BBMP Elections: Former BJP Minister ST Somashekhar's supporters join Congress party in DK Shivakumar's presence
ಬೆಂಗಳೂರು:
ವರದಿ: ಶೇಷ ನಾರಾಯಣ, ಪತ್ರಕರ್ತ
ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳು ಮತ್ತು ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ ಹಾಗೂ ಬಿಜೆಪಿ ಮುಖಂಡರುಗಳು ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಹೇರೋಹಳ್ಳಿ ರಾಜಣ್ಣ, ಆರ್ಯ ಶ್ರೀನಿವಾಸ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಡಿ.ಹನುಮಂತಯ್ಯ, ಚೋಳನಾಯನಹಳ್ಳಿ ಗ್ರಾಮ ಪಂಚಾಯಿತ್ ಸದಸ್ಯರಾದ ಆನಂದಸ್ವಾಮಿ, ರಾಜ್ಯ ಜಿಲ್ಲಾ ಕ್ರಶರ್ ಮಾಲೀಕರ ಸಂಘದ ಅಧ್ಯಕ್ಷರಾದ ಡಿ.ಸಿದ್ದರಾಜು, ಅಜ್ಜಂನಹಳ್ಳಿ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷರಾದ ರುದ್ರಪ್ಪ ಬಿಜೆಪಿ ಮುಖಂಡರಾದ ಹನುಮಂತೇಗೌಡ, ಚಿಕ್ಕರಾಜು, ಶಿವಮಾದಯ್ಯ ರವರು ಸೇರ್ಪಡೆಯಾದರು.

ಶಾಸಕರುಗಳಾದ ಆನೇಕಲ್ ಶಿವಣ್ಣ,ಶ್ರೀನಿವಾಸ್, ಶರತ್ ಬಚ್ಚೇಗೌಡರವರು ಉಪಸ್ಥಿತರಿದ್ದರು.
ಡಿ.ಕೆ.ಶಿವಕುಮಾರ್ ರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಜನತೆಯ ಆಶೀರ್ವಾದ ಫಲದಿಂದ 136 ಶಾಸಕರು ಗೆದ್ದಿದ್ದಾರೆ,1 ಪಕ್ಷೇತರ ಸದಸ್ಯರ ಬೆಂಬಲವಿದೆ. ಎಸ್.ಟಿ.ಸೋಮಶೇಖರ್ ಬಸ್ ಹೋದ ಮೇಲೆ ಟಿಕೇಟು ತೆಗೆದುಕೊಳ್ಳಬೇಡಿ ಎಂದು ಚುನಾವಣೆ ಮುಂಚೆ ಹೇಳಿದ್ದೇ . ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ಅವರು ಹೇಳಿದರು.
