‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಶೋನಲ್ಲಿ ಹಲವು ಬಗೆಯ ಟ್ವಿಸ್ಟ್ಗಳನ್ನು ನೀಡಲಾಗುತ್ತಿದೆ. ಈ ವಾರ ಅನೇಕ ಸ್ಪರ್ಧಿಗಳು ಅವರ ಫ್ಯಾಮಿಲಿ ಸದಸ್ಯರನ್ನು ಭೇಟಿ ಆಗುವ ಚಾನ್ಸ್ ಪಡೆದಿದ್ದರು. ಆದರೆ ಕೆಲವರು ಟಾಸ್ಕ್ನಲ್ಲಿ ಉತ್ತಮವಾಗಿ ಪರ್ಫಾರ್ಮ್ ಮಾಡದ ಕಾರಣದಿಂದ ಕುಟುಂಬದವರನ್ನು ಭೇಟಿಯಾಗುವ ಅವಕಾಶ ಕೈತಪ್ಪಿ ಹೋಗುವ ಸಂದರ್ಭ ಎದುರಾಯಿತು. ಈ ವೇಳೆ ‘ಒಂದೇ ಒಂದು ಚಾನ್ಸ್ ಕೊಡಿ ಬಿಗ್ ಬಾಸ್’ ಎಂದು ಸ್ಪರ್ಧಿಗಳು ಗೋಗರೆದಿದ್ದಾರೆ. ಅದರ ಪ್ರೋಮೋವನ್ನು ಕಲರ್ಸ್ ಕನ್ನಡ (Colors Kannada) ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
