ಬೆಂಗಳೂರು: ಕರ್ನಾಟಕ ರಾಜ್ಯ ಬಜೆಟ್ 2026-27ರಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಭಾರಿ ಮೂಲಸೌಕರ್ಯ ಯೋಜನೆಗಳನ್ನು ಘೋಷಿಸಲಾಗಿದೆ. “ಬೆಂಗಳೂರು ವಿಶ್ವದ ಅತ್ಯುತ್ತಮ ಜೀವನಮಟ್ಟದ ನಗರವಾಗಬೇಕು” ಎಂಬ ಗುರಿಯೊಂದಿಗೆ ಸರ್ಕಾರ ಸಾರಿಗೆ, ರಸ್ತೆ, ನೀರು ಸರಬರಾಜು, ನಗರ ಆಡಳಿತ ಹಾಗೂ ಪರಿಸರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ.
ಈಗಾಗಲೇ ಕೈಗೊಂಡಿರುವ ಪ್ರಮುಖ ಕಾಮಗಾರಿಗಳು
2025-26 ಆರ್ಥಿಕ ವರ್ಷದಲ್ಲಿ ಬೆಂಗಳೂರಿನಲ್ಲಿ ಹಲವು ಪ್ರಮುಖ ಯೋಜನೆಗಳು ಕೈಗೊಳ್ಳಲಾಗಿದೆ.
• ಐದು ನಗರ ಪಾಲಿಕೆಗಳಲ್ಲಿ ವಾರ್ಡ್ ರಸ್ತೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ – ₹1,255 ಕೋಟಿ
• 158 ಕಿಮೀ ರಸ್ತೆಗಳಿಗೆ ವೈಟ್ಟಾಪಿಂಗ್ – ₹1,700 ಕೋಟಿ
• ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆ ಅಭಿವೃದ್ಧಿ – ₹1,936 ಕೋಟಿ
• ಸಿಲ್ಕ್ ಬೋರ್ಡ್ ಜಂಕ್ಷನ್ ರಿಂದ ಕೆ.ಆರ್.ಪುರಂ ಮೆಟ್ರೋವರೆಗೆ ಔಟರ್ ರಿಂಗ್ ರೋಡ್ ಕಾರಿಡಾರ್ ಅಭಿವೃದ್ಧಿ – ₹450 ಕೋಟಿ
• ಸ್ಟಾರ್ಮ್ ವಾಟರ್ ಡ್ರೇನ್ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗಳು – ₹273 ಕೋಟಿ
ಬೆಂಗಳೂರು ಆಡಳಿತಕ್ಕೆ ಹೊಸ ವ್ಯವಸ್ಥೆ
ನಗರ ಆಡಳಿತವನ್ನು ಹೆಚ್ಚು ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಐದು ನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ.
ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಅನುದಾನವನ್ನು ₹3,000 ಕೋಟಿಯಿಂದ ₹7,000 ಕೋಟಿಗೆ ಹೆಚ್ಚಿಸಲಾಗಿದೆ, ಈ ಅನುದಾನವನ್ನು ಮುಂದುವರಿಸಲಾಗುತ್ತದೆ.

ರಸ್ತೆ ಮತ್ತು ಸಂಚಾರ ಅಭಿವೃದ್ಧಿ
ಮುಂದಿನ ಮೂರು ವರ್ಷಗಳಲ್ಲಿ:
• 450 ಕಿಮೀ ರಸ್ತೆಗಳಿಗೆ ವೈಟ್ಟಾಪಿಂಗ್ – ₹3,000 ಕೋಟಿ
• 175 ಜಂಕ್ಷನ್ಗಳ ಸುಂದರೀಕರಣ
• 500 ಕಿಮೀ ಪಾದಚಾರಿ ಮಾರ್ಗಗಳ ಅಭಿವೃದ್ಧಿ
• 100 ಸ್ಕೈವಾಕ್ ನಿರ್ಮಾಣ
ಇದರ ಜೊತೆಗೆ ವಿಶ್ವ ಬ್ಯಾಂಕ್ ಸಹಾಯದಿಂದ ₹2,000 ಕೋಟಿ ವೆಚ್ಚದಲ್ಲಿ ಸ್ಟಾರ್ಮ್ ವಾಟರ್ ಡ್ರೇನ್ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ.
ನಮ್ಮ ಮೆಟ್ರೋ ವಿಸ್ತರಣೆ
ನಮ್ಮ ಮೆಟ್ರೋ ಈಗ ದೇಶದ ಎರಡನೇ ದೊಡ್ಡ ಮೆಟ್ರೋ ಜಾಲವಾಗಿದೆ.
