Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಕೋವಿಡ್‌ ಚಿಕಿತ್ಸೆಗೆ ಜನವರಿ 16ರ ವೇಳೆಗೆ 12 ಸಾವಿರ ಹಾಸಿಗೆ ಸಜ್ಜುಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ
  • ಬೆಂಗಳೂರು ನಗರ

ಕೋವಿಡ್‌ ಚಿಕಿತ್ಸೆಗೆ ಜನವರಿ 16ರ ವೇಳೆಗೆ 12 ಸಾವಿರ ಹಾಸಿಗೆ ಸಜ್ಜುಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

The Bengaluru Live January 6, 2022 6:00 PM 1 minute read
BBMP Chief Commissioner directs to equip 12,000 beds for Covid treatment by January 16

ಕೋವಿಡ್‌ ಚಿಕಿತ್ಸೆಗೆ ಜನವರಿ 16ರ ವೇಳೆಗೆ 12 ಸಾವಿರ ಹಾಸಿಗೆ ಸಜ್ಜುಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಆದೇಶದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಜನವರಿ 16ರ ವೇಳೆಗೆ 10,000 ರಿಂದ 12,000 ಹಾಸಿಗೆಗಳು ಲಭ್ಯವಿರಬೇಕು. ಈ ಸಂಬಂಧ ನೋಡಲ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡಲು ಆಸ್ಪತ್ರೆಗಳಿಗೆ ಸೂಚನೆ ನೀಡಬೇಕು. ಜೊತೆಗೆ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗಗಳು ಲಭ್ಯ ಇವೆ, ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಎಷ್ಟು ಖಾಲಿಯಿವೆ ಎಂಬುದರ ನಿಖರ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಆಸ್ಪತ್ರೆ ಹಾಸಿಗೆ ನಿರ್ವಹಣಾ ವ್ಯವಸ್ಥೆ (ಸಿಎಚ್‌ಬಿಎಂಎಸ್) ಕುರಿತು ವರ್ಚುವಲ್ ರೂಪದಲ್ಲಿ ಗುರುವಾರ ಏರ್ಪಡಿಸಿದ್ದಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯ ಹೆಚ್ಚಳವು ಜನರಲ್ಲಿ ಭೀತಿಯನ್ನುಂಟು ಮಾಡಬಹುದು. ಆದರೆ, ಯಾರೊಬ್ಬರೂ ಭಯಪಡುವ ಅವಶ್ಯಕತೆಯಿಲ್ಲ. ಸರ್ಕಾರದ ಆದೇಶದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ರೀತಿಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿಕೊಂಡಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿರುತ್ತದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಆಸ್ಪತ್ರೆ ಹಾಸಿಗೆ ನಿರ್ವಹಣಾ ವ್ಯವಸ್ಥೆ(CHBMS)ಗೆ ಸಂಬಂಧಿಸಿದಂತೆ ಇಂದು ಸಭೆ ನಡೆಯಿತು‌.
ಸಭೆಯಲ್ಲಿ ಸಿ.ಹೆಚ್‌.ಬಿ.ಎಂ.ಎಸ್ ತಂಡ ನಾಯಕರಾದ ಶ್ರೀ ಕುಮಾರ್ ಪುಷ್ಕರ್, ಸಿ.ಹೆಚ್‌.ಬಿ.ಎಂ.ಎಸ್ ತಂಡದ ಸದಸ್ಯರಾದ ಬಿಶ್ವಜಿತ್ ಮಿಶ್ರ, ಹೆಚ್.ಪಿ.ಮಿಶ್ರಾ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

