು. ಆಸ್ಪತ್ರೆಗೆ ಹೋಗುವ ನಿರ್ಧಾರಕ್ಕೆ ಬಂದರು.

ಇದನ್ನೂ ಓದಿ: ‘ಬಿಗ್ ಬಾಸ್​’ ಫಿನಾಲೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಆಡಿದ ಮಾತಿನಿಂದ ಫ್ಯಾನ್ಸ್​ಗೆ ಬೇಸರ

ಅವರು ಆಸ್ಪತ್ರೆಗೆ ತೆರಳಿ ರಾತ್ರಿ ವೇಳೆಗೆ ದೊಡ್ಮನೆಗೆ ಮರಳಿದ್ದಾರೆ. ‘ಮಗಳಿಗೆ ಆಪರೇಷನ್ ಮಾಡಲಾಗಿದೆ. ತಲೆಸುತ್ತು ಬಂದು ಬಿದ್ದಳು. ಈಗ ಚೇತರಿಕೆ ಕಾಣುತ್ತಿದ್ದಾಳೆ’ ಎಂದು ಮನೆ ಮಂದಿಗೆ ಅರುಣ್ ಸಾಗರ್ ಅಪ್​ಡೇಟ್ ನೀಡಿದರು. ಈ ವಿಚಾರ ಕೇಳಿ ಮನೆ ಮಂದಿ ನೊಂದುಕೊಂಡಿದ್ದಾರೆ. ಅರುಣ್ ಸಾಗರ್ ಅವರು ಮನೆಗೆ ಮರಳಿರುವುದಕ್ಕೆ ಎಲ್ಲರಿಗೂ ಖುಷಿ ಆಗಿದೆ. ಅದಿತಿ ಅವರನ್ನು ಅರುಣ್ ಸಾಗರ್ ತುಂಬಾನೇ ಪ್ರೀತಿ ಮಾಡುತ್ತಾರೆ. ಈಗ ಅವರಿಗೆ ಈ ರೀತಿ ಆಗಿರುವುದರಿಂದ ಅರುಣ್ ಸಾಗರ್ ಕುಗ್ಗುವ ಸಾಧ್ಯತೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

LEAVE A REPLY

Please enter your comment!
Please enter your name here