ಬೆಂಗಳೂರು:
ವರದಿ: ಶೇಷ ನಾರಾಯಣ, ಪತ್ರಕರ್ತ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ 2023-2027ರ ಸಾಲಿನ ಐದು ವರ್ಷಗಳ ಅವಧಿ 17ನಿರ್ದೇಶಕ ಸ್ಥಾನಕ್ಕೆ ಸೆಪ್ಟೆಂಬರ್ 3ರಂದು ಚುನಾವಣೆ ನಡೆಯಲಿದ್ದು ಇಂದು ಎ.ಅಮೃತ್ ರಾಜ್ ರವರು ಮತ್ತು ತಂಡದವರು ಚುನಾವಣಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಡಾ.ರಾಜ್ ಕುಮಾರ್ ಗಾಜಿನಮನೆ,ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 4ಗಂಟೆವರಗೆ ಮತದಾನವಾಗಲಿದೆ. ಅಂದು ಸಂಜೆಯ ಫಲಿತಾಂಶ ಹೊರಬೀಳಲಿದೆ.
ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿರವರ ತಂಡದಲ್ಲಿ ಡಾ.ಶೋಭಾ , ಸೋಮಶೇಖರ್ ಎನ್.ಎಸ್ ಮತ್ತು ಹೆಚ್.ಕೆ.ತಿಪ್ಪೇಶ್, ಆರ್.ರೇಣುಕಾಂಬ, ವಿ.ಉಮೇಶ್, ಡಿ.ರಾಮಚಂದ್ರ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಶ್ರೀಧರ್ ಎನ್. ಹಾಗೂ ಸಂತೋಷ್ ಕುಮಾರ್ ಎಂ. ಮತ್ತು ಎನ್.ಮಂಜುನಾಥ್, ಕೆ.ನರಸಿಂಹ , ಹೆಚ್.ಬಿ.ಹರೀಶ್, ಕೆ.ಸಂತೋಷ್ ಕುಮಾರ್ ನಾಯ್ಕ್, ಬಿ.ರುದ್ರೇಶ್ ರವರು ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ ಅಧಿಕಾರಿ ಮತ್ತು ನೌಕರರ ಹಿತರಕ್ಷಣೆ ಹಾಗೂ ಸಾಮಾಜಿಕ ಸೇವಾ ಕಾರ್ಯ, ಸಮಾಜಮುಖಿ ಕೆಲಸವನ್ನು ಕಳೆದ ಐದು ವರ್ಷದ ಅವಧಿಯಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಮತ್ತು ನನ್ನ ಜೊತೆಯಲ್ಲಿ ಸಂಘದ ಪದಾಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳ ನೌಕರರ ಸಹಕಾರ, ಬೆಂಬಲದಿಂದ ಸಂಘವು ಹಲವಾರು ಸಾಧನೆಗಳಿಗೆ ಸಾಕ್ಷ್ಮೀಯಾಯಿತು. ಅಧಿಕಾರಿ, ನೌಕರರ ಬಡ್ತಿ ಮತ್ತು ನೌಕರರ ಹಿತರಕ್ಷಣೆಗೆ ಸಂಘವು ನ್ಯಾಯಯುತ ಹೋರಾಟ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಆರೋಗ್ಯ ಸುರಕ್ಷತೆಗಾಗಿ ಕಾಲಕಾಲಕ್ಕೆ ಸಂಘದ ವತಿಯಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಬಿಬಿಎಂಪಿ ಇಲಾಖೆ ನಡುವೆ ಸಂಪರ್ಕ ಸೇತುವೆಯಾಗಿ ಜನರ ಉತ್ತಮ ಆಡಳಿತದ ಜೊತೆಯಲ್ಲಿ ಸಹಕಾರ ನೀಡುತ್ತಿದೆ. ಮರದ ಕೊಂಬೆ ಬಿದ್ದು ಮೃತ ಪಟ್ಟ ಕುಟುಂಬ 5ಲಕ್ಷ ಸಹಾಯ ಹಸ್ತ, ಧರ್ಮಸ್ಥಳ ದೇವಸ್ಥಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಗ ಸಂಘದ ವತಿಯಿಂದ 1ಲಕ್ಷ ಲೀಟರ್ ಕುಡಿಯುವ ನೀರು ನೀಡಲಾಯಿತು ಎಂದು ಹೇಳಿದರು.
ಕೊಡಗು ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಸಂತ್ರಸ್ಥ ಕುಟುಂಬಗಳಿಗೆ ಸಾವಿರಾರು ದಿನಸಿ ಕಿಟ್ ನೀಡಲಾಯಿತು. ಪರಿಸರ ಉಳಿಸಿ ಅಂದೋಲನ ಪ್ರಯುಕ್ತ ಬೀದಿ ನಾಟಕ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು. ಕನ್ನಡ ನಾಡಿನ ಕಂಪು ಉತ್ತರಪ್ರದೇಶ ಕಾಶಿಯಲ್ಲಿ ಭವ್ಯವಾದ ಸಂಭ್ರಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಯಶ್ವಸಿಯಾಗಿ ಜರುಗಿತು , ಸಾಧಕರಿಗೆ ಸನ್ಮಾನಿಸಲಾಯಿತು ಎಂದು ಸ್ಮರಿಸಿದ್ದರು.
ಐದು ವರ್ಷದ ಸಂಘದ ಯಶ್ವಸಿ ಆಡಳಿತ, ಸಾಧನೆಗಳು ಶ್ರೀ ರಕ್ಷೆಯಾಗಿದೆ ಚುನಾವಣೆಯಲ್ಲಿ ಬಾರಿ ಬಹುಮತದಿಂದ ನಮ್ಮ ತಂಡ ಆಯ್ಕೆಯಾಗಲಿದೆ ಎಂದು ಹೇಳಿದರು.