— Gaurav Gupta (@BBMPCOMM) January 6, 2022

ನಗರದಲ್ಲಿ ಪ್ರತಿನಿತ್ಯ ಸುಮಾರು 60,000 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಪ್ರಮಾಣ ಪ್ರತಿನಿತ್ಯ 20 ರಿಂದ 60ಕ್ಕೆ ಏರಿಕೆಯಾಗಿದ್ದು, ಸೋಂಕಿತ ವ್ಯಕ್ತಿ ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಪಾಲಿಕೆಯ ಟೆಲಿ ಟ್ರಯಾಜಿಂಗ್ ತಂಡ ಹಾಗೂ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಮೊಬೈಲ್ ಟ್ರಯಾಜಿಂಗ್ ತಂಡವು ಸೋಂಕಿತ ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ಅವಲೋಕಿಸಲಿದ್ದು, ಆಸ್ಪತ್ರೆಯ ಅವಶ್ಯಕತೆ ಇರುವವರಿಗೆ ಮಾತ್ರ ದಾಖಲಿಸಿ, ಉಳಿದವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರುವ ಮೂಲಕ ಚಿಕಿತ್ಸೆ ಪಡೆಯಲು ತಿಳಿಸಬೇಕು.

ಹೆಚ್ಚಿನ ಕೋವಿಡ್ ಪ್ರಕರಣಗಳಲ್ಲಿ ಎಸಿಮ್ಟಮೇಟಿಕ್ ಆಗರಲಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿರುತ್ತದೆ. ಈ ಬಗ್ಗೆ ನಾಗರೀಕರಲ್ಲಿ ಮನವರಿಕೆ ಮಾಡಬೇಕು. ಆಸ್ಪತ್ರೆಗೆ ದಾಖಲಿಸುವಂತಹ ಪ್ರಕರಣಗಳನ್ನಷ್ಟೇ ಆಸ್ಪತ್ರೆಗೆ ರವಾನಿಸಬೇಕು. ಇದಕ್ಕಾಗಿ ಟ್ರಯಾಜಿಂಗ್ ಸರಿಯಾಗಿ ನಡೆಯಬೇಕಿದ್ದು, ಟ್ರಯಾಜಿಂಗ್ ಮಾಡಲು ಬೇಕಾದ ಹೆಚ್ಚುವರಿ ಸಿಬ್ಬಂದಿಯನ್ನು ವಲಯವಾರು ನಿಯೋಜನೆ ಮಾಡಿಕೊಳ್ಳಬೇಕು. ಜೊತೆಗೆ ವಲಯ ಸಂಯೋಜಕರು ಇದರ ಬಗ್ಗೆ ನಿಗಾ ಇಡಬೇಕು ಎಂದು ಅಧಿಕಾರಿಳಿಗೆ ಸೂಚನೆ ನೀಡಿದರು.

ನಗರದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಯನ್ನು ಮೀಸಲಿಡಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಸಾಕಷ್ಟು ಹಾಸಿಗೆಗಳ ಲಭ್ಯತೆ ಇದೆ. ಯಾರೊಬ್ಬರೂ ಗಾಬರಿಪಡುವ ಅಗತ್ಯವಿಲ್ಲ. ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಾರ್ ರೂಂಗಳು ಕೂಡಲೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ನಗರದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗಾಗಿ ಅಲೆದಾಡುವುದಾಗಲಿ, ಆಕ್ಸಿಜನ್, ಐಸಿಯುಗಾಗಿ ಅಲೆದಾಡುವುದಾಗಲಿ ಆಗಬಾರದು. ಯಾವುದೇ ರೀತಿಯ ಹಾಸಿಗೆ ಸಮಸ್ಯೆ ಉದ್ಭವವಾಗದಂತೆ ಹಾಸಿಗೆ ಹಂಚಿಕೆ ವ್ಯವಸ್ಥೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

100ಕ್ಕೂ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಿ:

