ಬೆಂಗಳೂರು: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಯಲ್ಲಿ ಕೋವಿಡ್ ಸಮಯ ದಲ್ಲಿ ಮಾರ್ಷಲ್ ಕೆಲಸ ಕೊಡ್ಸ್ತೀನಿ ಅಂತ ಹೇಳಿ ಉದ್ಯೋಗಾಂಕ್ಷಿಗಳಿಂದ 6 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಿದ ಖತರ್ನಾಕ್ ಕಿಲಾಡಿ ಹಣ ವನ್ನು ಗರ್ಲ್‌ಫ್ರೆಂಡ್ ಜ್ಯೋತೆ ಲಕ್ಸರೀ ಲೈಫ್ ನಾ ಲೀಡ್ ಮಾಡಲು ಹೋಗಿ ಪೊಲೀಸ್ ಅತಿಥಿ ಆಗಿದಾನೆ….ಅದೇನು ಅಂತ ಈ ಸ್ಟೋರಿ ನೋಡಿ…
ಈ ಫೋಟೋ ದಲ್ಲಿ ಇರುವ ವೆಕ್ತಿ ಹರ್ಷ ಹೊಸಕೋಟೆಯ ಲಕ್ಕೊಂಡನಹಳ್ಳಿಯ ನಿವಾಸಿಯಾಗಿರುವ ಇತ ಜೆ.ಪಿ.ನಗರದಲ್ಲಿ ವಾಸವಾಗಿದ್ದ. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದಾನೆ. ಕೊರೊನಾ ಸಮಯದಲ್ಲಿ ಬಿಬಿಎಂಪಿ ಕಚೇರಿಯ ವಾರ್ ರೂಮ್ ನಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದ. ಬಿಬಿಎಂಪಿಯಿಂದ ಐಡಿ ಕಾರ್ಡ್ ಹೊಂದಿದ ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿಗೆ ಬೇಡಿಕೆ ಇರುವುದು ಗೊತ್ತಾಗಿದೆ.
ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ತಾಯಿ..! ‘ತಾಯ್ತನಕ್ಕೆ ಕಳಂಕ’ ಎಂದ ಹೈಕೋರ್ಟ್
ಇದನೇ ಬಂಡವಾಳ ಮಾಡಿಕೊಂಡು ಉದ್ಯೋಗಾಂಕ್ಷಿಗಳಿಗೆ ಬಲೆ ಬೀಸಿದ್ದ. ತಾನು ಬಿಬಿಎಂಪಿ ನೌಕರನಾಗಿದ್ದು, ಹಣ ಕೊಟ್ಟರೆ ನೇರ ನೇಮಕಾತಿ ಮಾಡಿಸುವುತಿನಿ ಅಂತ ಹೇಳ್ಕೋತಿದ.ಅಭ್ಯರ್ಥಿ ಗಳಿಂದ ಪೋನ್ ಫೇ ಮೂಲಕ 3 ಸಾವಿರ ಹಣ ಪಾವತಿಸಿಕೊಳುತಿದ ಇದೇ ರೀತಿ 200 ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳಿಂದ 6 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದ.
ಆರೋಪಿ ಹಣ ಪಡೆದುಕೊಂಡ ಬಳಿಕ ಬಿಬಿಎಂಪಿ ಲೋಗೊವನ್ನ ಗೂಗಲ್ ನಲ್ಲಿ ಡೌನ್ ಲೋಡ್ ಮಾಡಿ ನಕಲಿ ನೇಮಕಾತಿ ಆದೇಶ ಪ್ರತಿಯನ್ನ ಉದ್ಯೋಗಾಂಕ್ಷಿಗಳ ವಾಟ್ಸಾಪ್ ಗಳಿಗೆ ಕಳುಹಿಸುತ್ತಿದ್ದ. ಅಸಲಿ ನೇಮಕಾತಿ ಆದೇಶ ಪತ್ರವೆಂದು ನಂಬಿ ಬಿಬಿಎಂಪಿ ಕಚೇರಿಗೆ ಹೋದಾಗ ಆರೋಪಿ ಇಂದ ಮೋಸ ಹೋಗಿರುದು ಗೊತ್ತಾಗಿದೆ ಸಂದೀಪ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ
ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಹಣವನ್ನ ಗರ್ಲ್‌ಫ್ರೆಂಡ್ ಗೆ ವಿನಿಯೋಗ ಮಾಡಿದ್ದಾನೆ. ಇದುವರೆಗೂ ಸುಮಾರು 6 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ್ದು ಈ ಬಗ್ಗೆ ಪ್ರಶ್ನಿಸಿದರೆ ಪ್ರಿಯತಮೆಗೆ ನೀಡಿರುವುದಾಗಿ ಒಪಿಕೋಡಿದನೇ ಸದ್ಯ ನಕಲಿ ನೇಮಕಾತಿಪತ್ರಗಳು, ಹಣ ಪಡೆದಿರುವ ಬಗ್ಗೆ ಮೊಬೈಲ್ ಸ್ಕ್ರಿನ್ ಶಾಟ್ ವಶಕ್ಕೆ ಪರಿಶೀಲನೆ ನಡೆಸುತಿದಾರೆ.
The post Bangalore: ಮಾರ್ಷಲ್ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ…! appeared first on Ain Live News.