ಬೆಂಗಳೂರು:
ಸುದ್ದಿ ಮೂಲ: ಶೇಷ ನಾರಾಯಣ, ಪತ್ರಕರ್ತ
ಬಿಬಿಎಂಪಿ ಕೇಂದ್ರ ಕಛೇರಿ ಡಾ||ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಲ್ಲಿ 2023ನೇ ಸಾಲಿನ ಐದು ವರ್ಷದ ಅವಧಿಗೆ 17ನಿರ್ದೇಶಕರ ಸ್ಥಾನಗಳಿಗೆ ಆಯ್ಕೆಗೆ ಇಂದು ಮತದಾನ ನಡೆಯುತ್ತಿದೆ.
17 ಸ್ಥಾನಗಳಿಗೆ 35 ಸ್ಪರ್ಧೆ ಮಾಡಿದ್ದಾರೆ ಇಬ್ಬರು ಮಹಿಳಾ ಅಭ್ಯರ್ಥಿಗಳು ಎ.ಅಮೃತ್ ರಾಜ್ ತಂಡಕ್ಕೆ ಬೆಂಬಲಿಸಿ ಕಣದಿಂದ ಹಿಂದೆ ಸರಿದಿದ್ದಾರೆ.
3000ಸದಸ್ಯರು ಇರುವ ಸಂಘದಲ್ಲಿ ಇಂದು 9ಗಂಟೆಯಿಂದ ಮತದಾನ ಆರಂಭವಾಗಿದೆ ಸಂಜೆ 4ಗಂಟೆಗೆ ಮತದಾನ ಮುಕ್ತಾಯವಾಗಿ ನಂತರ ಮತದಾನ ಏಣಿಕೆಯಾಗಿ ಸಂಜೆ ಫಲಿತಾಂಶ ಪ್ರಕಟನೆಯಾಗಲಿದೆ.
ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿ ರವರ ತಂಡವು ಬಿಬಿಎಂಪಿಯ 8 ವಲಯಗಳಲ್ಲಿ ಸದಸ್ಯ ಮತದಾರರನ್ನು ನೇರ ಭೇಟಿ ಕಳೆದ ಐದು ವರ್ಷದ ಸಾಧನೆ ಮತ್ತು ಮುಂಬರುವ ದಿನಗಳಲ್ಲಿ ಸಂಘದ ಸಂಘಟನೆ ಮತ್ತು ಅಧಿಕಾರಿ, ನೌಕರರ ಹಿತರಕ್ಷಣೆಗಾಗಿ ಆರೋಗ್ಯ ಸಂಜೀವಿನಿ, ಬಡ್ತಿ ಮತ್ತು ನೇಮಕಾತಿ ಕುರಿತು ಸಂಘದ ಧ್ಯೇಯೋದ್ದೇಶಗಳನ್ನ ಮತದಾರರಿಗೆ ಮನವರಿಕೆ ಮಾಡಿ ಮತಯಾಚನೆ ಮಾಡಿದ್ದಾರೆ.
ಎ.ಅಮೃತ್ ರಾಜ್ ರವರ ತಂಡದಲ್ಲಿ ಪ್ರಬಲ ವ್ಯಕ್ತಿಗಳು ಸ್ಪರ್ಧೆ ಮಾಡಿರುವುದರಿಂದ ತಂಡದ ಗೆಲುವು ಸುಲಭವಾಗಿದೆ .