ನಗರದಲ್ಲಿ 100ಕ್ಕೂ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳಲ್ಲಿ ಕೂಡಲೆ ಹೆಲ್ಪ್ ಡೆಸ್ಕ್ ಗಳನ್ನು ಪ್ರಾರಂಭಿಸಬೇಕು. ನಗರದ ನಾಗರೀಕರು ಆಸ್ಪತ್ರೆಗೆ ಬಂದವೇಳೆ ಅಗತ್ಯ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಅಗತ್ಯ ಸಿಬ್ಬಂದಿ/ಸ್ವಯಂ ಸೇವಕರನ್ನು ನಿಯೋಜನೆ ಮಾಡಿಕೊಳ್ಳಿ. ಜೊತೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಸಿ.ಹೆಚ್.ಬಿ.ಎಂ.ಎಸ್ ತಂಡ ನಾಯಕರು ಶ್ರೀ ಕುಮಾರ್ ಪುಷ್ಕರ್, ಸಿ.ಹೆಚ್.ಬಿ.ಎಂ.ಎಸ್ ತಂಡದ ಸದಸ್ಯರಾದ ಬಿಶ್ವಜಿತ್ ಮಿಶ್ರ, ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ, ಎಲ್ಲಾ ವಲಯ ಆಯುಕ್ತರುಗಳು, ವಲಯ ಸಂಯೋಜಕರು, ಆಸ್ಪತ್ರೆ ನೋಡಲ್ ಅಧಿಕಾರಿಗಳು, ಮುಖ್ಯ ಆರೋಗ್ಯಾಧಿಕಾರಿ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ವಾರ್ ರೂಂ ಸಿಬ್ಬಂದಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಪಾದಯಾತ್ರೆ ತಡೆಯಲು ಗೃಹ ಸಚಿವರು ಮತ್ತೊಂದು ಜನ್ಮ ತಾಳಿ ಬರಬೇಕು: ಡಿ.ಕೆ ಶಿವಕುಮಾರ್
Next: ಮುಂದಿನ ವಾರ ಪರಿಶೀಲನೆಯ ನಂತರ COVID ನಿರ್ಬಂಧಗಳನ್ನು ಸಡಿಲಿಸುವ ಸಾಧ್ಯತೆ: ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ

Related Stories

ಸಿಂಗಸಂದ್ರದಲ್ಲಿ ಕಟ್ಟಡದ ಮುಂದೆ ವ್ಯಕ್ತಿಯೊಬ್ಬರಿಗೆ ದಂಡದ ರಸೀದಿ ನೀಡುತ್ತಿರುವ ಸಮವಸ್ತ್ರಧಾರಿ ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್
  • ಬೆಂಗಳೂರು ನಗರ
  • ಬೆಂಗಳೂರು

ಬೆಂಗಳೂರಿನಲ್ಲಿ ಕಸ ಎಸೆಯುವವರ ವಿರುದ್ಧ ಕಾರ್ಯಾಚರಣೆ: ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್‌ಗಳಿಂದ 68 ಪ್ರಕರಣ, ₹76,500 ದಂಡ ವಸೂಲಿ

The Bengaluru Live November 9, 2026 11:35 AM
ಇ-ಖಾತಾ ಮೇಳದ ವೇಳೆ ಜೆ.ಪಿ. ನಗರದ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿರುವ ಲ್ಯಾಪ್‌ಟಾಪ್ ಪರದೆಯನ್ನು ಮೂವರು ಅಧಿಕಾರಿಗಳು ನೋಡುತ್ತಿರುವುದು
  • ಬೆಂಗಳೂರು ನಗರ
  • ಬೆಂಗಳೂರು

ಇ-ಖಾತಾ ಮೇಳ: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಒಂದೇ ದಿನ 254 ಹೊಸ ಅರ್ಜಿ ಸ್ವೀಕೃತಿ, 93 ವಿಲೇವಾರಿ

The Bengaluru Live November 8, 2026 5:49 PM
ಜಾರಿ ನಿರ್ದೇಶನಾಲಯದ ಅಧಿಕೃತ ಲಾಂಛನ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಕಾಯಿನ್‌ಡಿಸಿಎಕ್ಸ್ ಮತ್ತು ಡೆಲ್ಟಾ ಎಕ್ಸ್‌ಚೇಂಜ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ಶೋಧ

The Bengaluru Live November 6, 2026 10:39 PM

Latest Post

ಲೋಕಭವನದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿಯಾದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ. ಎಂ.ಎ. ಸಲೀಂ ಬೆಂಗಳೂರಿನ ಲೋಕಭವನದ ಕೊಠಡಿಯಲ್ಲಿ ಮೇಜಿನ ಮೇಲಿನ ಪುಟ್ಟ ರಾಷ್ಟ್ರಧ್ವಜ ಮತ್ತು ಲಾಂಛನದ ಬಳಿ ಒಟ್ಟಿಗೆ ನಿಂತಿರುವ ಐದು ಮಂದಿ
  • ಕರ್ನಾಟಕ
  • ರಾಜಕೀಯ

ಲೋಕಭವನದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿಯಾದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ. ಎಂ.ಎ. ಸಲೀಂ

November 10, 2026 12:10 PM
44,250 ಕಾರ್ಟ್ರಿಡ್ಜ್ ವಶ: ಆರೋಪಿಗಳು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಛಾಯಾಚಿತ್ರಗಳಿವೆ ಎಂದ ಖರ್ಗೆ; ಆರ್‌ಎಸ್‌ಎಸ್, ಬಿಜೆಪಿಗೆ ಪ್ರಶ್ನೆ ಆರ್‌ಎಸ್‌ಎಸ್ ಸಮವಸ್ತ್ರದ ಪುರುಷರ ಸಾಲಿನಲ್ಲಿ ಮೂವರ ಸುತ್ತ ಹಸಿರು ವೃತ್ತ ಹಾಕಿದ, ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ ಗ್ರಾಫಿಕ್
  • ಕರ್ನಾಟಕ
  • ರಾಜಕೀಯ

44,250 ಕಾರ್ಟ್ರಿಡ್ಜ್ ವಶ: ಆರೋಪಿಗಳು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಛಾಯಾಚಿತ್ರಗಳಿವೆ ಎಂದ ಖರ್ಗೆ; ಆರ್‌ಎಸ್‌ಎಸ್, ಬಿಜೆಪಿಗೆ ಪ್ರಶ್ನೆ

November 10, 2026 10:51 AM
ಗೌರಿ ಲಂಕೇಶ್, ಕಲಬುರ್ಗಿ ಪ್ರಕರಣಗಳ ಕುರಿತು ಕೇರಳದಲ್ಲಿ ಭಾಷಣ: ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ; ಗೃಹ ಸಚಿವರಿಂದ ಕಾನೂನು ಸುವ್ಯವಸ್ಥೆ ನಿರ್ಲಕ್ಷ್ಯ ಎಂದು ಆರೋಪ ವೇದಿಕೆಯಲ್ಲಿ ಪುಸ್ತಕ ಹಿಡಿದಿರುವ ಪ್ರಿಯಾಂಕ್ ಖರ್ಗೆ ಮತ್ತು ಕೇಸರಿ ಶಾಲು ಧರಿಸಿದ ಬಿ.ವೈ. ವಿಜಯೇಂದ್ರ ಅಕ್ಕಪಕ್ಕ
  • ಕರ್ನಾಟಕ
  • ರಾಜಕೀಯ

ಗೌರಿ ಲಂಕೇಶ್, ಕಲಬುರ್ಗಿ ಪ್ರಕರಣಗಳ ಕುರಿತು ಕೇರಳದಲ್ಲಿ ಭಾಷಣ: ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ; ಗೃಹ ಸಚಿವರಿಂದ ಕಾನೂನು ಸುವ್ಯವಸ್ಥೆ ನಿರ್ಲಕ್ಷ್ಯ ಎಂದು ಆರೋಪ

November 10, 2026 10:51 AM
ಮೂರು ನಮ್ಮ ಮೆಟ್ರೋ ನಿಲ್ದಾಣಗಳಿಗೆ ಸುದ್ದುಗುಂಟೆಪಾಳ್ಯ, ಎನ್.ಎಸ್. ಪಾಳ್ಯ, ಬಿಳೇಕಹಳ್ಳಿ–ಐಐಎಂಬಿ ಹೆಸರಿಡಲು ಸಮಿತಿ ಮನವಿ ಕರ್ನಾಟಕ ಸರ್ಕಾರದ ಲಾಂಛನ ಮತ್ತು ಧ್ವಜಗಳ ಮುಂದೆ ಸಾಲಾಗಿ ನಿಂತಿರುವ ಪುರುಷರು
  • ಕರ್ನಾಟಕ
  • ರಾಜಕೀಯ

