BBMP Engineer-in-Chief BS Prahlad is collecting money in Deputy Chief Minister D.K.Shivakumar's name: Contractor Association President Kempanna
ಬೆಂಗಳೂರು:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಯ (ಬಿಬಿಎಂಪಿ) ಪ್ರಧಾನ ಎಂಜಿನಿಯರ್ ಗುತ್ತಿಗೆದಾರರಿಂದ ವಸೂಲಿಗೆ ಇಳಿದಿದ್ದಾರೆ ಎಂದು ಡಿ. ಕೆಂಪಣ್ಣ ಆರೋಪ ಮಾಡಿದ್ದಾರೆ.
ಶಿವಕುಮಾರ್ ಹೆಸರಿನಲ್ಲಿ ಬಿಬಿಎಂಪಿಯ ಪ್ರಧಾನ ಎಂಜಿನಿಯರ್ ಬಿ. ಎಸ್. ಪ್ರಹ್ಲಾದ್ ಅವರು ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರಹ್ಲಾದ್ ಭ್ರಷ್ಟ ಅಧಿಕಾರಿ. ಅವರು ಇರುವವರೆಗೂ ಬಿಬಿಎಂಪಿ ಉದ್ಧಾರ ಆಗುವುದಿಲ್ಲ’ ಎಂದು ದೂರಿದರು.
ಪ್ರಹ್ಲಾದ್ ಬಂದ ನಂತರ ಬಿಬಿಎಂಪಿಯಿಂದ ಯಾವುದೇ ದೊಡ್ಡ ಕೆಲಸ ನಡೆದಿಲ್ಲ. ಸರ್ಕಾರದ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುವುದೇ ಅವರ ಕೆಲಸವಾಗಿದೆ. ಬಿಬಿಎಂಪಿಯನ್ನು ಹಾಳು ಮಾಡುತ್ತಿರುವುದೇ ಆ ವ್ಯಕ್ತಿ. ಅವರನ್ನು ಅಲ್ಲಿ ಉಳಿಸಿಕೊಳ್ಳುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಅದನ್ನು ನಿರ್ಧರಿಸಲು ನಾನು ಸೂಕ್ತ ವ್ಯಕ್ತಿಯಲ್ಲ’ ಎಂದರು.
‘ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದೇವೆ. ಸ್ವಲ್ಪ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ. ಅದರಿಂದ ನಮಗೆ ಸಂಪೂರ್ಣ ಸಮಾಧಾನ ಇಲ್ಲ. ಡಿಸೆಂಬರ್‌ನಲ್ಲಿ ಮತ್ತೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.
