ಬೆಂಗಳೂರು: ಬೆಂಗಳೂರು ಹಾಗೂ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಆಸ್ತಿ ದಾಖಲೆ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಈ ಹೊಸ ನಿರ್ದೇಶನದ ಪ್ರಕಾರ, ಬಿ ಖಾತೆ (B-Khata) ಹೊಂದಿರುವ ಆಸ್ತಿ ಮಾಲೀಕರು ಮೊದಲು ಇ-ಖಾತೆ (e-Khata) ಪಡೆದು ನಂತರ ಮಾತ್ರ ಎ ಖಾತೆ (A-Khata) ಪರಿವರ್ತನೆಗೆ ಅರ್ಜಿ ಸಲ್ಲಿಸಬೇಕಾಗಿದೆ.
ಇದಕ್ಕೂ ಮೊದಲು ರಾಜ್ಯ ಸರ್ಕಾರವು ನೇರವಾಗಿ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಪ್ರಕ್ರಿಯೆ ಸುಗಮಗೊಳಿಸಿದೆ ಎಂದು ಘೋಷಿಸಿತ್ತು. ಆದರೆ ಇದೀಗ ಪ್ರಕಟವಾದ ಹೊಸ ಕ್ರಮದಲ್ಲಿ ಮೊದಲು ಅಂತಿಮ ಬಿ ಇ-ಖಾತೆ (Final B e-Khata) ಪಡೆದು ನಂತರ ಬಿ ಟು ಎ ಖಾತೆ ಪರಿವರ್ತನೆ (B to A Khata Conversion) ಮಾಡಲು ಸೂಚನೆ ನೀಡಲಾಗಿದೆ.
ಆಸ್ತಿ ಮಾಲೀಕರಿಗಾಗಿ ಹಂತ ಹಂತದ ಪ್ರಕ್ರಿಯೆ:
- ಮೊದಲು BBMP eAasthi ಪೋರ್ಟಲ್ (https://BBMPeaasthi.karnataka.gov.in) ಗೆ ಭೇಟಿ ನೀಡಿ ನಿಮ್ಮ ಆಸ್ತಿ ವಿವರಗಳ ಆಧಾರದಲ್ಲಿ ಫೈನಲ್ ಬಿ ಇ-ಖಾತೆ (Final B e-Khata) ಪಡೆಯಿರಿ.
- ನಂತರ ಆ ಖಾತೆಯ ePID ಸಂಖ್ಯೆ ಬಳಸಿ BBMP BtoA Khata ಪೋರ್ಟಲ್ (https://BBMP.karnataka.gov.in/BtoAKhata) ನಲ್ಲಿ ಎ ಖಾತೆ ಪರಿವರ್ತನೆಗೆ ಅರ್ಜಿ ಸಲ್ಲಿಸಿ.
- ಸರ್ಕಾರದ ಮಾರ್ಗದರ್ಶನಕ್ಕಾಗಿ ತರಬೇತಿ ವೀಡಿಯೊ ಲಿಂಕ್ಗಳು ಲಭ್ಯವಿವೆ:
- ಕನ್ನಡ: https://tinyurl.com/v9naynyv
- English: https://tinyurl.com/3xjs6eu8
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಐದು ನಗರ ಪಾಲಿಕೆಗಳು ಈ ಕ್ರಮವನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು, ಆಸ್ತಿ ದಾಖಲೆಗಳ ಡಿಜಿಟಲೀಕರಣ ಮತ್ತು ಪಾರದರ್ಶಕತೆ ಖಚಿತಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಅಧಿಕಾರಿಗಳ ಪ್ರಕಾರ, ಈ ಹೊಸ ಕ್ರಮದ ಮೂಲಕ ಎಲ್ಲಾ ಆಸ್ತಿ ದಾಖಲೆಗಳು ಒಂದೇ ಡಿಜಿಟಲ್ ಪ್ಲಾಟ್ಫಾರ್ಮ್ನಡಿ ತರಲಾಗುತ್ತದೆ. ಹೀಗಾಗಿ ಹಿಂದಿನ ಬಿ ಖಾತೆ ದಾಖಲೆಗಳಲ್ಲಿ ಕಂಡುಬಂದ ಅಸಂಗತತೆಗಳು ನಿವಾರಣೆಯಾಗಲಿವೆ.