ಮೂರು ನಮ್ಮ ಮೆಟ್ರೋ ನಿಲ್ದಾಣಗಳಿಗೆ ಸುದ್ದುಗುಂಟೆಪಾಳ್ಯ, ಎನ್.ಎಸ್. ಪಾಳ್ಯ, ಬಿಳೇಕಹಳ್ಳಿ–ಐಐಎಂಬಿ ಹೆಸರಿಡಲು ಸಮಿತಿ ಮನವಿ

November 10, 2026 10:51 AM
‘ಅಭಿವೃದ್ಧಿ ಶೂನ್ಯ, ಪ್ರಚಾರದಲ್ಲಿ ಹೀರೋ’: ಮೂರು ವರ್ಷಗಳಲ್ಲಿ ಜಾಹೀರಾತಿಗೆ ₹473 ಕೋಟಿ ಖರ್ಚು ಮಾಡಿದ ಕರ್ನಾಟಕ ಸರ್ಕಾರ ಎಂದ ವಿಜಯೇಂದ್ರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಪತ್ರಿಕಾ ಜಾಹೀರಾತುಗಳ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಅಭಿವೃದ್ಧಿ ಶೂನ್ಯ, ಪ್ರಚಾರದಲ್ಲಿ ಹೀರೋ’: ಮೂರು ವರ್ಷಗಳಲ್ಲಿ ಜಾಹೀರಾತಿಗೆ ₹473 ಕೋಟಿ ಖರ್ಚು ಮಾಡಿದ ಕರ್ನಾಟಕ ಸರ್ಕಾರ ಎಂದ ವಿಜಯೇಂದ್ರ

November 10, 2026 10:31 AM
ಇ20 ವಿವಾದ: ರಿಜ್ವಾನ್ ಅರ್ಷದ್‌ಗೆ ಪ್ರಹ್ಲಾದ ಜೋಶಿ ತಿರುಗೇಟು; 27 ರಾಜ್ಯಗಳ 893 ಮಾದರಿಗಳು ಮಾನದಂಡದಲ್ಲಿವೆ, ಕರ್ನಾಟಕದ ಪರೀಕ್ಷಾ ಪ್ರಮಾಣಪತ್ರಗಳ ಬಗ್ಗೆ ಪ್ರಶ್ನೆ ಎಥನಾಲ್ ಮಿಶ್ರಣದ ಕುರಿತು ವಿಡಿಯೋದಲ್ಲಿ ಮಾತನಾಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
  • ಕರ್ನಾಟಕ
  • ರಾಜಕೀಯ

ಇ20 ವಿವಾದ: ರಿಜ್ವಾನ್ ಅರ್ಷದ್‌ಗೆ ಪ್ರಹ್ಲಾದ ಜೋಶಿ ತಿರುಗೇಟು; 27 ರಾಜ್ಯಗಳ 893 ಮಾದರಿಗಳು ಮಾನದಂಡದಲ್ಲಿವೆ, ಕರ್ನಾಟಕದ ಪರೀಕ್ಷಾ ಪ್ರಮಾಣಪತ್ರಗಳ ಬಗ್ಗೆ ಪ್ರಶ್ನೆ

November 10, 2026 10:02 AM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಲೋಕಭವನದ ಕೊಠಡಿಯಲ್ಲಿ ಮೇಜಿನ ಮೇಲಿನ ಪುಟ್ಟ ರಾಷ್ಟ್ರಧ್ವಜ ಮತ್ತು ಲಾಂಛನದ ಬಳಿ ಒಟ್ಟಿಗೆ ನಿಂತಿರುವ ಐದು ಮಂದಿ
  • ಕರ್ನಾಟಕ
  • ರಾಜಕೀಯ

ಲೋಕಭವನದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿಯಾದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ. ಎಂ.ಎ. ಸಲೀಂ

The Bengaluru Live November 10, 2026 12:10 PM
ಆರ್‌ಎಸ್‌ಎಸ್ ಸಮವಸ್ತ್ರದ ಪುರುಷರ ಸಾಲಿನಲ್ಲಿ ಮೂವರ ಸುತ್ತ ಹಸಿರು ವೃತ್ತ ಹಾಕಿದ, ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ ಗ್ರಾಫಿಕ್
  • ಕರ್ನಾಟಕ
  • ರಾಜಕೀಯ

