ಬೆಂಗಳೂರು;- ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಹರ್ಷ ಎಂ ಬಂಧಿತ ಆರೋಪಿ.
ಆರೋಪಿಯು, ಸುಮಾರು 200 ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿದ್ದ. ತಾನೂ ಬಿಬಿಎಂಪಿಯಲ್ಲಿ ಕೆಲಸ ಮಾಡುವುದಾಗಿ ಸುಳ್ಳು ಹೇಳುತ್ತಿದ್ದ. 3000 ನೀಡಿದ್ರೆ ನೇರ ನೇಮಕಾತಿ ಮಾಡಿಸುವುದಾಗಿ ಹೇಳುತ್ತಿದ್ದ. ನಕಲಿ ನೇಮಕಾತಿ ಪತ್ರ ನೀಡಿ ವಂಚಿಸುತ್ತಿದ್ದ.
ಪೋನ್‌ಪೇ ಮೂಲಕ ಆರೋಪಿ ಹಣ ಪಡೆದುಕೊಳ್ಳುತ್ತಿದ್ದ. ಈತ ಎಸ್ ಎಲ್‌ಸಿ ಓದಿದ್ದಾನೆ ಎನ್ನಲಾಗಿದೆ.
ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿಕೆ ನೀಡಿದ್ದು, ಆರೋಪಿಯನ್ನ ಬಂಧನ ಮಾಡಲಾಗಿದೆ. ಸಾರ್ವಜನಿಕರು ಇಂತಹವರಿಂದ ದೂರ ಇರಬೇಕು ಬಿಬಿಎಂಪಿ ಇಂತಹ ಯಾವುದೇ ನೇಮಕಾತಿಯನ್ನ ಮಾಡುತ್ತಿಲ್ಲ ಎಂದರು.
The post BBMPಯಲ್ಲಿ ಮಾರ್ಷಲ್ ನೌಕರಿ ಕೊಡಿಸುವುದಾಗಿ ವಂಚನೆ – ಖತರ್ನಾಕ್ ಆರೋಪಿ ಸೆರೆ appeared first on Ain Live News.