• ಪ್ರಸ್ತುತ 96 ಕಿಮೀ ಮೆಟ್ರೋ ಮಾರ್ಗ ಕಾರ್ಯಾಚರಣೆ
• ಪ್ರತಿದಿನ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಪ್ರಯೋಜನ
• 2026-27ರಲ್ಲಿ 41 ಕಿಮೀ ಹೊಸ ಮೆಟ್ರೋ ಮಾರ್ಗ ಪೂರ್ಣಗೊಳಿಸುವ ಗುರಿ
• ಇದರಿಂದ 15 ಲಕ್ಷ ಪ್ರಯಾಣಿಕರಿಗೆ ಪ್ರಯೋಜನ
ಅದರ ಜೊತೆಗೆ ಔಟರ್ ರಿಂಗ್ ರೋಡ್ ಮೆಟ್ರೋ ವಿಯಾಡಕ್ಟ್ ಪಕ್ಕದಲ್ಲಿ 9 ಕಿಮೀ ಉದ್ದದ ಪಾದಚಾರಿ ಮಾರ್ಗವನ್ನು ₹160 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.
ಕಾವೇರಿ ಹಂತ–VI ನೀರು ಯೋಜನೆ
ಬೆಂಗಳೂರು ನಗರದ ಸುಮಾರು 1.40 ಕೋಟಿ ಜನರಿಗೆ ನೀರು ಪೂರೈಸಲು ಕಾವೇರಿ ಯೋಜನೆಯ ಹಂತ I ರಿಂದ V ಮೂಲಕ 2,225 MLD ನೀರು ಪೂರೈಕೆ ನಡೆಯುತ್ತಿದೆ.
ಇದಕ್ಕೆ ಹೆಚ್ಚುವರಿಯಾಗಿ ₹6,939 ಕೋಟಿ ವೆಚ್ಚದಲ್ಲಿ ಕಾವೇರಿ ಹಂತ–VI ಯೋಜನೆ ಜಾರಿಗೆ ತರಲಾಗುತ್ತಿದ್ದು, ಹೆಚ್ಚುವರಿ 6 TMC ನೀರು ಪೂರೈಕೆ ಮಾಡುವ ಗುರಿ ಇದೆ.
ಟನಲ್ ರಸ್ತೆ ಮತ್ತು ದೊಡ್ಡ ಕಾರಿಡಾರ್ ಯೋಜನೆಗಳು
ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಹಲವು ದೊಡ್ಡ ಯೋಜನೆಗಳು ಘೋಷಿಸಲಾಗಿದೆ.
• 73 ಕಿಮೀ ಬೆಂಗಳೂರು ಬಿಸಿನೆಸ್ ಕಾರಿಡಾರ್ – ತುಮಕೂರು ರಸ್ತೆದಿಂದ ಹೊಸೂರು ರಸ್ತೆವರೆಗೆ
• ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಹಾಗೂ ಕೆ.ಆರ್.ಪುರಂ ರಿಂದ ಮೈಸೂರು ರಸ್ತೆಯವರೆಗೆ 40 ಕಿಮೀ ಟನಲ್ ರಸ್ತೆ ಕಾರಿಡಾರ್ – ₹40,000 ಕೋಟಿ
• ಮೊದಲ ಹಂತದಲ್ಲಿ 17 ಕಿಮೀ ನಾರ್ತ್–ಸೌತ್ ಟನಲ್ ಕಾರಿಡಾರ್ – ₹17,780 ಕೋಟಿ
• ಹೆಬ್ಬಾಳ ಜಂಕ್ಷನ್ ರಿಂದ ಮೇಖ್ರಿ ಸರ್ಕಲ್ ವರೆಗೆ ಟನಲ್ ಹಾಗೂ ಎಲಿವೇಟೆಡ್ ರಸ್ತೆ – ₹2,250 ಕೋಟಿ
ಇದರ ಜೊತೆಗೆ ನೆಲಮಂಗಲ–ತಾವರೆಕೆರೆ–ಬಿಡದಿ ಇಂಟರ್ ಮೀಡಿಯೇಟ್ ರಿಂಗ್ ರೋಡ್ ನಿರ್ಮಾಣ ಯೋಜನೆ ಕೈಗೊಳ್ಳಲಾಗಿದೆ.
ನಗರಾಭಿವೃದ್ಧಿ ಮತ್ತು ಡಿಜಿಟಲ್ ಆಡಳಿತ
• ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ (ಹಂತ-4) – ₹3,885 ಕೋಟಿ
• ಈ ವರ್ಷ ಹೆಚ್ಚುವರಿಯಾಗಿ ₹500 ಕೋಟಿ ಅನುದಾನ
• e-Aasthi ಮತ್ತು ಏಕೀಕೃತ ಪ್ರಾಪರ್ಟಿ ಟ್ಯಾಕ್ಸ್ ವ್ಯವಸ್ಥೆ ಜಾರಿ
• ಎಸ್ಟೇಟ್ ಮ್ಯಾನೇಜ್ಮೆಂಟ್ ರೂಲ್ಸ್ 2026 ಜಾರಿ
ಆರೋಗ್ಯ, ಹಸಿರು ಮತ್ತು ವಿದ್ಯಾರ್ಥಿ ಯೋಜನೆಗಳು
• ಗೋವಿಂದರಾಜನಗರ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದಯ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ – ₹15 ಕೋಟಿ
• 100 ಮಿಯಾವಾಕಿ ಪಾರ್ಕ್ಗಳು ನಿರ್ಮಾಣ
• ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ಗಳು – ಬೆಂಗಳೂರಿನಲ್ಲಿ 2
