ಬೆಂಗಳೂರು:
ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್ ಗೆ ಗುಣರಂಜನ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಕುಸ್ತಿ ಸಂಘದ ಚುನಾವಣೆಯ ಚುನಾವಣಾಧಿಕಾರಿಗಳಾದ ನಿವೃತ್ತ ನ್ಯಾಯಾಧೀಶರಾದ ರಾಮಚಂದ್ರ ಎಮ್ ಅವರ ನೇತೃತ್ವದಲ್ಲಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯ್ಕ್ ಅವರ ಉಪಸ್ಥಿತಿಯಲ್ಲಿ ಇಂದು ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು.
![ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್ ಗೆ ಬಿ.ಗುಣರಂಜನ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆ 1 B. Gunaranjan Shetty elected as President of Karnataka State Wrestling Federation](https://kannada.thebengalurulive.com/wp-content/uploads/2022/12/B.-Gunaranjan-Shetty-elected-as-President-of-Karnataka-State-Wrestling-Federation2.jpeg)
ಬೆಂಗಳೂರಿನ, ಎಂ.ಜಿ.ರಸ್ತೆಯ, ಬಾರ್ಟನ್ ಸೆಂಟರ್‌ನ, 12ನೇ ಮಹಡಿಯಲ್ಲಿರುವ, ಹೋಟೆಲ್ ಐವರಿ ಟವರ್‌ನ, ಚೆಕ್ಕರ್ಸ್ ಹಾಲ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ನೂತನ ಪದಾಧಿಕಾರಿಗಳ ಚುನಾವಣೆಯ ನಂತರ ಮಾತನಾಡುತ್ತಾ ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ನೂತನ ಅಧ್ಯಕ್ಷ ಗುಣರಂಜನ್ ಶೆಟ್ಟಿ, “ನನ್ನನ್ನು ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಭಾರತೀಯ ಕುಸ್ತಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು,” ಅರ್ಪಿಸುತ್ತ, “ಈ ಉನ್ನತವಾದ ಜವಾಬ್ದಾರಿಯನ್ನು ಬಹಳ ನಿಷ್ಠೆಯಿಂದ ಪ್ರಾಮಾಣಿಕವಾಗಿ ನಿರ್ವಹಿಸಿ ರಾಜ್ಯದಲ್ಲಿ ಕುಸ್ತಿ ಕ್ರೀಡೆಯನ್ನು ದೇಶದಲ್ಲೇ ಮಾದರಿಯಾಗಿಸಲು ಶ್ರಮಿಸುತ್ತೇನೆ,” ಎಂದರು.
![ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್ ಗೆ ಬಿ.ಗುಣರಂಜನ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆ 2 B. Gunaranjan Shetty elected as President of Karnataka State Wrestling Federation](https://kannada.thebengalurulive.com/wp-content/uploads/2022/12/B.-Gunaranjan-Shetty-elected-as-President-of-Karnataka-State-Wrestling-Federation1.jpeg)
ಹಾಗೆ ಚುನಾವಣೆಯಲ್ಲಿ ಆಯ್ಕೆಯಾದ 14 ಜನರ ಸಮಿತಿಯ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಡಾಕ್ ಕಮಿಟಿಯ ಅಧ್ಯಕ್ಷರಾದ ವಿ.ಎನ್.ಪ್ರಸೂದ್, ಸಂಚಾಲಕರಾದ ಆರ್.ಕೆ.ಪುರುಷೋತ್ತಮ್, ಸದಸ್ಯರಾದ ಎಮ್.ಲೋಗಾನಾಥನ್ ಅವರ ಉಪಸ್ಥಿತ ಇದ್ದರು.
ಗುಣರಂಜನ್ ಶೆಟ್ಟಿ ಪರಿಸರವಾದಿ ಮತ್ತು ನಟಿ ಅನುಷ್ಕಾ ಶೆಟ್ಟಿ ಅವರ ಹಿರಿಯ ಸಹೋದರ.