Home ಬೆಂಗಳೂರು ನಗರ ಮಲಬಾರ್ ಬ್ಯಾಂಡೆಡ್ ಸ್ವಾಲೋಟೇಲ್ ಚಿಟ್ಟೆ ಸಂರಕ್ಷಿಸಲು ಆನ್‌ಲೈನ್‌ ವೆಬಿನಾರ್‍ ಆಯೋಜನೆ

ಮಲಬಾರ್ ಬ್ಯಾಂಡೆಡ್ ಸ್ವಾಲೋಟೇಲ್ ಚಿಟ್ಟೆ ಸಂರಕ್ಷಿಸಲು ಆನ್‌ಲೈನ್‌ ವೆಬಿನಾರ್‍ ಆಯೋಜನೆ

41
0

ಬೆಂಗಳೂರು:

ಪಶ್ಚಿಮಘಟ್ಟಗಳಿಗೆ ಸ್ಥಳೀಯವಾಗಿರುವ ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972, ರ ಷೇಡ್ಯೂಲ್ -1 ರಲ್ಲಿ ಬರುವ ಮಲಬಾರ್ ಬ್ಯಾಂಡೆಡ್ ಸ್ವಾಲೋಟೇಲ್ ಚಿಟ್ಟೆ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರವು ಆಜಾದಿ ಕಾ ಅಮೃತ್ ಮಹೋತ್ಸವದ 16ನೇ ವಾರವನ್ನು ಆಯೋಜಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಗುರುತಿಸಿದ್ದು, ಮಲಬಾರ್ ಬ್ಯಾಂಡೆಡ್ ಸ್ವಾಲೋಟೇಲ್ ಚಿಟ್ಟೆ ಪ್ರಭೇದಗಳ ಬಗ್ಗೆ ಹೆಚ್ಚಿನ ಸ್ಥಳೀಯತೆ ಮತ್ತು ಅದರ ಪಾಲನೆ ಪದ್ದತಿಗಳ ಬಗ್ಗೆ ಸೀಮಿತ ಜ್ಞಾನದಿಂದಾಗಿ, ಈ ಪ್ರಭೇದದ ಚಿಟ್ಟೆಗಳನ್ನು ಯಾವುದೇ ಮೃಗಾಲಯಗಳಲ್ಲಿ ಇರಿಸಲಾಗಿಲ್ಲ. ಭಾರತದಲ್ಲಿನ ಪ್ರಾಣಿಸಂಗ್ರಹಾಲಯಗಳು ಈಗ ಸಾಮಾನ್ಯ ಪ್ರಭೇದಗಳೊಂದಿಗೆ ಚಿಟ್ಟೆ ಉದ್ಯಾನವನ್ನು ಸ್ಥಾಪಿಸುವ ಪ್ರಯೋಗವನ್ನು ಮಾಡುತ್ತಿವೆ. ಅದು ಸಂದರ್ಶಕರು ಮತ್ತು ಮಕ್ಕಳಿಗೆ ಜನಪ್ರಿಯವಾಗಲಿದೆ.

ಪರಿಸರ ವ್ಯವಸ್ಥೆಯಲ್ಲಿ ಸಮತೋಲನವನ್ನು ಕಾಪಾಡುವಲ್ಲಿ ಚಿಟ್ಟೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ಈ ವಾರದ ಸುದೀರ್ಘ ಕಾರ್ಯಕ್ರಮದಲ್ಲಿ ಚಿಟ್ಟೆಗಳನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ತಿಳಿಯಲು ಬನ್ನೇರುಘಟ್ಟ ಜೈವಿಕ ಉದ್ಯಾನವನದೊಂದಿಗೆ ಕೈಜೋಡಿಸಲು ಪ್ರತಿಯೊಬ್ಬರನ್ನು ಆಹ್ವಾನಿಸಲಾಗಿದೆ.

ಮಲಬಾರ್ ಬ್ಯಾಂಡೆಡ್ ಸ್ವಾಲೋಟೇಲ್ ಚಿಟ್ಟೆ ಮತ್ತು ನಾವು ಅವುಗಳನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಆನ್ಲೈಾನ್ ವೆಬಿನಾರ್ಗಾಳನ್ನು ನಡೆಸಲಾಗುವುದು. ಹಾಗೂ ಆನ್ಲೈಆನ್ ಮೂಲಕ ರಸಪ್ರಶ್ನೆ, ಚಿತ್ರಕಲೆ, ಕರಕುಶಲ, ಛಾಯಚಿತ್ರ ಮತ್ತು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿರುತ್ತದೆ. ಅದರಂತೆ ದಿನಾಂಕ: 29-06-2021 ರಂದು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗುವುದು. ಈ ಸಂಬಂಧ ಆನ್ ಲೈನ್ಲಿಂೈಕ್ ಅನ್ನು ವೆಬ್ಸೈಲಟ್ (https://bannerghattabiologicalpark.org) ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ನೀಡಲಾಗುವುದು. ಚಿತ್ರಕಲೆ ಮತ್ತು ಕರಕುಶಲ ಸ್ವರ್ಧೆಗೆ ಸಂಬಂಧಿಸಿದ ವಿವರಗಳನ್ನು ಜುಲೈ 1 ರ ಒಳಗೆ ಹಾಗೂ ಛಾಯಚಿತ್ರ ಮತ್ತು ಭಾಷಣ ಸ್ಪರ್ಧೆಗೆ ಸಂಬಂಧಿಸಿದ ವಿವರಗಳನ್ನು educationbbp@gmail.com ಗೆ ಇ-ಮೈಲ್ ಮೂಲಕ ಕಳುಹಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here