44,250 ಕಾರ್ಟ್ರಿಡ್ಜ್ ವಶ: ಆರೋಪಿಗಳು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಛಾಯಾಚಿತ್ರಗಳಿವೆ ಎಂದ ಖರ್ಗೆ; ಆರ್‌ಎಸ್‌ಎಸ್, ಬಿಜೆಪಿಗೆ ಪ್ರಶ್ನೆ

The Bengaluru Live November 10, 2026 10:51 AM
ವೇದಿಕೆಯಲ್ಲಿ ಪುಸ್ತಕ ಹಿಡಿದಿರುವ ಪ್ರಿಯಾಂಕ್ ಖರ್ಗೆ ಮತ್ತು ಕೇಸರಿ ಶಾಲು ಧರಿಸಿದ ಬಿ.ವೈ. ವಿಜಯೇಂದ್ರ ಅಕ್ಕಪಕ್ಕ
  • ಕರ್ನಾಟಕ
  • ರಾಜಕೀಯ

ಗೌರಿ ಲಂಕೇಶ್, ಕಲಬುರ್ಗಿ ಪ್ರಕರಣಗಳ ಕುರಿತು ಕೇರಳದಲ್ಲಿ ಭಾಷಣ: ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ; ಗೃಹ ಸಚಿವರಿಂದ ಕಾನೂನು ಸುವ್ಯವಸ್ಥೆ ನಿರ್ಲಕ್ಷ್ಯ ಎಂದು ಆರೋಪ

The Bengaluru Live November 10, 2026 10:51 AM
ಕರ್ನಾಟಕ ಸರ್ಕಾರದ ಲಾಂಛನ ಮತ್ತು ಧ್ವಜಗಳ ಮುಂದೆ ಸಾಲಾಗಿ ನಿಂತಿರುವ ಪುರುಷರು
  • ಕರ್ನಾಟಕ
  • ರಾಜಕೀಯ

ಮೂರು ನಮ್ಮ ಮೆಟ್ರೋ ನಿಲ್ದಾಣಗಳಿಗೆ ಸುದ್ದುಗುಂಟೆಪಾಳ್ಯ, ಎನ್.ಎಸ್. ಪಾಳ್ಯ, ಬಿಳೇಕಹಳ್ಳಿ–ಐಐಎಂಬಿ ಹೆಸರಿಡಲು ಸಮಿತಿ ಮನವಿ

The Bengaluru Live November 10, 2026 10:51 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಲೋಕಭವನದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿಯಾದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಡಾ. ಎಂ.ಎ. ಸಲೀಂ
  • 44,250 ಕಾರ್ಟ್ರಿಡ್ಜ್ ವಶ: ಆರೋಪಿಗಳು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿರುವ ಛಾಯಾಚಿತ್ರಗಳಿವೆ ಎಂದ ಖರ್ಗೆ; ಆರ್‌ಎಸ್‌ಎಸ್, ಬಿಜೆಪಿಗೆ ಪ್ರಶ್ನೆ
  • ಗೌರಿ ಲಂಕೇಶ್, ಕಲಬುರ್ಗಿ ಪ್ರಕರಣಗಳ ಕುರಿತು ಕೇರಳದಲ್ಲಿ ಭಾಷಣ: ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ; ಗೃಹ ಸಚಿವರಿಂದ ಕಾನೂನು ಸುವ್ಯವಸ್ಥೆ ನಿರ್ಲಕ್ಷ್ಯ ಎಂದು ಆರೋಪ
  • ಮೂರು ನಮ್ಮ ಮೆಟ್ರೋ ನಿಲ್ದಾಣಗಳಿಗೆ ಸುದ್ದುಗುಂಟೆಪಾಳ್ಯ, ಎನ್.ಎಸ್. ಪಾಳ್ಯ, ಬಿಳೇಕಹಳ್ಳಿ–ಐಐಎಂಬಿ ಹೆಸರಿಡಲು ಸಮಿತಿ ಮನವಿ
©Copyright 2025 The Bengaluru Live All rights reserved. | MoreNews by AF themes.